ಬಡಗನ್ನೂರು ಗ್ರಾಮ ಪಂಚಾಯತ್‌ ಸಾಮಾನ್ಯ ಸಭೆ

0

ಬಡಗನ್ನೂರು :   ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಾರದ ಎಲ್ಲಾ ದಿವಸ ವೈದ್ಯಾಧಿಕಾರಿ ಕರ್ತವ್ಯ ನಿರ್ವಹಿಸುವಂತೆ ಪುತ್ತೂರು ತಾಲುಕು ವೈದ್ಯಾಧಿಕಾರಿ ರವರೆಗೆ ಬರೆಯಲು ಬಡಗನ್ನೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಸಭೆಯು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಕೆ ರವರ ಅಧ್ಯಕ್ಷತೆಯಲ್ಲಿ ಅ.18 ರಂದು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.
ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳು ನಿಯೋಜನೆಯಲ್ಲಿ ವಾಖಾಯಂ ಮೂರು ದಿನ ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮತ್ತು ಮೂರು ದಿನ ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಇದರಿಂದ ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತುರ್ತು ಚಿಕಿತ್ಸೆ ಪಡೆಯುವಲ್ಲಿ ಜನರು ಅಲೆದಾಡುವ ಪರಿಸ್ಥಿತಿ ಬಂದಿದೆ ಅದರಿಂದ ವಾರದ ಎಲ್ಲಾ ದಿವಸ ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರ ಕರ್ತವ್ಯ ನಿರ್ವಹಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಬರೆಯುವಂತೆ ಸದಸ್ಯ ಧರ್ಮೇಂದ್ರ ಪದಡ್ಕ ಸಭೆಯನ್ನು ಒತ್ತಾಯಿಸಿದರು.
ಈ ಬಗ್ಗೆ ಉಪಾಧ್ಯಕ್ಷ ಸಂತೋಷ್ ಅಳ್ವ ಗಿರಿಮನೆ  ಪ್ರತಿಕ್ರಿಯಿಸಿ ಡಾ ನಿಕಲ್ ಕರೋನ  ಹಾಗೂ ಇತರ ಸಂದರ್ಭದಲ್ಲೂ ಗ್ರಾಮದ ಜನರ ಸಮಸ್ಯೆಗೆ  ಉತ್ತಮ ಸ್ಪಂದನೆ ನೀಡಿದ್ದಾರೆ.ಮೇಲಾಧಿಕಾರಿ ಆದೇಶದಲ್ಲಿ ವಾರದ ಮೂರು ದಿವಸ ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿಯೋಜನೆಯಲ್ಲಿ ಹೋಗಿದ್ದಾರೆ. ಇದರಿಂದ ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ  ಜನರಿಗೆ ತುರ್ತು ಅರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯಲು ತೊಂದರೆ ಉಂಟಾಗಿದೆ  ಅದರಿಂದ ವಾರದ ಎಲ್ಲಾ ದಿನ ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ ಕರ್ತವ್ಯ ನಿರ್ವಹಿಸುವಂತೆ ತಾಲೂಕು ಪ್ರಾಥಮಿಕ ವೈದ್ಯಾಧಿಕಾರಿ ರವರೆಗೆ ಬರೆಯಲು ನಿರ್ಣಯ ಮಾಡುವಂತೆ ಹೇಳಿ ಬಳಿಕ ಸದಸ್ಯ ಒಮ್ಮತದಿಂದ ನಿರ್ಣಯ ಮಾಡಲು ತೀರ್ಮಾನಿಸಲಾಯಿತು.
 ಖಾಯಂ ರಕ್ತ ಪರೀಕ್ಷಾಕರ ನೇಮಕಕ್ಕೆ ಅಗ್ರಹ
ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲವು ವರ್ಷಗಳಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದೆ ಇತ್ತು ಆದರೆ ಈಗ ಕೇಂದ್ರಕ್ಕೆ ಹೊಸ ಕಟ್ಟಡ ಬೇಕಾದಷ್ಟು ಸ್ಥಳಾವಕಾಶ ಹಾಗೂ ಇನ್ನಿತರ ಎಲ್ಲಾ ಮೂಲಭೂತ ಸೌಕರ್ಯಗಳು ಇದ್ದರೂ ಇದುವರೆಗೆ ರಕ್ತ ಪರೀಕ್ಷಾಕರ ಹುದ್ದೆ ಖಾಲಿ ಇದೆ. ವಾರದಲ್ಲಿ ಒಂದು ದಿನ ಮಾತ್ರ ರಕ್ತ ಪರೀಕ್ಷೆ ಮಾಡುತ್ತಾರೆ  ಉಳಿದ ಸಮಯದಲ್ಲಿ ದೂರದ ಪುತ್ತೂರಿಗೆ ಹೋಗಬೇಕಾಗುತ್ತದೆ ಇದರಿಂದ ಬಡತನ ರೇಖೆಗಿಂತ ಕೆಳಗಿನ ಜನರಿಗೆ ತೀರಾ ಸಂಕಷ್ಟಕ್ಕೆ ಎದುರಾಗಿದ್ದಾರೆ ಎಂದು ಸದಸ್ಯ ರವಿರಾಜ ರೈ ಸಜಂಕಾಡಿ ಆಗ್ರಹಿಸಿದರು. ಇವರೊಂದಿಗೆ ಉಪಾಧ್ಯಕ್ಷ ಸಂತೋಷ್ ಅಳ್ವ, ಸದಸ್ಯೆ ಕಲಾವತಿ ಧ್ವನಿ ಗೂಡಿಸಿದರು ಬಳಿಕ ಚರ್ಚಿಸಿ  ಖಾಲಿ ಇರುವ ರಕ್ತ ಪರೀಕ್ಷಾಕರ ಹುದ್ದೆ ಖಾಯಂ ನೇಮಕಾತಿ ಮಾಡುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಬರೆಯಲು ತೀರ್ಮಾನ ಕೈಗೊಳ್ಳಲಾಯಿತು.
ಜೆ.ಜೆ.ಎಮ್ ಕುಡಿಯುವ ನೀರಿನ ಕಾಮಗಾರಿ ಬಗ್ಗೆ ವಾರ್ಡ್ ಸದಸ್ಯರ ಗಮನಕ್ಕೆ ತರದೆ ಕಾಮಗಾರಿ ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ವೇದಿಕೆಯಲ್ಲಿ ಉಪಾಧ್ಯಕ್ಷ ಸಂತೋಷ್ ಅಳ್ವ ಗಿರಿಮನೆ ಉಪಸ್ಥಿತರಿದ್ದರು. ಸಭೆಯಲ್ಲಿ ಸದಸ್ಯರಾದ ರವಿರಾಜ ರೈ ಸಜಂಕಾಡಿ, ಕುಮಾರ ಅಂಬಟೆಮೂಲೆ, ವೆಂಕಟೇಶ್ ಕನ್ನಡ್ಕ, ರವಿಚಂದ್ರ ಸಾರೆಪ್ಪಾಡಿ, ವಸಂತ ಗೌಡ ಕನ್ನಯ, ಧರ್ಮೇಂದ್ರ ಪದಡ್ಕ, ಕಲಾವತಿ ಗೌಡ ಪಟ್ಲಡ್ಕ, ದಮಯಂತಿ ನೆಕ್ಕರೆ, ಸವಿತಾ ನೆರೋತ್ತಡ್ಕ, ಸುಶೀಲ ಪಕ್ಯೊಡ್, ಪುಷ್ಪಲತಾ ದೇವಕಜೆ, ಹೇಮಾವತಿ ಮೋಡಿಕೆ, ಸುಜಾತ ಎಂ,ಜ್ಯೋತಿ ಅಂಬಟೆಮೂಲೆ ಉಪಸ್ಥಿತರಿದ್ದರು.
ಗ್ರಾ.ಪಂ  ಅಭಿವೃದ್ಧಿ ಅಧಿಕಾರಿ ವಸೀಮ ಗಂಧದ ಸ್ವಾಗತಿಸಿ ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here