ಪೆರಾಬೆ: ಕೋಚಕಟ್ಟೆ ನೂರುಲ್ ಹುದಾ ಮದ್ರಸದಲ್ಲಿ ಮಿಲಾದ್ ಆಚರಣೆ, ಧಾರ್ಮಿಕ ಮತ ಪ್ರವಚನ, ಮಕ್ಕಳ ವಿವಿಧ ಪ್ರತಿಭಾ ಕಾರ್ಯಕ್ರಮ ಮತ್ತು ಕುಂತೂರು ದರ್ಸ್ ವಿದ್ಯಾರ್ಥಿಗಳ ಬುರ್ದಾ ಮಜ್ಲಿಸ್ ಅ.22 ಹಾಗೂ 23 ರಂದು ನಡೆಯಲಿದೆ.
ಅ.22ರಂದು ಬೆಳಿಗ್ಗೆ 8 ಗಂಟೆಗೆ ಮದ್ರಸ ಅಧ್ಯಕ್ಷರಾದ ಜನಾಬ್ ಬಶೀರ್ ಕೆ.ಪಿ.ಅವರು ಧ್ವಜಾರೋಹಣ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸಂಜೆ 5 ಗಂಟೆಗೆ ಕುಂತೂರು ಮಸೀದಿ ಮುದರ್ರಿಸ್ ಉಸ್ತಾದರ ನೇತೃತ್ವದಲ್ಲಿ ಮೌಲಿದ್ ಪಾರಾಯಣ, ನಂತರ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಮದ್ರಸ ಉಪಾಧ್ಯಕ್ಷರಾದ ಪಯಾಝ್ ಝೆಡ್.ಬಿ.ಅವರು ಸ್ವಾಗತಿಸಲಿದ್ದಾರೆ. ಮದ್ರಸ ಪ್ರಧಾನ ಅಧ್ಯಾಪಕರಾದ ಉಮರುಲ್ ಫಾರೂಕ್ ದಾರಿಮಿ ರೆಂಜ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ನಂತರ ಮದ್ರಸ ವಿದ್ಯಾರ್ಥಿಗಳಿಂದ ವಿವಿಧ ಪ್ರತಿಭಾ ಕಾರ್ಯಕ್ರಮ ಹಾಗೂ ಕುಂತೂರು ದರ್ಸ್ ವಿದ್ಯಾರ್ಥಿಗಳ ಬುರ್ದಾ ಮಜ್ಲಿಸ್ ನಡೆಯಲಿದೆ. ರಾತ್ರಿ 8 ಗಂಟೆಗೆ ಸೂಫಿವರ್ಯರಾದ ಕುಂತೂರು ಎ & ಬಿ ಜುಮಾ ಮಸೀದಿ ಮುದರ್ರಿಸ್ ಬಹು| ಮೊಯಿದು ಫೈಝಿಯವರು ‘ಪ್ರವಾದಿ ಪ್ರೇಮ’ ಎಂಬ ವಿಷಯದಲ್ಲಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಅ.23ರಂದು ರಾತ್ರಿ 7.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಪ್ರಭಾಷಣ ಲೋಕದ ಧ್ರುವತಾರೆ ಬಹು| ಕುಮ್ಮಣ್ಣಂ ಅಲ್ ಹಾಪಿಲ್ ನಿಝಾಮುದ್ದೀನ್ ಅಝ್ಹರಿ ಕೇರಳರವರು ‘ಮರಣಂ’ ಎಂಬ ವಿಷಯದಲ್ಲಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ ವ್ಯವಸ್ಥೆ ಮಾಡಲಾಗಿದೆ ಎಂದು ಮದ್ರಸ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಅಲ್ ಅಮೀನ್‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.