ರೈ ಎಸ್ಟೇಟ್ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್‌ನ ದಶ ಸಂಭ್ರಮ- ಫಲಾನುಭವಿಗಳ ಸಮಾವೇಶಕ್ಕೆ ಚಾಲನೆ

0

ಪುತ್ತೂರು: ಕೋಡಿಂಬಾಡಿ ರೈ ಎಸ್ಟೇಟ್ ಮಾಲಕರಾದ ಉದ್ಯಮಿ ಅಶೋಕ್ ಕುಮಾರ್ ರೈ ಸಾರಥ್ಯದ ರೈ ಎಸ್ಟೇಟ್ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ದಶ ಸಂಭ್ರಮ, ಟ್ರಸ್ಟ್ ಫಲಾನುಭವಿಗಳ ಸಮಾವೇಶ, ಸ್ವಾಭಿಮಾನಿ ಬಡವರಿಗೆ ಸನ್ಮಾನ, ಗೂಡುದೀಪ ಸ್ಪರ್ಧೆ, ಸ್ಮರಣ ಸಂಚಿಕೆ ಬಿಡುಗಡೆ, ದೀಪಾವಳಿ ಹಬ್ಬದ ಪ್ರಯುಕ್ತದ ವಸ ವಿತರಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆತಿದೆ.

ಆಶೋಕ್ ರೈಯವರ ತಾಯಿ ಗಿರಿಜಾ ಎಸ್ ರೈ ಯವರು ದೀಪ ಬೆಳಗಿಸಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಅಶೋಕ್ ರೈಯವರ ಸಹೋದರ ಸುಬ್ರಹ್ಮಣ್ಯ ರೈ, ರಾಜ್ ಕುಮಾರ್ ರೈ, ಪತ್ನಿ ಸುಮಾ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ರಾಜರಾಮ ಶೆಟ್ಟಿ ಕೋಲ್ಪೆಗುತ್ತು, ನಿರಂಜನ ರೈ ಮಠಂತಬೆಟ್ಟು, ಉದ್ಯಮಿ ಸುದೇಶ್ ರೈ ಕೋಡಿಂಬಾಡಿ, ಜಯಪ್ರಕಾಶ್ ಬದಿನಾರು, ಯೋಗೀಶ್ ಸಾಮಾನಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here