ಪುತ್ತೂರು: ಇಲ್ಲಿನ ಕೋರ್ಟುರಸ್ತೆಯಲ್ಲಿ ಕಳೆದ 23 ವರ್ಷಗಳಿಂದ ವ್ಯವಹರಿಸುತ್ತಿರುವ ಗ್ರಾಹಕರ ಮೆಚ್ಚುಗೆಯ ಚಿನ್ನಾಭರಣಗಳ ಮಳಿಗೆ ವಿಜಿತ್ ಜ್ಯುವೆಲ್ಲರ್ಸ್ ನಲ್ಲಿ 24 ನೇ ವರ್ಷಕ್ಕೆ ಪಾದಾರ್ಪಣೆ ಮತ್ತು ದೀಪಾವಳಿ ಪ್ರಯುಕ್ತ ಲಕ್ಷ್ಮೀ ಪೂಜೆ ಅ. 24 ರಂದು ನಡೆಯಿತು. ವಿಶ್ವಾಸಾರ್ಹತೆ ಮತ್ತು ಅದೃಷ್ಟದ ಚಿನ್ನಾಭರಣ ಖರೀದಿಗೆ ಪುತ್ತೂರಿನಲ್ಲಿ ವಿಜಿತ್ ಜ್ಯುವೆಲ್ಲರ್ಸ್ ಮನೆಮಾತಾಗಿದೆ. ದೀಪಾವಳಿ ಪ್ರಯುಕ್ತ ಮಳಿಗೆಯಲ್ಲಿ ಚಿನ್ನಾಭರಣ ಖರೀದಿಗೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಮಳಿಗೆ ಕಿಕ್ಕಿರಿದು ತುಂಬಿದ್ದ ದೃಶ್ಯ ಕಂಡು ಬಂತು. ಮ್ಹಾಲಕ ಅಚ್ಚುತ ಆಚಾರ್ಯ, ವಿಜಿತ್ ಆಚಾರ್ಯ ಗ್ರಾಹಕರನ್ನು ಬರಮಾಡಿಕೊಂಡು ಸತ್ಕರಿಸಿದರು.
©