ಪುತ್ತೂರು: ಸರ್ವಧರ್ಮೀಯರ ಶ್ರದ್ಧಾ ಕೇಂದ್ರವಾಗಿರುವ, 400 ವರ್ಷಗಳ ಇತಿಹಾಸವಿರುವ ಮುಹಿಯುದ್ಧೀನ್ ಜುಮಾ ಮಸೀದಿ ಹಾಗೂ ಖಿದ್ಮತುಲ್ ಇಸ್ಲಾಂ ಜಮಾಅತ್ ಕಮಿಟಿ ನೇತೃತ್ವದಲ್ಲಿ ಚೆನ್ನಾವರ ಸಿರಾಜುಲ್ ಉಲೂಂ ನೂತನ ಮದ್ರಸ ಕಟ್ಟಡವನ್ನು ಅ.27ರಂದು ಬೆಳಗ್ಗೆ 7 ಗಂಟೆಗೆ ಕಡಲುಂಡಿಯ ತಂಳ್ ಸಯ್ಯಿದ್ ಬದರ್ರುಸ್ಸಾದಾತ್ ಇಬ್ರಾಹಿಂ ಖಲೀಲ್ ಅಲ್-ಬುಖಾರಿ ಉದ್ಘಾಟಿಸಲಿದ್ದಾರೆ ಎಂದು ಮುಹಿಯದ್ಧೀನ್ ಜುಮಾ ಮಸ್ಜಿದ್ ಅಧ್ಯಕ್ಷ ಮಹಮ್ಮದ್ ಶಾಫಿ ಹೇಳಿದರು. ಅವರು ಅ.25ರಂದು ಸುದ್ದಿ ಮೀಡಿಯಾ ಸೆಂಟರ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಸಂಜೆ 4ಗಂಟೆಗೆ ಜರುಗುವ ಸಭಾ ಕಾರ್ಯಕ್ರಮದಲ್ಲಿ ಸಯ್ಯಿದ್ ಶಮೀರಲಿ ಶಿಹಾಬ್ ತಂಳ್ ಪಾಣಕ್ಕಾಡ್ ದುಆ ನೆರವೇರಿಸಲಿದ್ದಾರೆ. ಚೆನ್ನಾವರ ಮುದರ್ರಿಸ್ ಸಯ್ಯಿದ್ ಅಬ್ದುಲ್ ಲತೀಫ್ ಬಾಅಲವಿ ತಂಳ್ ಅಹ್ಸನಿ ಅಲ್-ಕಾಮಿಲ್ ಸಖಾಫಿ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಸಯ್ಯಿದ್ ಹಾಮಿದ್ ತಂಳ್ ಮಹಿಮ್ಮಾತ್ ಸಭೆ ಉದ್ಘಾಟಿಸಲಿದ್ದು, ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಎನ್.ಕೆ.ಎಂ ಶಾಫಿ ಸಅದಿ ಬೆಂಗಳೂರು ನೂತನ ಕಾಮಗಾರಿಗೆ ಶಿಲಾನ್ಯಾಸ ಮಾಡಲಿದ್ದಾರೆ.
ಆಶಿಕ್ ದಾರಿಮಿ ಆಲಪ್ಪುಝ ಹಾಗೂ ಪೇರೋಡ್ ಮುಹಮ್ಮದ್ ಅಝ್ಹರಿ ಮುಖ್ಯ ಪ್ರಭಾಷಣಗೈಯಲಿದ್ದಾರೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಕರ್ನಾಟಕ ವಕ್ ಬೋರ್ಡ್ ಬೆಂಗಳೂರು ಅರ್ಬನ್‌ನ ಉಪಾಧ್ಯಕ್ಷ ಉಮ್ಮರ್ ಹಾಜಿ, ಭಾ.ಜ.ಪ ಅಲ್ಪ ಸಂಖ್ಯಾತ ಮೋರ್ಚಾ ಘಟಕದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಫಝಲ್ ಅಸೈಗೋಳಿ, ದ.ಕ ಜಿಲ್ಲಾ ವಕ್ ಬೋರ್ಡ್ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್, ಇಸ್ಮಾಯಿಲ್ ಮಾಸ್ಟರ್ ಕೊಳಕೇರಿ, ಅನೀಸ್ ಕೌಸರಿ, ದ.ಕ ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಅಬ್ದರ್ರಹ್ಮಾನ್ ಮತ್ತಿತರ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಬೆಳಗ್ಗೆ 11ಗಂಟೆಗೆ ಗುರು ಶಿಷ್ಯ ಸಂಗಮ ಕಾರ್ಯಕ್ರಮ ನಡೆಯಲಿದ್ದು. ಅನ್ನಸಂತರ್ಪಣೆಯೊಂದಿಗೆ ಕಾರ್ಯಕ್ರಮ ಕೊನೆಗೊಳ್ಳಲಿದೆ’ ಎಂದು ಮಹಮ್ಮದ್ ಶಾಫಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಖಿದ್ಮತುಲ್ ಇಸ್ಲಾಂ ಜಮಾಅತ್ ಕಮಿಟಿ ಉಪಾಧ್ಯಕ್ಷ ಹನೀಫ್ ಇಂದ್ರಾಜೆ, ಕಾರ್ಯದರ್ಶಿ ಇಸ್ಮಾಯಿಲ್ ಕಾನಾವು, ಸದಸ್ಯರಾದ ಅಬ್ದುಲ್ ರಹಿಮಾನ್ ಪಾಲ್ತಾಡ್, ರಿಯಾಜ್ ಕಾನಾವು, ಇಕ್ಬಾಲ್ ಮಾಸ್ಟರ್ ಮತ್ತಿತರರು ಉಪಸ್ಥಿತರಿದ್ದರು.