ಅ 23-24: ಪುಣ್ಚತ್ತಾರು ಶ್ರೀ ಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‌ನ ದಶಮ ಪರ್ವ ಕಾರ್ಯಕ್ರಮ

0

ಪ್ರೋ ವಾಲಿಬಾಲ್ ಪಂದ್ಯಾಟ- ಸಾಧಕರಿಗೆ ಸನ್ಮಾನ, ಅಶಕ್ತ ಬಡ ಕುಟುಂಬಗಳಿಗೆ ಸಹಾಯಧನ ವಿತರಣೆ

ಪುತ್ತೂರು:’ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಪುಣ್ಚತ್ತಾರು ಶ್ರೀ ಹರಿ ಸ್ಪೋರ್ಟ್ಸ್ ಕ್ಲಬ್ ಹತ್ತನೇ ವರ್ಷದ ಸಂಭ್ರಮಾಚರಣೆಯಲ್ಲಿದ್ದು ಅ.23&24 ರಂದು ‘ದಶಮ ಪರ್ವ’ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ಎಂದು ಶ್ರೀ ಹರಿ ಸ್ಪೋರ್ಟ್ಸ್ ಕ್ಲಬ್ ಪುಣ್ಚತ್ತಾರಿನ ಸದಸ್ಯ ದಿನೇಶ್ ಮಾಳ ಹೇಳಿದರು.
ಅವರು ಅ.22ರಂದು ಸುದ್ದಿ ಮೀಡಿಯಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
‘ದೀಪಾವಳಿʼ ಹಬ್ಬ ಹಾಗೂ ಹತ್ತು ವರ್ಷಗಳ ಸಂಭ್ರಮಾಚರಣೆಯ ಪ್ರಯುಕ್ತ ಆಯ್ದ ಸ್ಥಳೀಯ ಆಟಗಾರರ ನಿಗದಿತ ಹತ್ತು ತಂಡಗಳ ಪ್ರೋ ವಾಲಿಬಾಲ್ ಪಂದ್ಯಾಟ,ಆಹ್ವಾನಿತ ತಂಡಗಳ ತ್ರೋಬಾಲ್ ಪಂದ್ಯಾಟ,ಸಾಧಕರಿಗೆ ಸನ್ಮಾನ,ಅಶಕ್ತ ಬಡ ಕುಟುಂಬಗಳಿಗೆ ಸಹಾಯಧನ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಪುಣ್ಚತ್ತಾರಿನಲ್ಲಿ ನಡೆಯಲಿದೆ ಎಂದು ದಿನೇಶ್ ಹೇಳಿದರು.

ಉದ್ಘಾಟನಾ ಹಾಗೂ ಸಮಾರೋಪ ಕಾರ್ಯಕ್ರಮ
ದಶಮ ಪರ್ವ ಕಾರ್ಯಕ್ರಮದ ಉದ್ಘಾಟನೆಯು ಅ.23 ರಂದು ಪೂರ್ವಾಹ್ನ 9 ಗಂಟೆಗೆ ನಡೆಯಲಿದ್ದು ನಿವೃತ್ತ ಯುವ ಜನ ಸೇವಾ ಕ್ರೀಡಾಧಿಕಾರಿ ಬಿ.ಕೆ ಮಾಧವ ಉದ್ಘಾಟನೆ ಮಾಡಲಿದ್ದು,ಪುಣ್ಚತ್ತಾರು ಶ್ರೀ ಹರಿ ಭಜನಾ ಮಂಡಳಿಯ ಗೌರವಾಧ್ಯಕ್ಷ ಐ.ನಾರಾಯಣ ಗೌಡ ಇಡ್ಯಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಪಂಜ ವಲಯದ ಎಡಮಂಗಲ ಶಾಖೆಯ ಉಪವಲಯ ಅರಣ್ಯಾಧಿಕಾರಿ ಯಶೋಧರ.ಕೆ,ಪೈಕ ಕರಿಮಜಲು ಗ್ರಾಮ ದೈವಸ್ಥಾನದ ಅನುವಂಶಿಕ ಮೊಕ್ತೇಸರ ಪುಟ್ಟಣ್ಣ ಗೌಡ ಪೈಕ,ನಾವೂರು ಸುಬ್ರಹ್ಮಣ್ಯ ದೇವಾಲಯದ ಅಧ್ಯಕ್ಷ ನಾಗೇಶ್.ರೈ ಮಾಳ,ಪುಣ್ಚತ್ತಾರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ವಿಶ್ವನಾಥ.ರೈ ಮಾಳ,ಪುಣ್ಚತ್ತಾರು ಶ್ರೀ ಹರಿ ಭಜನಾ ಮಂಡಳಿ ಅಧ್ಯಕ್ಷ ಸುಂದರ ನಾಯ್ಕ ಉಪ್ಪಡ್ಕ,ನಾವೂರು ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ ಅಧ್ಯಕ್ಷ ರವಿಶಂಕರ್ ಎನ್.ಟಿ,ಪುಣ್ಚತ್ತಾರು ಕರಿಮಜಲು ವಿಷ್ಣು ಪುರದ ವಿಷ್ಣುಮೂರ್ತಿ ದೈವಸ್ಥಾನದ ಮೊಕ್ತೇಸರ ವೆಂಕಟ್ರಮಣ ಆಚಾರ್ಯ,ಪುತ್ತೂರು-ಕಡಬ ತಾಲೂಕಿನ ನವೋದಯ ಗ್ರಾಮವಿಕಾಸ ಚಾರಿಟೇಬಲ್ ತಾಲೂಕು ಮೇಲ್ವಿಚಾರಕ ಚಂದ್ರಶೇಖರ್ ಬಿ.ಕೆ ಭಾಗವಹಿಸಲಿದ್ದಾರೆ.
ಅ.24 ರಂದು ಸಂಜೆ 7 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಖ್ಯಾತ ವಕೀಲರು ಹಾಗೂ ಶ್ರೀ ಹರಿ ಫ್ರೆಂಡ್ಸ್ ಕ್ಲಬ್ ಪುಣ್ಚತ್ತಾರಿನ ಗೌರವಾಧ್ಯಕ್ಷ ಮೋಹನ್ ಗೌಡ ಇಡ್ಯಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್ ಚಂದ್ರ ಸಭಾ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದು.ಸುಳ್ಯ ವಲಯದ ಎ.ಸಿ.ಎಫ್ ಪ್ರವೀಣ್ ಶೆಟ್ಟಿ ಬಹುಮಾನ ವಿತರಣೆ ನಡೆಸಲಿದ್ದಾರೆ.ದ.ಕ ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್.ರೈ ಸೂಡಿಮುಳ್ಳು,ತುಂಬೆ ಐಟಿಐ ಕಾಲೇಜಿನ ಪ್ರಾಂಶುಪಾಲ ನವೀನ್ ಕುಮಾರ್ ಕೆ.ಎಸ್,ಧರ್ಮಸ್ಥಳ ಸಂಘದ ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಎನ್.ಯು,ಪುಣ್ಚತ್ತಾರು ಸಾರ್ವಜನಿಕ ವರಮಹಾಲಕ್ಮೀ ಪೂಜಾ ಸಮಿತಿಯ ಅಧ್ಯಕ್ಷೆ ರೇವತಿ ಮೂಡೈಮಜಲು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ದಿನೇಶ್ ಮಾಳ ತಿಳಿಸಿದರು.
ಸನ್ಮಾನ ಕಾರ್ಯಕ್ರಮ:
ದಶಮ ಪರ್ವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಗುತ್ತಿದ್ದು.ಸಹಕಾರಿ ಕ್ಷೇತ್ರದಲ್ಲಿ ಸಹಕಾರ ರತ್ನ ಪ್ರಶಸ್ತಿ ವಿಜೇತ ಕೆ.ಸೀತಾರಾಮ.ರೈ ಸವಣೂರು,ವೈದ್ಯಕೀಯ ಕ್ಷೇತ್ರದಲ್ಲಿ ಐ.ಎಮ್.ಎ ಡಾಕ್ಟರ್ಸ್ ಡೇ ಪ್ರಶಸ್ತಿ ಪುರಸ್ಕೃತ ಡಾ.ಪ್ರಸಾದ್ ಭಂಡಾರಿ,ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಪುರಂದರ ಚಾರ್ವಕ,ಕೊರಗಪ್ಪ ಕಲ್ಪಡ,ಶೀನಪ್ಪ ಬೆಳಂದೂರು,ಲೋಕೇಶ್ ಕಂಡೂರು,ವಾಸುದೇವ ಮುಂಡಾಳ,ಹರಿಪ್ರಸಾದ್ ಕೆಮ್ಮಾಯಿ,ನಾಟಿ ವೈದ್ಯರಾದ ದಿನೇಶ್ ಮಾಳ,ನಾಗೇಶ್ ನೆಕ್ರಾಜೆ,ವಿಠಲ ಗೌಡ ಕಡೀರ.ನಿವೃತ್ತ ಶಿಕ್ಷಕರಾದ ಶಿವರಾಮ ಚಾರ್ವಕ ಬಿಮ್ಮಳಿಗೆ,ಬಾಲಕೃಷ್ಣ ಹೇಮಳ,ಪಾರ್ವತಿ ಅಲೆಕ್ಕಾಡಿ,ಮೋಹಿತ್ ಏನೆಕಲ್ಲು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಶ್ರಾವ್ಯ ಹುದೇರಿ,ಶ್ರೀಯಾ ಹುದೇರಿ,ದೀಕ್ಷಾ ಚಾರ್ವಕ,ಕಿರಣ್ ಮಂಗಳೂರು ಹಿರಿಯ ಟೈಲರ್ ಮಾಯಿಲಪ್ಪ ಎನ್.ಟಿ,ಮೆಸ್ಕಾಂ ಇಲಾಖಾ ಸಿಬ್ಬಂದಿಗಳಾದ ನಾರಾಯಣ ಗೌಡ ಎಡಮಂಗಲ,ವಸಂತ ಗೌಡ.ಕೆ ಪೆರ್ಲಂಪಾಡಿ ಹಾಗೂ ಕೆ.ಎಸ್.ಆರ್.ಟಿ.ಸಿ ನಿವೃತ್ತ ಚಾಲಕ ಮೋಂಟಣ್ಣ ಗೌಡ ದೋಲ್ಪಾಡಿಯವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.ಇದರೊಂದಿಗೆ ಕಾರ್ಗಿಲ್ ಯುದ್ದದಲ್ಲಿ ವೀರ ಮರಣವನ್ನಪ್ಪಿದ ಪರಮೇಶ್ವರ ದೋಳ್ಪಾಡಿ ಕಟ್ಟರ ಸ್ಮರಣೆ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದೆ.ಜೊತೆಗೆ ಬೊಬ್ಬೆಕೇರಿ ಶಾಲೆಯ ಚೈತನ್ಯ ಅಬ್ಬಡ,ಕಾಣಿಯೂರು ಸರಕಾರಿ ಹಿರಿಯ ಪ್ರೌಢಶಾಲೆಯ ಅಂಕಿತಾ.ಯು.ಜೆಯವರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಲಿದೆ

ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳು
ದಶಮ ಪರ್ವ ಕಾರ್ಯಕ್ರಮದ ಅಂಗವಾಗಿ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆ ನಡೆಯಲಿದ್ದು ಅ.23ರಂದು ಸ್ಥಳಿಯರಿಂದ ಹಾಗೂ ಅಶೋಕ್ ಪೊಳಲಿ ಮತ್ತು ತಂಡದವರಿಂದ ವಿಭಿನ್ನ ಶೈಲಿಯ ನೃತ್ಯ ಕಾರ್ಯಕ್ರಮ ನಡೆಯಲಿದೆ.ಅ.24ರಂದು ರಾತ್ರಿ ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ಕಲಾಸಂಗಮ ಕಲಾವಿದರಿಂದ ಶಿವದೂತೆ ಗುಳಿಗೆ ನಾಟಕ ಪ್ರದರ್ಶನ ನಡೆಯಲಿದ್ದು.ಶ್ರೀ ಕಪಿಲೇಶ್ವರ ಸಿಂಗಾರಿ ಮೇಳ ಚಾರ್ವಕ ತಂಡದಿಂದ ಚೆಂಡೆ ಪ್ರದರ್ಶನ ನಡೆಯಲಿದೆ.ಕ್ರೀಡಾ ಚಟುವಟಿಕೆಗಳ ಭಾಗವಾಗಿ ಪುರುಷರಿಗೆ ವಾಲಿಬಾಲ್,ಹಗ್ಗಜಗ್ಗಾಟ,ಗುಂಡುಎಸೆತ,ನಿಧಾನ ಬೈಕ್ ರೇಸ್,ನೀರು ಕುಡಿಯುವ ಸ್ಪರ್ದೆ ಹಾಗೂ ಮಹಿಳೆಯರಿಗೆ ತ್ರೋಬಾಲ್,ಹಗ್ಗಜಗ್ಗಾಟ,ಗುಂಡು ಎಸೆತ,ಸಂಗೀತ ಕುರ್ಚಿ ನೀರು ಕುಡಿಯುವ ಸ್ಪರ್ದೆ ಹಾಗೂ ಮಕ್ಕಳಿಗಾಗಿ ವಿವಿಧ ಆಟೋಟ ಸ್ಪರ್ದೆ ನಡೆಯಲಿದ್ದು.ಅ.24ರಂದು ಪ್ರೋ ವಾಲಿಬಾಲ್ ಪಂದ್ಯಾಟ ಹಾಗೂ ಆಹ್ವಾನಿತ ತಂಡಗಳ ತ್ರೋಬಾಲ್ ಪಂದ್ಯಾಟ ನಡೆಯಲಿದೆ ಎಂದು ದಿನೇಶ್ ಮಾಳ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪುಣ್ಚತ್ತಾರು ಶ್ರೀ ಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಸ್ಥಾಪಕ ಅಧ್ಯಕ್ಷ ರಾಧಾಕೃಷ್ಣ ಪೈಕ,ಅಧ್ಯಕ್ಷ ಹರೀಶ್ ಪೈಕ,ಕಟೀಲ್,ಕಾರ್ಯದರ್ಶಿ ಮೋನಪ್ಪ ಬಂಡಾಜೆ,ಸದಸ್ಯರಾದ ರವೀಂದ್ರ ಅನಿಲ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here