ಮುರದಲ್ಲಿ ನಾಟಿವೈದ್ಯೆ ದಿ. ಮುತ್ತಮ್ಮ ಸ್ಮರಣಾರ್ಥ ಮುಳಿಯ ಬಸ್ ತಂಗುದಾಣ ಲೋಕಾರ್ಪಣೆ

0

ಕಬಕದಲ್ಲಿ ಒಂದು ತಿಂಗಳಲ್ಲಿ ಸ್ಮಾರ್ಟ್ ಬಸ್ ತಂಗುದಾಣ – ಸಂಜೀವ ಮಠಂದೂರು
ಮುತ್ತಮಜ್ಜಿಯ ಸಮಾಜ ಸೇವೆಗೆ ಸಮರ್ಪಣೆ ಮಾಡಿದ್ದೇವೆ – ಕೇಶವಪ್ರಸಾದ್ ಮುಳಿಯ
ಭಾವನಾತ್ಮಕ ಸಮಾಜ ಕಾರ್ಯ – ಕೃಷ್ಣಾರಾಯಣ ಮುಳಿಯ
ಇನ್ನಷ್ಟು ಬಸ್ ತಂಗುದಾಣಕ್ಕೆ ಅನುದಾನ ಬೇಕು – ವಿನಯ ಕಲ್ಲೇಗ

ಪುತ್ತೂರು: ಮುಳಿಯ ಜ್ಯುವೆಲ್ಸ್ ವತಿಯಿಂದ ನಾಟಿವೈದ್ಯೆ ದಿ ಮುತ್ತಮ್ಮ ಅವರ ಸ್ಮರಣಾರ್ಥ ಕಬಕ ಗ್ರಾ.ಪಂ ವ್ಯಾಪ್ತಿಯ ಮುರದಲ್ಲಿ ಮುಳಿಯ ಬಸ್ ತಂಗುದಾಣದ ಲೋಕಾರ್ಪಣೆ ಅ.26 ರಂದು ಸಂಜೆ ನಡೆಯಿತು. ಶಾಸಕ ಸಂಜೀವ ಮಠಂದೂರು ಮತ್ತು ಸುಲೋಚನಾ ಅವರು ಉದ್ಘಾಟಿಸಿದರು.


ಕಬಕದಲ್ಲಿ ಒಂದು ತಿಂಗಳಲ್ಲಿ ಸ್ಮಾರ್ಟ್ ಬಸ್ ತಂಗುದಾಣ:
ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಬಿಸಿಲು, ಮಳೆ, ಗಾಳಿಯ ರಕ್ಷಣೆಗೆ ಮಾತ್ರ ಬಸ್ ತಂಗುದಾಣವಾಗಿ ಉಳಿಯದೇ ಅಲ್ಲಿ ನೆಮ್ಮದಿ ಮತ್ತು ಆಶ್ರಯತಾಣವಾಗಿ ಸೌಕರ್ಯ ಇರುವಂತಿರಬೇಕು. ಈ ನಿಟ್ಟಿನಲ್ಲಿ ಪುತ್ತೂರು ನಗರದಲ್ಲಿ ಸ್ಮಾರ್ಟ್ ಬಸ್ ತಂಗುದಾಣ ಮಾಡಿದ್ದೇವೆ. ನಗರಸಭೆಯ ಮೂಲಭೂ ಸೌಕರ್ಯಕ್ಕೆ ರೂ. ೨೫ಲಕ್ಷ ಅನುದಾನ ನೀಡಿದೆ. ಅದೇ ರೀತಿ ಕಬಕ ಗ್ರಾ.ಪಂಗೂ ಅನುದಾನ ನೀಡಿದೆ. ಈ ಹಿನ್ನಲೆಯಲ್ಲಿ ಮುರದಲ್ಲಿ ನಾಟಿ ವೈದ್ಯೆ ದಿ. ಮುತ್ತಮ್ಮ ಅವರ ಸ್ಮರಣಾರ್ಥ ಮುಳಿಯ ಜ್ಯುವೆಲ್ಸ್ ಸಂಸ್ಥೆಯ ಮೂಲಕ ಬಸ್‌ತಂಗುದಾಣ ನಿರ್ಮಾಣ ಆಗಿದೆ. ಕಬಕದಲ್ಲಿ ನೂತನ ಬಸ್ ತಂಗುದಾಣಕ್ಕೆ ರೂ.25ಲಕ್ಷ ನೀಡಿದ್ದೇನೆ. ಮುಂದಿನ ಒಂದು ತಿಂಗಳಲ್ಲಿ ಬಸ್ ತಂಗುದಾಣ ನಿರ್ಮಾಣ ಆಗಲಿದೆ ಎಂದು ಭರವಸೆ ನೀಡಿದ ಅವರು ಆಟೋ ರಿಕ್ಷಾ ತಂಗುದಾಣಕ್ಕೂ ಅನುದಾನ ನೀಡಲಿದ್ದೇನೆ. ಪುತ್ತೂರಿನಲ್ಲಿ 10 ಆಟೋ ರಿಕ್ಷಾ ತಂಗುದಾಣ ನಿರ್ಮಾಣ ಆಗಲಿದೆ ಎಂದರು.

ಮುತ್ತಮಜ್ಜಿಯ ಸಮಾಜ ಸೇವೆಗೆ ಸಮರ್ಪಣೆ ಮಾಡಿದ್ದೇವೆ:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರೂ ಮತ್ತು ಮುಳಿಯ ಜ್ಯುವೆಲ್ಸ್‌ನ ಆಡಳಿತ ನಿರ್ದೇಶಕ ಕೇಶವ ಪ್ರಸಾದ್ ಮುಳಿಯ ಅವರು ಮಾತನಾಡಿ ಮುರಕ್ಕೂ ನಮಗೂ ಉತ್ತಮ ಸಂಬಂವಿದೆ. ಹಿಂದೆ ಮುತ್ತಮಜ್ಜಿಯ ಮನೆಯ ಮುಂದಿನ ದಾರಿಯನ್ನೇ ಬಳಸಿ ನಾವು ಅಜ್ಜನ ಮನೆಗೆ ಹೋಗುತ್ತಿದ್ದೆವು. ಅದೆ ರೀತಿ ಇವತ್ತು ಅವರ ಸಮಾಜ ಸೇವೆಗೆ ನಮ್ಮಿಂದ ಒಂದು ಬಸ್ ತಂಗುದಾಣ ಸಮರ್ಪಣೆ ಮಾಡುವ ಅವಕಾಶ ಲಭಿಸಿರುವುದು ಸಂತೋಷ ಎಂದರು.

ಭಾವನಾತ್ಮಕ ಸಮಾಜ ಕಾರ್ಯ:
ಮುಳಿಯ ಜ್ಯುವೆಲ್ಸ್‌ನ ಆಡಳಿ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ಅವರು ಮಾತನಾಡಿ ಪೊಳ್ಯ, ಮುರ, ಕೊಡಿಪ್ಪಾಡಿ ನಮ್ಮ ಫ್ಯಾಮಿಲಿಗೆ ಬಹಳ ಹತ್ತಿರ. ಇಂತಹ ಭಾವನಾತ್ಮಕ ಸಂಬಂಧದಲ್ಲಿ ಭಾವನಾತ್ಮಕ ಸಮಾಜ ಕಾರ್ಯ ಆಗಿರುವುದು ಸಂತೋಷ ಎಂದರು.
ಇನ್ನಷ್ಟು ಬಸ್ ತಂಗುದಾಣಕ್ಕೆ ಅನುದಾನ ಬೇಕು:
ಕಬಕ ಗ್ರಾ.ಪಂ ಅಧ್ಯಕ್ಷ ವಿನಯ ಕುಮಾರ್ ಅವರು ಮಾತನಾಡಿ ಪಂಚಾಯತ್‌ಗೆ ಬರುವ ಅನುದಾನವನ್ನು ನಾವು ಕಾಂಕ್ರೀಟ್ ರಸ್ತೆಗೆ ಇಟ್ಟಿದ್ದೇವೆ. ಹಾಗಾಗಿ ಬಸ್ ತಂಗುದಾಣಕ್ಕೆ ಅನುದಾನ ಇಲ್ಲ. ಹಾಗಾಗಿ ಮುಂದೆ ನಮಗೆ ನೂತನ ಬಸ್‌ತಂಗುದಾಣದ ಎದುರು ಬದಿಯೂ ಬಸ್ ತಂಗುದಾಣದ ಮತ್ತು ಪೋಳ್ಯದಲ್ಲಿ ಬಸ್ ತಂಗುದಾಣ ಬೇಕಾಗಿದೆ. ಅದಕ್ಕೆ ಶಾಸಕರು ಅನುದಾನ ನೀಡಬೇಕು ಎಂದು ವಿನಂತಿಸಿದರು. ಇದೇ ಸಂದರ್ಭದಲ್ಲಿ ಮುಳಿಯ ಜ್ಯುವೆಲ್ಸ್‌ನ ಸುಲೋಚನಾ ಮತ್ತು ಮುಳಿಯ ಸಂಸ್ಥೆಯ ಆಡಳಿತ ನಿರ್ದೇಶಕರಾದ ಕೇಶವಪ್ರಸಾದ್ ಮುಳಿಯ ಮತ್ತು ಕೃಷ್ಣನಾರಾಯಣ ಮುಳಯ ಅವರನ್ನು ಗೌರವಿಸಲಾಯಿತು. ಕಬಕ ಗ್ರಾ.ಪಂ ಸದಸ್ಯ ಶಾಬಾ, ತಾ.ಪಂ ಕಾರ್ಯನಿರ್ವಹಾಕ ಅಧಿಕಾರಿ ನವೀನ್ ಭಂಡಾರಿ, ಮುಳಿಯ ಸಂಸ್ಥೆಯ ಸುಲೋಚನಾ, ಪ್ರಗತಿಪರ ಕೃಷಿಕ ಜಿನ್ನಪ್ಪ ಪೂಜಾರಿ, ಹಸೈನಾರ್ ಬನಾರಿ, ಡಾ.ರಾಧಾಕೃಷ್ಣ, ಮುಳಿಯ ಸಂಸ್ಥೆಯ ಶಾಖಾ ಪ್ರಬಂದ ನಾಮದೇವ ಪ್ರಭು, ಜನಾರ್ದನ, ಖಾದರ್ ಪೋಳ್ಯ, ಶಂಕರಿ, ಹೊನ್ನಪ್ಪ ನಳಿಕೆ, ಜಿನ್ನಪ್ಪ ಗೌಡ, ಬಾಬು ಗೌಡ ಕಲ್ಲೆಗ ಸಹಿತ ಅನೇಕರು ಉಪಸ್ಥಿತರಿದ್ದರು. ಕಬಕ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಆಶಾ ಸ್ವಾಗತಿಸಿದರು. ಉಪಾಧ್ಯಕ್ಷ ರುಕ್ಮಯ ಗೌಡ ವಂದಿಸಿದರು. ಸಂತೋಷ್ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮದಾಸ್ ಗೌಡ, ಸುದರ್ಶನ್ ಮುರ, ಪುರುಷೋತ್ತಮ ಮುಂಗ್ಲಿಮನೆ, ನವೀನ್ ಪಡ್ನೂರು ಅನೇಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here