ಡೊನ್ ಬೊಸ್ಕೊ ಕ್ಲಬ್ ನಿಂದ ಪಟಾಕಿ ಮಾರಾಟ ಮಳಿಗೆ ;ಪಟಾಕಿ ಪ್ರಿಯರಿಗೆ ಆಕರ್ಷಕ ಬಹುಮಾನಗಳ ಕೊಡುಗೆ

0

ಪುತ್ತೂರು: ಮಾಯಿದೆ ದೇವುಸ್ ಚರ್ಚ್ ನ ಡೊನ್ ಬೊಸ್ಕೊ ಕ್ಲಬ್ ನಿಂದ ದೀಪಾವಳಿ ಹಬ್ಬದ ಪ್ರಯುಕ್ತ ಕ್ಲಬ್ ನ ಶಿಕ್ಷಣ ನಿಧಿ ಸಹಾಯಾರ್ಥ ಪಟಾಕಿ ಮಾರಾಟ ಮಳಿಗೆಯು ಮುಖ್ಯರಸ್ತೆಯಲ್ಲಿನ ಯೆಳ್ತಿಮಾರ್ ಜಾಗದಲ್ಲಿ ಪ್ರಾರಂಭಗೊಳ್ಳಲಿದೆ.

ಹಬ್ಬದ ಪ್ರಯುಕ್ತ ರೂ.500ರ ಖರೀದಿಗೆ ಒಂದು ಕೂಪನ್ ಉಚಿತವಾಗಿ ಗ್ರಾಹಕರಿಗೆ ದೊರೆಯಲಿದ್ದು, ಈ ಕೂಪನ್ ನಲ್ಲಿ ಪ್ರಥಮ ರೂ. 7777, ದ್ವಿತೀಯ ರೂ.5555, ತೃತೀಯ ರೂ.3333 ಬಹುಮಾನ ಮೊತ್ತವನ್ನು ಈ ಮಳಿಗೆಯಲ್ಲಿ ವಿಜೇತರಾಗುವ ಅವಕಾಶ ಗ್ರಾಹಕರಿಗೆ ದೊರೆಯಲಿದೆ. ಅಲ್ಲದೆ ರೂ.1000 ಮೇಲ್ಪಟ್ಟ ಖರೀದಿಗೆ ನಗರದ 3ಕಿ.ಮೀ ವ್ಯಾಪ್ತಿಯೊಳಗೆ ಉಚಿತ ಹೋಮ್ ಡೆಲಿವರಿ ಕೂಡ ಗ್ರಾಹಕರಿಗೆ ಲಭ್ಯವಿದೆ. ಪಟಾಕಿ ಖರೀದಿಸಲು ಆಗಮಿಸುವ ಗ್ರಾಹಕರಿಗೆ ತಮ್ಮ ವಾಹನವನ್ನು ಮಾಯಿದೆ ದೇವುಸ್ ಚರ್ಚ್ ಆವರಣದಲ್ಲಿ ಪಾರ್ಕಿಂಗ್ ಮಾಡುವ ಅವಕಾಶವನ್ನು ಕ್ಲಬ್ ಮಾಡಿ ಕೊಟ್ಟಿರುತ್ತಾರೆ. ಗ್ರಾಹಕರು ಆಗಮಿಸಿ, ಪಟಾಕಿ ಖರೀದಿಸಿ ಪ್ರೋತ್ಸಾಹಿಸಬೇಕಾಗಿ ಹಾಗೂ ಹೆಚ್ಚಿನ ಮಾಹಿತಿಗೆ 9741639883, 9448008844 ನಂಬರಿಗೆ ಸಂಪರ್ಕಿಸಬಹುದು ಎಂದು ಕ್ಲಬ್ ಅಧ್ಯಕ್ಷ ಫೆಬಿಯನ್ ಗೋವಿಯಸ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here