ಅ.20: ಕೆಸಿಡಿಸಿ ಪುತ್ತೂರು ವಿಭಾಗದ ಗೇರು ನೆಡುತೋಪಗಳ ಗೇರುಫಲೋತ್ಪನ್ನಗಳ ಇ-ಹರಾಜು ನೋಂದಾವಣೆ, ನವೀಕರಣ

0

ಪುತ್ತೂರು : 2022-23ನೇ ಸಾಲಿನಲ್ಲಿ ಜರುಗಲಿರುವ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಪುತ್ತೂರು ವಿಭಾಗದ ವ್ಯಾಪ್ತಿಯಲ್ಲಿನ ಗೇರು ನೆಡುತೋಪಗಳ ಗೇರುಫಲೋತ್ಪನ್ನಗಳನ್ನು ಇ-ಹರಾಜು ವ ಇ-ಟೆಂಡರ್ ಮೂಲಕ ಮಾರಾಟ ಮಾಡಲಾಗುವುದು. ಈ ಪ್ರಯುಕ್ತ ಇ-ಪ್ರೊಕ್ಯೂಮೆಂಟ್ ಪೋರ್ಟಲ್‌ನಲ್ಲಿ ನೋಂದಾವಣೆ/ ನವೀಕರಣ ಮಾಡಿಸಿಕೊಳ್ಳುವ ಬಗ್ಗೆ ಅ.20ರಂದು ಪೂವಾಹ್ನ 10 ಗಂಟೆಗೆ ಬೆಂಗಳೂರು ಟೆಂಡರ್ ಡಿಎಸ್‌ಸಿ, ಸರ್ವಿಸಸ್‌ನ ಉಮಾಕಾಂತ್(Tender DSC Services)ರವರು ಪುತ್ತೂರು ವಿಭಾಗದ ವಿಭಾಗೀಯ ಕಚೇರಿಯಲ್ಲಿ ಲಭ್ಯವಿರುತ್ತಾರೆ. ಇ-ಹರಾಜು/ ಇ-ಟೆಂಡರ್‌ನಲ್ಲಿ ಭಾಗವಹಿಸಲು ಇಚ್ಚಿಸುವ ಪ್ರತಿಯೊಬ್ಬ ಗುತ್ತಿಗೆದಾರರು ಸದ್ರಿ ದಿನದಂದು ತಪ್ಪದೇ ಹಾಜರಾಗಬೇಕು. ಅಲ್ಲದೇ ಈ ಮೊದಲು ಈಗಾಗಲೇ ಎರಡು ವರ್ಷದ ಅವಧಿಗೆ ಡಿಜಿಟಲ್ ಹೊಂದಿದವರು ಕೂಡಾ ಡಿಜಿಟಲ್ ಸರ್ಟಿಫಿಕೇಟ್ ಹಾಗೂ ಪಾಸ್‌ವರ್ಡ್ ದಾಖಲೆಗಳಿದ್ದಲ್ಲಿ ಆದರೊಂದಿಗೆ ತಪ್ಪದೇ ಸದರಿ ದಿನಾಂಕದMದು ಹಾಜರಿರಬೇಕು. ಅಥವಾ ಇತರ ಇ ನೋಂದಾವಣೆ (Registration) ಮಾಡಿಸಿಕೊಳ್ಳುವ ಸಲುವಾಗಿ ಪಾನ್ ಕಾರ್ಡ್ ಕಡ್ಡಾಯ (ಮೂಲ ಪ್ರತಿಯನ್ನು ತರಬೇಕು), ಆಧಾರ್ ಕಾರ್ಡ್ ಕಡ್ಡಾಯ (ಮೂಲ ಪ್ರತಿಯನ್ನು ತರಬೇಕು), IFSC Code ಇರುವ ರಾಷ್ಟ್ರೀಕೃತ ಬ್ಯಾಂಕಿನ ಸೇವಿಂಗ್ಸ್ ಖಾತೆಯ ಪಾಸ್ ಪುಸ್ತಕದ ಮೊದಲ ಪುಟದ ಜೆರಾಕ್ಸ್ ಪ್ರತಿ, ಪಾಸ್ ಮೋರ್ಟು ಅಳತೆಯ 2 ಭಾವಚಿತ್ರ, ಅಫಿದಾವಿತ್ ಮಾಡಲು 20ರೂ.ಗಳ ಸ್ಟ್ಯಾಂಪ್ ಪೇಪರ್ (ಅಫಿದಾವಿತ್‌ನಲ್ಲಿ 1 party ಅರ್ಜಿದಾರರ ಹೆಸರು ಪಾನ್ ಕಾರ್ಡ್ನಲ್ಲಿ ಇದ್ದಂತೆ, 2 party – not applicable ಎಂದು ನಮೂದಿಸಬೇಕು) ದಾಖಲಾತಿಗಳನ್ನು ತರಬೇಕು.

ಇ ನವೀಕರಣ (Renewal) ಮಾಡಿಸಿಕೊಳ್ಳುವ ಸಲುವಾಗಿ ಪಾನ್ ಕಾರ್ಡ್ (ಮೂಲ ಪ್ರತಿಯನ್ನು ತರಬೇಕು), ಆಧಾರ್ ಕಾರ್ಡ್ (ಮೂಲ ಪ್ರತಿಯನ್ನು ತರಬೇಕು), ಪಾಸ್ ಪೋರ್ಟು ಅಳತೆಯ 2 ಭಾವಚಿತ್ರ, ಪಾಸ್‌ವರ್ಡ್ ಇರುವ ಪತ್ರ ಮತ್ತು ಇ- ಟೋಕನ್ (ಪೆನ್‌ಡ್ರೈವ್), ದಾಖಲಾತಿಗಳನ್ನು ತರಬೇಕು.

ನೋಂದಾವಣೆ ಶುಲ್ಕ 2450 ಹಾಗೂ ನವೀಕರಣ ಶುಲ್ಕ 1650 ಆಗಿರುತ್ತದೆ. ನೋಂದಾವಣೆ ಹಾಗೂ ನವೀಕರಣ ಶುಲ್ಕದಲ್ಲಿ ಯಾವುದೇ ವ್ಯತ್ಯಾಸಗಳಿದ್ದಲ್ಲಿ ಅಥವಾ ಇತರ ಮಾಹಿಗಳಿಗಾಗಿ (ಉಮಾಕಾಂತ್) ಮೊಬೈಲ್ ಸಂಖ್ಯೆ.9986865229ನ್ನು ಸಂಪರ್ಕಿಸಬಹುದು ಎಂದು ವಿಭಾಗೀಯ ವ್ಯವಸ್ಥಾಪಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here