ಪುತ್ತೂರು: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ನೆಲ್ಲಿಕಟ್ಟೆ ಪುತ್ತೂರು,ಹಾಗೂ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿ ಇದರ ಸಹಯೋಗದಲ್ಲಿ ಶ್ರೀ ಆಲೂರು ವೆಂಕಟ್ ರಾವ್ ಭಾಷಾ ಕೌಶಲ್ಯ ತರಬೇತಿ ಕೇಂದ್ರಗಳ ಆಶ್ರಯದಲ್ಲಿ ತಾಲೂಕು ಮಟ್ಟದ ತುಳುಸಿರಿ ಸಂಸ್ಕೃತಿ ಉತ್ಸವದ ತುಳು ಸ್ಪರ್ಧೆಗಳಲ್ಲಿ ಪ್ರಿಯದರ್ಶಿನಿ ವಿದ್ಯಾಸಂಸ್ಥೆ ಬೆಟ್ಟಂಪಾಡಿ ಇಲ್ಲಿಯ ವಿದ್ಯಾರ್ಥಿಗಳು ಭಾಗವಹಿಸಿದರು.
ಸಮೂಹ ನೃತ್ಯ ಚೆನ್ನು ನಲಿಕೆಯಲ್ಲಿ ಮಧುರಾ ಆಳ್ವ ಮತ್ತು ತಂಡ ಪ್ರಥಮ ಸ್ಥಾನ, ತುಳುಪಾಡ್ದನ ಸ್ಪರ್ಧೆಯಲ್ಲಿ ರಿಧಿ ರೈ 7ನೇ ತರಗತಿ ಪ್ರಥಮ ಸ್ಥಾನ, ಹಾಗು ತುಳು ಒಗಟು ಸ್ಪರ್ಧೆಯಲ್ಲಿ 8ನೇ ತರಗತಿ ವಿದ್ಯಾರ್ಥಿನಿಯರಾದ ಹಂಶಿತಾ ಮತ್ತು ಧನ್ವಿ ಬಿ ಶೆಟ್ಟಿ ತೃತೀಯ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು ಮತ್ತು ಅಧ್ಯಾಪಕ ವೃಂದ ಪ್ರಶಂಶೆ ವ್ಯಕ್ತಪಡಿಸಿದ್ದಾರೆ.