ಪುತ್ತೂರು : ಬಲ್ನಾಡು ಗ್ರಾಮದ ಕಟ್ಟೆಮನೆ ದಿ.ಲಿಂಗಪ್ಪ ಗೌಡರವರ ಪತ್ನಿ ಪದ್ಮಾವತಿ ಬಿ.ಕೆ.(92ವ.)ರವರು ಅ.28ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರರಾದ ಬಾಲಕೃಷ್ಣ ಗೌಡ, ಮೋಹನ ಗೌಡ, ಪುತ್ರಿಯರಾದ ರತ್ನಾವತಿ, ಹೇಮಾವತಿಯವರನ್ನು ಅಗಲಿದ್ದಾರೆ.
ಶಾಸಕ ಸಂಜೀವ ಮಠಂದೂರು, ನಗರಸಭಾ ಸದಸ್ಯೆ ಪೂರ್ಣಿಮಾ, ಬಲ್ನಾಡು ಶ್ರೀದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಅಧ್ಯಕ್ಷ ಮಾಧವ ಗೌಡ ಕಾಂತಿಲ ಮತ್ತಿತರರು ಆಗಮಿಸಿ ಮೃತರ ಅಂತಿಮ ದರ್ಶನ ಪಡೆದರು.