








ಪುತ್ತೂರು : ಕಲ್ಲಾರೆ ಗಿರಿಜಾ ಕ್ಲಿನಿಕ್ ಎದುರುಗಡೆಯಿರುವ ಶ್ರೀಮಹಾಲಿಂಗೇಶ್ವರ ಗ್ಲಾಸ್ ಮತ್ತು ಪ್ಲೈವುಡ್ಸ್ 11ನೇ ವರ್ಷಕ್ಕೆ ಪಾದಾರ್ಪಣೆಗೊಂಡ ಪ್ರಯುಕ್ತ ಅ.29ರಂದು ಬೆಳಿಗ್ಗೆ ಗಣಹೋಮ ಹಾಗೂ ಲಕ್ಷ್ಮೀಪೂಜೆ ನಡೆಯಿತು. ಸಂಸ್ಥೆಯ ಮಾಲಕ ಜಗನ್ನಾಥ ಗೌಡ ನಿಡ್ಯಾಳಗುತ್ತು ಅತಿಥಿಗಳನ್ನು ಸ್ವಾಗತಿಸಿದರು. ಮಾಲಕರ ಪತ್ನಿ ಪ್ರತಿಭಾ ಜಗನ್ನಾಥ ಗೌಡ ವಂದಿಸಿದರು. ಮಾಲಕರ ತಾಯಿ ಕಮಲ, ಸಹೋದರ ದಯಾನಂದ ಗೌಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸಂಸ್ಥೆಯ ಸಿಬ್ಬಂದಿಗಳು ಸಹಕರಿಸಿದರು.














