ಮುಳಿಯ ಜ್ಯುವೆಲ್ಸ್‌ನಲ್ಲಿ ಚಿನ್ನಾಭರಣಗಳ ಹಬ್ಬ ಮುಳಿಯ ಚಿನ್ನೋತ್ಸವಕ್ಕೆ ಚಾಲನೆ

0

ಮುಳಿಯ ಜ್ಯುವೆಲ್ಸ್‌ನಲ್ಲಿ ಚಿನ್ನಾಭರಣಗಳ ಹಬ್ಬ ಮುಳಿಯ ಚಿನ್ನೋತ್ಸವಕ್ಕೆ ಚಾಲನೆ
ಹೊಸ ಮಾದರಿಯ ಚಿನ್ನ `ಟ್ರೆಂಡಿ 91.6′ ಆಭರಣಗಳನ್ನು ಬಿಡುಗಡೆ

ಪುತ್ತೂರು : ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಕೋರ್ಟ್‌ರಸ್ತೆ ಮುಳಿಯ ಜ್ಯುವೆಲ್ಸ್‌ನಲ್ಲಿ ವೆರೈಟಿ , ವಿನ್ಯಾಸದ ಚಿನ್ನಾಭರಣಗಳ ಸಂಗ್ರಹದೊಂದಿಗೆ ಒಂದು ತಿಂಗಳ ಕಾಲ ನಡೆಯಲಿರುವ ಚಿನ್ನಾಭರಣಗಳ ಹಬ್ಬ `ಮುಳಿಯ ಚಿನ್ನೋತ್ಸವ’ ಅ.21ರಂದು ಉದ್ಘಾಟನೆಗೊಂಡಿತು. ಇದೇ ಸಂದರ್ಭದಲ್ಲಿ ಹೊಸ ಮಾದರಿಯ ಚಿನ್ನ `ಟ್ರೆಂಡಿ 91.6′ ಆಭರಣಗಳನ್ನು ಬಿಡುಗಡೆಗೊಳಿಸಲಾಯಿತು.
ಚಿನ್ನೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಖ್ಯಾತ ದಂತ ವೈದ್ಯ ಡಾ. ಆಶಾರವರು ಮಾತನಾಡಿ, ಮುಳಿಯ ಜ್ಯುವೆಲ್ಸ್ ಸದಾ ಹೊಸತನಕ್ಕೆ ಹೆಸರು. ಇಲ್ಲಿಯ ಸಿಬ್ಬಂದಿಗಳ ನಗು ಮೊಗದ ಸೇವೆ ಗ್ರಾಹಕರನ್ನು ಆಕರ್ಷಿಸುತ್ತಿದೆ. ಆಭರಣಗಳ ಆಯ್ಕೆಗೆ ಸಾಕಷ್ಟು ಅವಕಾಶಗಳಿದ್ದು ಗ್ರಾಹಕರಿಗೆ ಖುಷಿ ನೀಡುತ್ತಿದೆ ಸದಾ ಸಂತೋಷ ತರುತ್ತದೆ ಎಂದರು.

 ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಕೃಷ್ಣ ನಾರಾಯಣ ಮುಳಿಯ ಮಾತನಾಡಿ, ಒಂದು ತಿಂಗಳ ಕಾಲ ನಡೆಯಲಿರುವ ಚಿನ್ನೋತ್ಸವದಲ್ಲಿ ವಿವಿಧ ವಿನ್ಯಾಸಗಳ ಚಿನ್ನಾಭರಣಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಈ ಉತ್ಸವದಲ್ಲಿ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತಿದ್ದು ಪ್ರತಿದಿನ ಚಿನ್ನದ ನಾಣ್ಯ ಗೆಲ್ಲುವ ಮತ್ತು ಪ್ರತಿ ಗಂಟೆಗೊಮ್ಮೆ ಬೆಳ್ಳಿಯ ನಾಣ್ಯ ಗೆಲ್ಲುವ ಅವಕಾಶವಿದೆ. ವಜ್ರಗಳ ಮೇಲೆ ಶೇ.10ರ ವರೆಗೆ ಕಡಿತವಿದೆ. ವಿ.ಎ (ವ್ಯಾಲ್ಯೂ ಆಡಿಶನ್) ಶೇ.4.6ರಿಂದ ಆರಂಭವಾಗುತ್ತದೆ. ಗ್ರಾಹಕರ ಹಳೆಯ ಚಿನ್ನಕ್ಕೆ ಅತ್ಯುತ್ತಮ ಬೆಲೆ ನೀಡಲಾಗುತ್ತಿದ್ದು, ಹಳೆಯ ಚಿನ್ನವನ್ನು ಹೊಸ ಟ್ರೆಂಡಿ 91.6 ಆಭರಣಗಳೊಂದಿಗೆ ವಿನಿಮಯ ಮಾಡಿಕೊಳ್ಳಲು ಸುವರ್ಣಾವಕಾಶವಿದೆ ಎಂದು ತಿಳಿಸಿದರು.
ಮಾರ್ಕೆಟಿಂಗ್ ಕನ್ಸಲ್ಟೆಂಟ್ ವೇಣು ಶರ್ಮ ಪ್ರಾಸ್ತಾವಿಕವಾಗಿ ಮಾತನಾಡಿ, ವೆರೈಟಿ ಹಾಗೂ ವಿನ್ಯಾಸಗಳೊಂದಿಗೆ ಎಲ್ಲಿಯೂ ದೊರೆಯದ ವಿಶೇಷ ಡಿಸೈನ್‌ಗಳ ಆಭರಣಗಳು ಮುಳಿಯ ಜ್ಯುವೆಲ್ಸ್‌ನಲ್ಲಿ ಲಭ್ಯವಿದೆ. ಬೆಳ್ಳಿಯ ವಿಶೇಷ ಬ್ರಾಂಡ್‌ಗಳೂ ಲಭ್ಯವಿದೆ. ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾಚರಣೆಗೆ ವಿಶೇಷ ಬ್ರಾಂಡ್‌ಗಳನ್ನು ಪರಿಚಯಿಸಲಾಗುವುದು. ಚಿನ್ನೋತ್ಸವವು ಮುಳಿಯದ 5 ಶಾಖೆಗಳಲ್ಲಿಯೂ ಏಕ ಕಾಲದಲ್ಲಿ ನಡೆಯಲಿದೆ ಎಂದ ಅವರು, ಸಮಾಜಮುಖಿ ಚಿಂತನೆಗಳೊಂದಿಗೆ ಜನರೆ ಜೊತೆಗೆ ಬೆರೆಯುತ್ತಾ ಸಂಸ್ಥೆಯು ಎತ್ತರಕ್ಕೆ ಬೆಳೆದಿದೆ.
ವಿ.ಎ 4.6%ನಿಂದ ಆರಂಭ
ಚಿನ್ನಾಭರಣಗಳ ಖರೀದಿಗೆ ವಿ.ಎ (ವ್ಯಾಲ್ಯೂ ಆಡಿಶನ್) ಶೇ.4.6ರಿಂದ ಆರಂಭವಾಗುತ್ತದೆ. ಚಿನ್ನೋತ್ಸವದಲ್ಲಿ ವೆರೈಟಿ, ವಿನ್ಯಾಸದ ವಿಶೇಷ ಚಿನ್ನ, ವಜ್ರ ಮತ್ತು ಬೆಳ್ಳಿಯ ಆಭರಣಗಳ ವಿಶೇಷ ಸಂಗ್ರಹವಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ಫೋಸಿಸ್‌ನ ಗ್ರೂಫ್ ಪ್ರಾಜೆಕ್ಟ್ ಮ್ಯಾನೇಜರ್ ಸುಹಾಸ್ ಮಜಿ, ಸಂಸ್ಥೆಯ ಹಿರಿಯರಾದ ಸುಲೋಚನಾ ಶ್ಯಾಮ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಖಾ ಪ್ರಬಂಧಕ ನಾಮದೇವ ಮಲ್ಯ ಸ್ವಾಗತಿಸಿದರು. ಸಿಬ್ಬಂದಿಗಳಾದ ನವ್ಯ ಪ್ರಾರ್ಥಿಸಿದರು. ವಿದ್ಯಾ ಭಟ್ ವಂದಿಸಿದರು. ಸುಮಲತಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here