ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷರಾಗಿ 2ನೇ ಬಾರಿ ಅವಿರೋಧವಾಗಿ ಆಯ್ಕೆಗೊಂಡಿರುವ ಡಾ| ಎಂ.ಎನ್.ರಾಜೇಂದ್ರ ಕುಮಾರ್ ಅಭಿನಂದನಾ ಸಮಾರಂಭ

0

  • ಅಭಿನಂದನಾ ಸಮಾರಂಭಕ್ಕೂ ಮುಂದೆ ಭವ್ಯ ಮೆರವಣಿಗೆ
  • ಮೆರವಣಿಗೆ ಆರಂಭದಲ್ಲಿ ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರ ಪ್ರತಿಮೆ
  • ತೆರೆದ ವಾಹನಲ್ಲಿ ಡಾ| ಎಂ.ಎನ್.ರಾಜೇಂದ್ರ ಕುಮಾರ್, ಶಾಸಕ ಸಂಜೀವ ಮಠಂದೂರು
  • 250ಕ್ಕೂ ಮಿಕ್ಕಿ ವಾಹನಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ
  • 2,500ಕ್ಕೂ ಅಧಿಕ ಸಹಕಾರಿಗಳು ಸೇರುವ ನಿರೀಕ್ಷೆ
  • ಬೆಳ್ಳಿಯ ಕಿರೀಟ ತೊಡಿಸಿ, ಬುಟ್ಟಿಯಲ್ಲಿ ಫಲವಸ್ತು ಇರಿಸಿ ಗೌರವ


ಪುತ್ತೂರು: ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷರಾಗಿ 2ನೇ ಬಾರಿ ಅವಿರೋಧವಾಗಿ ಆಯ್ಕೆಗೊಂಡಿರುವ ಸಹಕಾರ ರತ್ನ ಡಾ| ಎಂ.ಎನ್.ರಾಜೇಂದ್ರ ಕುಮಾರ್ ಅವರಿಗೆ ಸಹಕಾರ ರತ್ನ ಡಾ| ಎಂ.ಎನ್.ರಾಜೇಂದ್ರ ಕುಮಾರ್ ಅಭಿನಂದನಾ ಸಮಿತಿ ಪುತ್ತೂರು ಇದರ ವತಿಯಿಂದ ಪುತ್ತೂರು, ಕಡಬ, ಸುಳ್ಯ ಮತ್ತು ಬೆಳ್ತಂಗಡಿ ತಾಲೂಕುಗಳ ಸಮಸ್ತ ಸಹಕಾರಿ ಬಂಧುಗಳಿಂದ ಗೌರವ ಸಮರ್ಪಣೆ ಕಾರ್ಯಕ್ರಮ ಅ.24ರಂದು ಪುತ್ತೂರು ಕೊಂಬೆಟ್ಟು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರುಗಲಿದೆ.

ಅ.20ರಂದು ಸುದ್ದಿ ಮೀಡಿಯಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷರಾಗಿರುವ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಮಾತನಾಡಿ 170 ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ 28 ವರ್ಷಗಳ ಹಿಂದೆ ತನ್ನದಾದ ಸ್ವಂತ ಜಾಗ ಅಥವಾ ಕಟ್ಟಡವಿರಲಿಲ್ಲ. ಇವತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಕಡಿಮೆ ಇಲ್ಲದ ಹಾಗೆ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಪ್ರೋತ್ಸಾಹ ನೀಡಿ ಎಲ್ಲಾ ಕೇಂದ್ರಗಳು ತನ್ನದೇ ಆದ ಸ್ವಂತ ಕಟ್ಟಡದಲ್ಲಿ ಕೆಲಸ ಮಾಡಲು ಕಾರಣೀಭೂತರಾಗಿರುವಂತಹದ್ದು ಡಾ| ಎಂ.ಎನ್.ರಾಜೇಂದ್ರ ಕುಮಾರ್ ಎಂದು ಎಲ್ಲ ಸಹಕಾರಿಗಳು ತಿಳಿದ ವಿಚಾರ. ಅವರೆಲ್ಲ ಭಾವನೆಗಳನ್ನು ಒಂದು ಗೂಡಿಸಿ ರಾಜೇಂದ್ರ ಕುಮಾರ್ ಅವರನ್ನು ಅಭಿನಂದಿಸುವ ಚಿಂತನೆ ಇತ್ತು. ಅದಕ್ಕೆ ಪೂರಕವಾಗಿ ಅವರು ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರಾಗಿ 2ನೇ ಬಾರಿ ಆಯ್ಕೆಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಅವರನ್ನು ಅ.23ರಂದು ಅಭಿನಂದಿಸುವ ಕಾರ್ಯಕ್ರಮ ಅದ್ದೂರಿಯಾಗಿ ನಡೆಸಲಾಗುವುದು ಎಂದರು.

ದರ್ಬೆಯಿಂದ ವೈಭವದ ವಾಹನ ಜಾಥಾದೊಂದಿಗೆ ಮೆರವಣಿಗೆ

ಬೆಳಿಗ್ಗೆ ಗಂಟೆ 10ಕ್ಕೆ ದರ್ಬೆಯಿಂದ ಬಂಟರ ಭವನದ ತನಕ ವೈಭವದ ಮೆರವಣಿಗೆ ನಡೆಯಲಿದೆ ಕೊಂಚಾಡಿಯ ಚೆಂಡೆ, ನಾಸಿಕ್ ಬ್ಯಾಂಡ್‌ನ ಸದ್ದಿನೊಂದಿಗೆ ಸುಮಾರು 250ಕ್ಕೂ ಮಿಕ್ಕಿ ವಾಹನಗಳೊಂದಿಗೆ ಜಾಥ ನಡೆಯಲಿದೆ. ಇದರಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘ ಉದಯವಾಗಲು ಕಾರಣಕರ್ತರಾದ ಸಹಕಾರಿ ಪಿತಾಮಹಾ ಮೊಳಹಳ್ಳಿ ಶಿವರಾಯರವರ ಪ್ರತಿಮೆಯನ್ನು ಮೆವಣಿಗೆಯ ಆರಂಭದಲ್ಲಿ ಮತ್ತು ಅದರ ಹಿಂದೆ ಸನ್ಮಾನಗೊಳ್ಳಲಿರುವ ಡಾ| ಎಂ.ಎನ್.ರಾಜೇಂದ್ರ ಕುಮಾರ್ ಮತ್ತು ಶಾಸಕ ಸಂಜೀವ ಮಠಂದೂರು ಅವರನ್ನು ತೆರೆದ ವಾಹನದಲ್ಲಿ ಸ್ವಾಗತಿಸಲಾಗುವುದು. ರಸ್ತೆಯ ಇಕ್ಕೆಲದಲ್ಲಿ ವಿವಿಧ ಸಹಕಾರಿ ಸಂಘಗಳಿಂದ ಬ್ಯಾನರ್ ಅಳವಡಿಸುವ ಕಾರ್ಯ ಈಗಾಗಲೇ ನಡೆಯುತ್ತಿದೆ ಎಂದು ಶಶಿಕುಮಾರ್ ರೈ ಬಾಲ್ಯೊಟ್ಟು ಹೇಳಿದರು.

ಬಂಟರ ಭವನದಲ್ಲಿ ಗೌರವ ಸಮಾರಂಭ:

ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ಅಭಿನಂದನಾ ಸಮಾರಂಭ ನಡೆಯಲಿದ್ದು, ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಡಾ| ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು ಅಭಿನಂದಿಸಲಿದ್ದಾರೆ. ಮೀನುಗಾರಿಕಾ ಮತ್ತು ಬಂದರು ಖಾತೆ ಸಚಿವ ಎಸ್ ಅಂಗಾರ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮೆರವಣಿಗೆಯನ್ನು ಉದ್ಘಾಟಿಸಲಿದ್ದಾರೆ. ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಅವರು ಅಭಿನಂದನಾ ಭಾಷಣ ಮಾಡಲಿದ್ದಾರೆ. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಐಖಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಮಾರಂಭವು ಮಧ್ಯಾಹ್ನದ ತನಕ ನಡೆಯಲಿದ್ದು, ಮಧ್ಯಾಹ್ನ ಭೋಜನದ ವ್ಯವಸ್ಥೆಯಿದೆ. ಈಗಾಗಲೇ ಸುಮಾರು 2,500 ಮಂದಿ ಸಹಕಾರಿಗಳು ಕಾರ್ಯಕ್ರಮಕ್ಕೆ ನೋಂದಾವಣೆ ಮಾಡಿಕೊಂಡಿದ್ದಾರೆ ಎಂದು ಬಾಲ್ಯೊಟ್ಟು ಹೇಳಿದರು.

ಸಹಕಾರಿ ಕ್ಷೇತ್ರಕ್ಕೆ ಗೌರವ ತಂದವರನ್ನು ಗೌರವಿಸುವುದು ಕರ್ತವ್ಯ:

ಡಾ| ಎಂ.ಎನ್.ರಾಜೇಂದ್ರ ಕುಮಾರ್ ಅಭಿನಂದನಾ ಸಮಿತಿ ಸಂಚಾಲಕರಾಗಿರುವ ಕೆಎಮ್‌ಎಫ್ ಮಹಾಮಂಡಲದ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈ ಬಳಜ್ಜ ಅವರು ಮಾತನಾಡಿ ಸಹಕಾರಿಗಳು ಮತ್ತು ಅವರ ಅಭಿಮಾನಿಗಳು ಸೇರಿಕೊಂಡು ಈ ಅಭಿನಂದನಾ ಸಮಾರಂಭವು ನಡೆಯಲಿದೆ. ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರಿಂದ ಪುತ್ತೂರು ತಾಲೂಕಿನಲ್ಲಿ ಆರಂಭಗೊಂಡಿರುವ ಸಹಕಾರಿ ಕ್ಷೇತ್ರ ಡಾ| ಎಂ.ಎನ್.ರಾಜೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಬಹಳ ಹೆಮ್ಮರವಾಗಿ ಬೆಳೆದಿದೆ. ತಾನು ಬೆಳೆಯುವ ಜೊತೆಗೆ ಇತರರನ್ನು ಬೆಳೆಸುವ ಚಿಂತನೆ ಇಟ್ಟುಕೊಂಡ ಅವರು ಅನೇಕ ಸಹಕಾರಿ ಸಂಘಗಳು ನಷ್ಟದಲ್ಲಿರುವ ಸಂದರ್ಭದಲ್ಲಿ ಅದರ ಪುನಶ್ಚೇತನಕ್ಕೆ ಸಹಕಾರ ನೀಡಿ ಇವತ್ತು ಸಹಕಾರಿ ಸಂಘಗಳು ಯಶಸ್ವಿಯಾಗಲು ಕಾರಣಕರ್ತರಾದವರು. ಡಾ| ಎಂ.ಎನ್ ರಾಜೇಂದ್ರ ಕುಮಾರ್ ಅವರು ಇದರ ಜೊತೆಗೆ ಸಹಕಾರಿ ಕ್ಷೇತ್ರಕ್ಕೆ ಗೌರವ ತಂದಿರುವ ಅವರನ್ನು ಸನ್ಮಾನಿಸುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಸಹಕಾರಿಗಳು ಮತ್ತು ಅವರ ಅಭಿಮಾನಿಗಳು ಸೇರಿಕೊಂಡು ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಹಕಾರ ರತ್ನ ಡಾ| ಎಂ.ಎನ್.ರಾಜೇಂದ್ರ ಕುಮಾರ್ ಅಭಿನಂದನಾ ಸಮಿತಿ ಕಾರ್ಯದರ್ಶಿ ಚಂದ್ರಶೇಖರ್ ಪಿ, ಸದಸ್ಯ ಜಯಪ್ರಕಾಶ್, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ಕೆ.ರತ್ನ ಕುಮಾರ್ ಉಪಸ್ಥಿತರಿದ್ದರು.

ಸನ್ಮಾನ ವಿಶೇಷ

ಅಮೇರಿಕಾದ ಶಾಸನ ಸಭೆಯಲ್ಲಿ ಗೌರವ ಪಡೆದಿರುವ ಡಾ| ಎಂ.ಎನ್.ರಾಜೇಂದ್ರ ಕುಮಾರ್ ಅವರಿಗೆ ನಾವು ಬಂಗಾರದ ಕಿರೀಟ ತೋಡಿಸಬೇಕು. ಆದರೂ ನಾವು ಇಲ್ಲಿ 3 ಕೆ.ಜಿಯಲ್ಲಿ ನಿರ್ಮಾಣಗೊಂಡ ಬೆಳ್ಳಿಯ ಕಿರೀಟ ತೊಡಿಸಿ, ಬೆಳ್ಳಿಯ ಗಣಪತಿ ವಿಗ್ರಹವನ್ನು ಅವರಿಗೆ ಸಮರ್ಪಣೆ ಮಾಡಲಿದ್ದೇವೆ. ಇದರ ಜೊತೆಗೆ 5 ಅಡಿ 6 ಇಂಚು ಎತ್ತರದ ಸನ್ಮಾನ ಪತ್ರದ ಫಲಕ, ಬೆತ್ತದ ಬುಟ್ಟಿಯಲ್ಲಿ ತುಂಬಾ ಫಲವಸ್ತುಗಳು, ಮಹಾಲಿಂಗೇಶ್ವರ ದೇವರ ಬ್ರಹ್ಮರಥ ಮತ್ತು ರಾಷ್ಟ್ರ ಲಾಂಛನದ ನಡುವೆ ಅವರ ಭಾವಚಿತ್ರವಿರುವ ಫಲಕವನ್ನು ಅವರಿಗೆ ಅರ್ಪಣೆ ಮಾಡಲಿದ್ದೇವೆ.

ಶಶಿಕುಮಾರ್ ರೈ ಬಾಲ್ಯೊಟು

LEAVE A REPLY

Please enter your comment!
Please enter your name here