ಪುತ್ತೂರು: ಹಲವು ವೈಶಿಷ್ಠ್ಯತೆಗಳೊಂದಿಗೆ ಗ್ರಾಹಕರ ಸೇವೆಗೆ ಸಿದ್ದಗೊಂಡಿರುವ ಪ್ರೊಫೆಷನಲ್ ಲೇಡೀಸ್ ಬ್ಯೂಟಿ ಪಾರ್ಲರ್ `ರೋಸ್ಮ್ಯಾಕ್’ ಅ.23ರಂದು ಬೊಳುವಾರಿನ ಜಿ.ಎಲ್. ಟ್ರೇಡ್ ಸೆಂಟರ್ನಲ್ಲಿರುವ ಪೂರ್ಣಚಂದ್ರ ಹೆಲ್ತ್ ಕೇರ್ ಬಳಿ ಶುಭಾರಂಭಗೊಂಡಿತು.
ಸಂಸ್ಥೆಯನ್ನು ಉದ್ಘಾಟಿಸಿದ ಜಿ.ಎಲ್.ಟ್ರೇಡ್ ಸೆಂಟರ್ನ ಮಾಲಕರಾದ ಜಿ.ಎಲ್. ಬಲರಾಮ ಆಚಾರ್ಯ ಮಾತನಾಡಿ, ವಿಭಿನ್ನ ಶೈಲಿಯಲ್ಲಿ ಪ್ರಾರಂಭಗೊಂಡಿರುವ ರೋಸ್ಮ್ಯಾಕ್ ಬ್ಯೂಟಿಪಾರ್ಲರ್ನಲ್ಲಿ ಮಹಿಳೆಯರಿಗೆ ಸೌಂಧರ್ಯ ವರ್ಧಕ ಸೇವೆಗಳು ಒಂದೇ ಸೂರಿನಡಿಯಲ್ಲಿ ದೊರೆಯಲಿದೆ. ಹೆಸರಿನಂತೆ ಪ್ರೊಫೇಷನ್ ಆಗಿ ಪುತ್ತೂರಿನಲ್ಲಿ ತನ್ನದ ಆದ ರೀತಿಯಲ್ಲಿ ಛಾಪು ಮೂಡಿಸಲಿದೆ. ಈ ಪಾರ್ಲರ್ ಮೂಲಕ ಪುತ್ತೂರಿನ ಮಹಿಳೆಯರಿಗೆ ಸೌಂಧರ್ಯ ವರ್ಧಕದಲ್ಲಿ ಹೊಸ ಭರವಸೆ ಮೂಡಿದೆ. ಉತ್ತಮ ಸೇವೆಯ ಮೂಲಕ ಗ್ರಾಹಕರ ಸಹಕಾರ ದೊರೆತು ಇನ್ನಷ್ಟ ಶಾಖೆಗಳು ತೆರೆಯುವಂತಾಗಲಿ ಎಂದು ಹಾರೈಸಿದರು.
ಕೋಡಿಂಬಾಡಿ ಕೃಷ್ಣಕೃಪಾ ಇಂಡಸ್ಟ್ರೀಸ್ನ ಮಾಲಕಿ ಸಹನಾ ಭವಿನ್ ಮಾತನಾಡಿ, ಕಠಿನ ಶ್ರಮ, ಉತ್ತಮ ಸೇವೆಯ ಮೂಲಕ ಉದ್ಯಮದಲ್ಲಿ ಯಶಸ್ಸು ಕಾಣಬೇಕು. ರೋಸ್ಮ್ಯಾಕ್ ಬ್ಯೂಟಿಪಾರ್ಲರ್ನ ಸೇವೆಯಪುತ್ತೂರು ಮಾತ್ರವಲ್ಲದೆ ನೆರೆ ತಾಲೂಕಿನ ಮಹಿಳೆಯರಿಗೂ ಪ್ರಯೋಜನವಾಗಲಿದೆ ಎಂದರು.
ನಮ್ಮ ಮಳಿಗೆಯು ಸಂಸ್ಥೆಯು ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಅತ್ಯಾಧುನಿಕ ಸೌಕರ್ಯಗಳನ್ನು, ಉಪಕರಣಗಳನ್ನು ಹೊಂದಿದೆ. ಅನುಭವಿ ಸಿಬ್ಬಂದಿಗಳು ಸೇವೆ ಒದಗಿಸಲಿದ್ದು, ಗುಣಮಟ್ಟ, ಗ್ರಾಹಕರ ಸುರಕ್ಷತೆಯ ನಿಟ್ಟಿನಲ್ಲಿ ವಿಶೇಷ ನಿಗಾ ವಹಿಸಲಿದೆ. ಮಹಿಳೆಯರ ಸೌಂದರ್ಯವರ್ಧಕ ಕ್ಷೇತ್ರಕ್ಕೆ ಸಂಬಂಧಪಟ್ಟ ಗುಣಮಟ್ಟದ ಸೇವೆಗಳನ್ನು ಒದಗಿಸಲು ಸಂಸ್ಥೆಯು ಸನ್ನದ್ಧವಾಗಿದೆ. ಪ್ರತಿಷ್ಠಿತ ಕಾಸ್ಮೆಟಿಕ್ಸ್ ಬ್ರ್ಯಾಂಡ್ `ಮ್ಯಾಕ್’ನ ಪ್ರಾಡಕ್ಟ್ ಗಳನ್ನೇ ಬಳಸಿಕೊಂಡು ಸೇವೆ ಒದಗಿಸಲಾಗುತ್ತದೆ. ವಿಶಾಲವಾದ ೨೦೦೦ ಸ್ಕ್ವೇರ್ ಫೀಟ್ ವಿಸ್ತೀರ್ಣ ಹೊಂದಿರುವ ಸಂಸ್ಥೆಯಲ್ಲಿ ಸ್ಕಿನ್ ಟ್ರೀಟ್ಮೆಂಟ್, ಹೇರ್ ಟ್ರೀಟ್ಮೆಂಟ್, ಹೇರ್ ಕಟ್ಟಿಂಗ್, ಹೇರ್ ಕಲರ್ ಮತ್ತು ಬ್ರೈಡಲ್ ಮೇಕಪ್ ಸೇವೆಗಳು ಲಭ್ಯವಿದೆ. ಶುಭಾರಂಭದ ಪ್ರಯುಕ್ತ ಬ್ರೈಡಲ್ ಮೇಕ್ಅಪ್ನ ಜೊತೆಗೆ ನಾಲ್ವರಿಗೆ ಉಚಿತವಾಗಿ ಮೇಕ್ಅಪ್ ಸೇವೆ ಲಭಿಸಲಿದೆ. ಮನೆಗೆ ತೆರಳಿ ಮೇಕ್ಅಪ್ ಮಾಡಿಕೊಡುವ ಸೌಲಭ್ಯವೂ ಇದೆ ಎಂದು ಮ್ಹಾಲಕ ಮೊಹಮ್ಮದ್ ಶಾಹೀದ್ ತಿಳಿಸಿದರು.
ಶೇ.70 ಡಿಸ್ಕೌಂಟ್:
ಶುಭಾರಂಭದ ಅಂಗವಾಗಿ ಅ.23ರಂದು ಒಂದು ಶೇ.70 ಬೆಲೆ ಕಡಿತದಲ್ಲಿ ವಿವಿಧ ಸೇವೆಗಳನ್ನು ನೀಡಲಾಗುವುದು ಎಂದು ಮ್ಹಾಲಕ ಮೊಹಮ್ಮದ್ ಶಾಜೀದ್ ತಿಳಿಸಿದರು.