ಪುತ್ತೂರು: ವರ್ಗಾವಣೆ ವಿಚಾರದಲ್ಲಿ ಶಿಕ್ಷಣ ಸಚಿವರು ಮತ್ತು ಗೃಹ ಸಚಿವರಿಗೆ ಮೊಬೈಲ್ ಸಂದೇಶ ಮೂಲಕ ಒತ್ತಡ ಹೇರಿ ಶಿಕ್ಷಕರನ್ನು ಶಾಲೆಯಲ್ಲೇ ಉಳಿಸುವಲ್ಲಿ ರಾಜ್ಯವ್ಯಾಪಿ ಸುದ್ದಿಯಾಗಿದ್ದ ದಿವಿತ್ ಯು ರೈ ಅವರು ಮುಂದೆ ರಾಮಕೃಷ್ಣ ಶಾಲೆಯಲ್ಲಿ ಕಲಿಯುತ್ತಿರುವ ಸಂದರ್ಭ ಬರೆದ ಆಂಗ್ಲ ಕವನ ಸಂಕಲನದ ಪದ್ಯವು ಈ ಬಾರಿ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಕಲಿಕಾ ಚೇತರಿಕೆ ಪಠ್ಯದಲ್ಲಿ ಕಲಿಕೆಗಾಗಿ ಪ್ರಕಟವಾಗಿದೆ. ಈ ಮೂಲಕ ದಿವಿತ್ ರೈ ಅವರು ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ದಿವಿತ್ ಯು ರೈ ಅವರು ಹಾರಾಡಿ ಶಾಲೆಯಲ್ಲಿರುವಾಗ ವರ್ಗಾವಣೆ ವಿಚಾರದ ಮೂಲಕ ಶಿಕ್ಷಕರನ್ನು ಉಳಿಸುವಲ್ಲಿ ರಾಜ್ಯವ್ಯಾಪಿ ಸುದ್ದಿಯಾಗಿದ್ದರು ಇದೇ ಸಂದರ್ಭದಲ್ಲಿ ಅವರು ತನ್ನ ಪ್ರಥಮ ಕವನ ಸಂಕಲನ ಬರೆದಿದ್ದರು. ಬಳಿಕ ರಾಮಕೃಷ್ಣ ಪ್ರೌಢಶಾಲೆಯಲ್ಲಿರುವ ಸಂದರ್ಭ ‘ಸಿಂಪಲ್ ಲೈಫ್’ ಎಂಬ ಕವನ ಸಂಕಲನ ಬರೆದು ಬಿಡುಗಡೆಗೊಳಿಸಿದ್ದರು.
ಪ್ರಸಕ್ತ ವರ್ಷ ಕಲಿಕಾ ಚೇತರಿಕೆ ಚಟುವಟಿಕೆ ಪುಸ್ತಕ ತಯಾರಿಸುವ ವಿಭಾಗದವರು ದಿವಿತ್ ರೈ ಅವರ ಕವನ ಸಂಕಲನವನ್ನು ಆಯ್ಕೆ ಮಾಡಿಕೊಂಡು ಪ್ರಕಟಿಸಿದ್ದಾರೆ. ಕಲಿಕಾ ಚೇತರಿಕೆಯ 132ನೇ ಪುಟದಲ್ಲಿ ಈ ಕವನ ಸಂಕಲನವಿದೆ.
ಪ್ರಸ್ತುತ ಇವರು ಸಹ್ಯಾದ್ರಿ ಕಾಲೇಜಿನಲ್ಲಿ ದ್ವಿತಿಯ ವರ್ಷದ ತಾಂತ್ರಿಕ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರ ತಂದೆ ಉದಯಕುಮಾರ್ ರೈ ಬಂಬ್ರಾಣ ನೀಲಪ್ಪಾಡಿ, ತಾಯಿ ಪ್ರತಿಮಾ ಯು ರೈ ಅವರ ಪ್ರೋತ್ಸಾಹ ಮತ್ತು ಕಡಬ ಸರಕಾರ ಪ್ರೌಢಶಾಲೆಯ ಶಿಕ್ಷಕ ಪ್ರಶಾಂತ್ ಅನಂತಾಡಿಯವರ ಮಾರ್ಗದರ್ಶದಲ್ಲಿ ಪುಸ್ತಕ ಬರೆದಿದ್ದರು.