ಕಾವು: ಸುಜ್ಞಾನ ಮಕ್ಕಳ ಭಜನಾ ಸಂಘದಿಂದ ಗ್ರಾಮದೇವರಿಗೆ ಕುಣಿತ ಭಜನೆ ಸಮರ್ಪಣೆ-ಗುರುವಂದನೆ

0

ಕಾವು: ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಾವು ನನ್ಯ ತುಡರ್ ಯುವಕ ಮಂಡಲದ ಅಧೀನದಲ್ಲಿರುವ ಸುಜ್ಞಾನ ಮಕ್ಕಳ ಭಜನಾ ಸಂಘದ ಸದಸ್ಯರಿಂದ ಕುಣಿತ ಭಜನಾ ತಂಡ ತರಬೇತಿಗೊಂಡಿದ್ದು, ಅ.27ರಂದು ಸಂಜೆ ಕುಣಿತ ಭಜನೆಯ ಸಮರ್ಪಣೆ ಮತ್ತು ಗುರುವಂದನೆ ಕಾರ್ಯಕ್ರಮವು ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.

ಸುಜ್ಞಾನ ಮಕ್ಕಳ ಭಜನಾ ಸಂಘ ಆರಂಭ:
ಕಾವು ತುಡರ್ ಯುವಕ ಮಂಡಲದ ನೇತೃತ್ವದಲ್ಲಿ 2019ರಲ್ಲಿ ದಾಸ ಸಾಹಿತ್ಯ ಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆಯವರಿಂದ 5 ತಿಂಗಳುಗಳ ಕಾಲ ನಡೆದಿದ್ದ ಭಜನಾ ತರಬೇತಿಯಲ್ಲಿ ತರಬೇತಿ ಪಡೆದಿದ್ದ ಮಕ್ಕಳನ್ನು ಸೇರಿಸಿಕೊಂಡು ತುಡರ್ ಯುವಕ ಮಂಡಲದ ಅಧೀನದಲ್ಲಿ ಸುಜ್ಞಾನ ಮಕ್ಕಳ ಭಜನಾ ಸಂಘವನ್ನು ಉದ್ಘಾಟನೆ ಮಾಡಲಾಗಿತ್ತು. ಯುವಕ ಮಂಡಲದ ಮಾಜಿ ಅಧ್ಯಕ್ಷ ಗಂಗಾಧರ ನಾಯ್ಕರವರನ್ನು ಸುಜ್ಞಾನ ಮಕ್ಕಳ ಭಜನಾ ಸಂಘದ ಸಂಚಾಲಕರಾಗಿ ನೇಮಕ ಮಾಡಲಾಗಿತ್ತು.

ಕುಣಿತ ಭಜನೆ ಆರಂಭ:
ಯುವಕ ಮಂಡಲದ ಅಧೀನದಲ್ಲಿ ಕುಣಿತ ಭಜನಾ ತಂಡ ಆರಂಭ ಮಾಡುವ ನಿಟ್ಟಿನಲ್ಲಿ 2021ರಲ್ಲಿ ಸುಜ್ಞಾನ ಮಕ್ಕಳ ಭಜನಾ ಸಂಘದ ಸದಸ್ಯರಿಗೆ ಕುಣಿತ ಭಜನೆಯ ತರಬೇತಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಬಳಿಕ ಪ್ರತಿ ಆದಿತ್ಯವಾರದಂದು ಮಕ್ಕಳಿಗೆ ಕುಣಿತ ಭಜನೆಯ ತರಬೇತಿ ನೀಡಲಾಗುತ್ತಿತ್ತು, ಧನಂಜಯ ಕುಮಾರ್ ಸಿ.ಟಿಯವರು ಮಕ್ಕಳಿಗೆ ಭಜನಾ ತರಬೇತಿಯನ್ನು ನೀಡುತ್ತಿದ್ದರು. ಸುಮಾರು 20 ಮಕ್ಕಳು ಕುಣಿತ ಭಜನೆಯ ತರಬೇತಿಯನ್ನು ಪಡೆದಿದ್ದಾರೆ.

ಗ್ರಾಮ ದೇವರಿಗೆ ಭಜನಾ ಸಮರ್ಪಣೆ:
ಕುಣಿತ ಭಜನೆ ತರಬೇತಿಯಲ್ಲಿ ತರಬೇತಿ ಪಡೆದಿದ್ದ ಸುಜ್ಞಾನ ಮಕ್ಕಳ ಭಜನಾ ಸಂಘದ ಸದಸ್ಯರ ಕುಣಿತ ಭಜನಾ ಕಾರ್ಯಕ್ರಮವನ್ನು ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಸುವ ಮೂಲಕ ಮೊದಲ ಕುಣಿತ ಭಜನೆಯನ್ನು ಗ್ರಾಮದೇವರಿಗೆ ಸಮರ್ಪಣೆ ಮಾಡಲಾಯಿತು. ಕುಣಿತ ಭಜನಾ ತಂಡದಿಂದ ಕಾವು ಶ್ರೀ ಪಂಚಲಿಂಗೇಶ್ವರ ದೇವರಿಗೆ ವಿಶೇಷವಾಗಿ ಸೋಮವಾರ ಪೂಜೆ ಸೇವೆ ಸಲ್ಲಿಸಿ ಪ್ರಾರ್ಥನೆ ಮಾಡಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ಶಿವಪ್ರಸಾದ್ ಕಡಮಣ್ಣಾಯರವರು ಪೂಜೆ ಸಲ್ಲಿಸಿ ಪ್ರಸಾದ ನೀಡಿದರು.

ಗುರುವಂದನೆ:
ಕುಣಿತ ಭಜನೆ ತರಬೇತಿ ನೀಡಿದ ಧನಂಜಯ ಕುಮಾರ್ ಸಿ.ಟಿಯವರಿಗೆ ಸುಜ್ಞಾನ ಮಕ್ಕಳ ಭಜನಾ ಸಂಘದ ವತಿಯಿಂದ ಗುರುವಂದನೆ ಸಲ್ಲಿಸಲಾಯಿತು. ಸನ್ಮಾನಿತರಿಗೆ ಶಾಲು ಹೊದಿಸಿ, ಫಲಪುಷ್ಫ, ಸ್ಮರಣಿಕೆ, ಗುರುಕಾಣಿಕೆ ನೀಡಿ ಗೌರವಿಸಲಾಯಿತು. ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಚಂದ್ರಶೇಖರ ರಾವ್ ನಿಧಿಮುಂಡರವರು ಗುರುವಂದನೆ ಕಾರ್ಯಕ್ರಮ ನಡೆಸಿಕೊಟ್ಟು ಕುಣಿತ ಭಜನಾ ಸಂಘಕ್ಕೆ ಶುಭಾಶಯ ಸಲ್ಲಿಸಿದರು. ಸುಜ್ಞಾನ ಮಕ್ಕಳ ಭಜನಾ ಸಂಘದ ಸಂಚಾಲಕ ಗಂಗಾಧರ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.
ಈ ಸಂದರ್ಭದಲ್ಲಿ ತುಡರ್ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುಬ್ರಾಯ ಬಲ್ಯಾಯ, ಗೌರವಾಧ್ಯಕ್ಷ ಶೇಷಪ್ಪ ಗೌಡ ಪರನೀರು, ಅಧ್ಯಕ್ಷ ಜಗದೀಶ ನಾಯ್ಕ ಆಚಾರಿಮೂಲೆ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಆಚಾರ್ಯ ನನ್ಯ, ಪದಾಧಿಕಾರಿಗಳಾದ ಶ್ರೀಕುಮಾರ್ ಬಲ್ಯಾಯ, ಹರೀಶ್ ಕೆರೆಮೂಲೆ, ಹರ್ಷ ಎ.ಎರ್, ಭಜನಾ ಸಂಘದ ಗೌರವಾಧ್ಯಕ್ಷ ರಾಮಣ್ಣ ನಾಯ್ಕ ಆಚಾರಿಮೂಲೆ, ಅಧ್ಯಕ್ಷ ಸಂಕಪ್ಪ ಪೂಜಾರಿ ಚಾಕೋಟೆ, ಕಾರ್ಯದರ್ಶಿ ಚಂದ್ರಶೇಖರ ಬಲ್ಯಾಯ, ಮಾಜಿ ಅಧ್ಯಕ್ಷರಾ ಭಾಸ್ಕರ ಬಲ್ಯಾಯ, ಸುನೀಲ್ ನಿಧಿಮುಂಡ, ನವೀನ ನನ್ಯಪಟ್ಟಾಜೆ, ಸದಸ್ಯರಾದ ಲಿಂಗಪ್ಪ ನಾಯ್ಕ ನನ್ಯ, ಶ್ರೀಕಾಂತ್ ಗೌಡ, ಸುರೇಶ್ ಮಾಣಿಯಡ್ಕರವರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here