ಪುತ್ತೂರು: ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘದ ಶತಮಾನೋತ್ಸವದ ಶತಕಾರ್ಯಕ್ರಮದ ಅಂಗವಾಗಿ ಕುರಿಯ ಗ್ರಾಮದ ನೆಕ್ಕರೆಯ ಪ್ರಗತಿಪರ ಕೃಷಿಕ ಹಾಗೂ ಹೈನುಗಾರಿಕಾ ಕ್ಷೇತ್ರದ ಸಾಧಕ ಮುಕುಂದ ಪ್ರಭುಗಳ ಮನೆಯಲ್ಲಿ ವೇದಮೂರ್ತಿ ಚಂದ್ರಶೇಖರ ಭಟ್ ನೇತೃತ್ವದಲ್ಲಿ ಗೋಪೂಜೆ ನಡೆಯಿತು.
ಈ ಸಂದರ್ಭದಲ್ಲಿ ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯಕ್ ತೆಂಕಿಲ ಮುಕುಂದ ಪ್ರಭು ಮತ್ತು ಸವಿತಾ ಪ್ರಭು ದಂಪತಿಯನ್ನು ಸನ್ಮಾನಿಸಿ ಗೌರವಿಸಿ ದಂಪತಿಯ ಗೋ ಸೇವೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಸಂಘದ ಉಪಾಧ್ಯಕ್ಷ ಹರೀಶ್ ಬೋರ್ಕರ್ ಕತ್ತಲಕಾನ, ಶತಮಾನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಪುಂಡಿಕಾಯಿ, ಸಂಘದ ನಿರ್ದೇಶಕರು ಮತ್ತು ಸರಸ್ವತಿ ಮಹಿಳಾ ಮಂಡಳಿಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಂಘದ ಕೋಶಾಧಿಕಾರಿ ರಮೇಶ್ ಪ್ರಭು ಸಂಪ್ಯ ಪ್ರಸ್ತಾಪಿಸಿ, ರೇಖಾ ಪ್ರಭು ಸಂಪ್ಯ ಸ್ವಾಗತಿಸಿದರು. ಸಂಘದ ಸಹಕಾರ್ಯದರ್ಶಿ ಹರಿಶ್ಚಂದ್ರ ನಾಟೆಕಲ್ಲು ವಂದಿಸಿದರು. ಸಂಘದ ಕಾರ್ಯದರ್ಶಿ ಮೂಲಚಂದ್ರ ಕಾಂಚನ ಕಾರ್ಯಕ್ರಮ ನಿರೂಪಿಸಿದರು.