ಹಲಾಲ್ ಮುಕ್ತ ದೀಪಾವಳಿಯನ್ನಾಗಿ ಆಚರಿಸಿ – ದರ್ಬೆಯಲ್ಲಿ ಹಿಂದು ಜನಜಾಗೃತಿ ಸಮಿತಿ ಜಾಗೃತಿ ಪ್ರತಿಭಟನೆ

0

ಪುತ್ತೂರು: ಹಲಾಲ್ ಮುಕ್ತ ದೀಪಾವಳಿಯನ್ನಾಗಿ ಆಚರಿಸಿ ಮತ್ತು ಹಲಾಲ್ ಸಂಬಂಧಪಟ್ಟ ವಸ್ತುಗಳನ್ನು ಬಹಿಷ್ಕರಿಸೋಣ ಎಂಬ ಮನವಿಯೊಂದಿಗೆ ಹಿಂದು ಜನಜಾಗೃತಿ ಸಮಿತಿ ಮತ್ತು ಅಭಿನವ ಭಾರತ ಹಿಂದು ಮಿತ್ರ ಮಂಡಳಿಯ ವತಿಯಿಂದ ದರ್ಬೆಯಲ್ಲಿ ಜಾಗೃತಿ ಪ್ರತಿಭಟನೆ ಅ.21 ರಂದು ನಡೆಯಿತು.
ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಕ ಚಂದ್ರಮುಗೇರ ಅವರು ಮಾತನಾಡಿ ಮುಸ್ಲಿಂ ಗ್ರಾಹಕರನ್ನು ಸೆಳೆಯಲು ಅನೇಕ ಕಂಪೆನಿಗಳು ಹಲಾಲ್ ಉತ್ಪನ್ನಗಳನ್ನು ತಯಾರಿಸುತ್ತಿವೆ. ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವವರು ಹಲಾಲ್ ಸರ್ಟಿಫಿಕೇಟ್ ಮಾಡುತ್ತಾರೆ. ಹಲಾಲ್ ಮಾರ್ಕ್ ಇರುವ ವಸ್ತುಗಳನ್ನು ಖರೀದಿಸಿದರೆ ಅದನ್ನು ವಾಪಾಸು ಮಾಡಿ. ಹಲಾಲ್ ವ್ಯವಸ್ಥೆಯ ಕುರಿತು ಕೇಂದ್ರ ಸರಕಾರ ತನಿಖೆ ಮಾಡಬೇಕು. ಹಲಾಲ್ ಸರ್ಟಿಫಿಕೇಟ್ ಅನ್ನು ಮಾರಾಟದಲ್ಲಿರದ್ದುಗೊಳಿಸಬೇಕೆಂಬ ಮನವಿಯನ್ನು ಕೇಂದ್ರ ಸರಕಾರಕ್ಕೆ ಮಾಡುತ್ತೇವೆ ಎಂದರು.
ಹರಿಪ್ರಸಾದ್ ಶೆಟ್ಟಿ ನೆಲ್ಲಿಕಟ್ಟೆಯವರು ಮಾತನಾಡಿ ಹಲಾಲ್ ಮಾರ್ಕಿನ ಯಾವ ವಸ್ತುವನ್ನು ಖರೀದಿಸುವುದಿಲ್ಲ ಎಂದು ಸಂಕಲ್ಪ ಮಾಡಿಕೊಳ್ಳಬೇಕು ಎಂದರು. ಹಲಾಲ್ ಮಾರ್ಕ್ ಇರುವ ಉತ್ಪನ್ನವನ್ನು ಖರೀದಿ ಮಾಡಬಾರದು. ಇದು ಭವಿಷ್ಯದಲ್ಲಿ ಭಾರತವನ್ನು ಇಸ್ಲಾಂ ರಾಷ್ಟ್ರವನ್ನಾಗಿ ಮಾಡುವ ಹುನ್ನಾರ ಎಂದರು. ಶಂಖನಾದ ಮೂಲಕ ದಯಾನಂದ ಪ್ರತಿಭಟನೆಗೆ ಚಾಲನೆ ನೀಡಿ, ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಟನೆಯಲ್ಲಿ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here