ಪುತ್ತೂರು:ವಿಶ್ವ ಸೋರಿಯಾಸಿಸ್ ದಿನದ ಅಂಗವಾಗಿ ಅ.22ರಂದು ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ವಿಶೇಷ ಚರ್ಮರೋಗ ತಪಾಸಣಾ ಶಿಬಿರವು ನಡೆಯಲಿದೆ.
ಸೋರಿಯಾಸಿಸ್ ಚರ್ಮ ರೋಗದ ಕಾರಣ, ಲಕ್ಷಣಗಳು, ಅದರ ಹೋಮಿಯೋಪತಿ ಚಿಕಿತ್ಸೆ ಹಾಗೂ ಇನ್ನಿತರ ಚರ್ಮ ಕಾಯಿಲೆಗಳಿಂದ ಹೇಗೆ ಭಿನ್ನ ಎಂದು ಅರಿವು ಮೂಡಿಸುವ ಉದ್ದೇಶದಿಂದ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಕಳೆದ 10 ವರ್ಷದಿಂದ ಮಂಗಳೂರಿನಲ್ಲಿ ತನ್ನ ಸಂಸ್ಥೆ ಡಾ. ರೈ ಹೋಮಿಯೋಪತಿ ಸೆಂಟರ್‌ನಲ್ಲಿ ವೈದ್ಯ ಸೇವೆ ಸಲ್ಲಿಸುತ್ತಿರುವ ಡಾ.ಪ್ರವೀಣ್ ಕುಮಾರ್ ರೈಯವರು ತಪಾಸಣಾ ಶಿಬಿರವನ್ನು ನಡೆಸಿಕೊಡಲಿದ್ದಾರೆ. ಇವರು ಕಳೆದ 5 ವರ್ಷಗಳಿಂದ ಪ್ರತಿ ತಿಂಗಳ ನಾಲ್ಕನೇ ಶನಿವಾರ ಸಿಟಿ ಆಸ್ಪತ್ರೆಯಲ್ಲಿ ಹೋಮಿಯೋಪತಿ ಸಂದರ್ಶನ ನೀಡುತ್ತಿದ್ದು ನೂರಾರು ಮಂದಿ ಸೋರಿಯಾಸಿಸ್ ರೋಗಿಗಳು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ಸೋರಿಯಾಸಿಸ್ ಮಾತ್ರಲ್ಲದೆ ಎಕ್ಸಿಮಾ, ಬಿಳಿ ತೊನ್ನು, ಗಜಕರ್ಣ, ಆರ್ಟಿಕೆರಿಯ ಮುಂತಾದ ಚರ್ಮ ರೋಗಗಳಿಗೆ ಕೂಡ ಹೋಮಿಯೋಪತಿಯಲ್ಲಿ ಯಾವುದೇ ಅಡ್ಡ ಪರಿಣಾಮವಿಲ್ಲದ ಉತ್ತಮ ಪರಿಹಾರವಿದೆ.
ವಿಶ್ವ ಸೋರಿಯಾಸಿಸ್ ದಿನದ ಅಂಗವಾಗಿ ಉಚಿತ ಸಲಹೆ ಹಾಗೂ ಅಗತ್ಯ ಹೋಮಿಯೋಪತಿ ಔಷಧೋಪಾಚರದಲ್ಲಿ ವಿಶೇಷ ರಿಯಾಯಿತಿ ಕೂಡ ಇದ್ದು ರೋಗಿಗಳು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿ ಹಾಗೂ ಮುಂಗಡ ಕಾಯ್ದಿರಿಸಲು 8123870254 ನಂಬರ್‌ಗೆ ಕರೆ ಮಾಡುವಂತೆ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.