ಸೋಷಿಯಲ್ ಮೀಡಿಯಾ ಮಾಹಿತಿಯನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವ ಮೊದಲು ಹತ್ತು ಬಾರಿ ಯೋಚಿಸಿ

0

ಜನರಿಗೆ ಪ್ರಧಾನಿ ಮೋದಿ ಸಲಹೆ

  •  ಸುಳ್ಳು ಸುದ್ದಿ ಬಗ್ಗೆ ಎಚ್ಚರ ವಹಿಸಬೇಕು
  •  ಸಾಮಾಜಿಕ ಜಾಲತಾಣ ಮಾತ್ರ
  • ಸುದ್ದಿಯ ಮೂಲವೆಂದು ಭಾವಿಸಬೇಡಿ
  •  ಒಂದು ಸಣ್ಣ ಫೇಕ್‌ನ್ಯೂಸ್ ದೇಶದ
  • ಭದ್ರತೆಗೇ ಸವಾಲೊಡ್ಡಲಿದೆ

ಬೆಂಗಳೂರು:`ಸಾಮಾಜಿಕ ಜಾಲತಾಣಗಳನ್ನು ಮಾತ್ರವೇ ಸುದ್ದಿಯ ಮೂಲ ಎಂದು ಜನರು ಭಾವಿಸಬಾರದು.ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ಮಾಹಿತಿಯನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವ ಮೊದಲು ಹತ್ತು ಬಾರಿ ಯೋಚಿಸಬೇಕು.ಸುಳ್ಳು ಸುದ್ದಿ ಬಗ್ಗೆ ಎಚ್ಚರ ವಹಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
`ಸಾಮಾಜಿಕ ತಾಣಗಳ ಸುದ್ದಿ ಹಂಚಿಕೊಳ್ಳುವ ಮುನ್ನ ಪರಿಶೀಲಿಸಿಕೊಳ್ಳುವುದು ಅತೀ ಅಗತ್ಯ. ಒಂದು ಸಣ್ಣ ಸಾಲಿನ ಫೇಕ್ ನ್ಯೂಸ್ ದೇಶದ ಭದ್ರತೆಗೇ ಸವಾಲು ಒಡ್ಡಲಿದೆ.ತಾಂತ್ರಿಕವಾಗಿ ಅದನ್ನು ನಿಯಂತ್ರಿಸಬೇಕಿದೆ’ ಎಂದೂ ಮೋದಿ ಹೇಳಿದ್ದಾರೆ.ಹರಿಯಾಣದ ಸೂರಜ್ ಕುಂಡ್‌ನಲ್ಲಿ ನಡೆಯುತ್ತಿರುವ ರಾಜ್ಯಗಳ ಗೃಹ ಸಚಿವರ ಎರಡು ದಿನಗಳ ಚಿಂತನ ಶಿಬಿರವನ್ನು ಉದ್ದೇಶಿಸಿ ಮೋದಿಯವರು ಮಾತನಾಡಿದರು.
`ಸಾಮಾಜಿಕ ಜಾಲತಾಣಗಳಲ್ಲಿ ಬರುವ ಮಾಹಿತಿ ಮತ್ತು ಸುದ್ದಿಗಳನ್ನು ಹಂಚುವ ಮೊದಲು ಅದು ನಿಜವೋ? ಸುಳ್ಳೋ? ಎಂಬ ಬಗ್ಗೆ ಅರಿಯುವ ಬಗ್ಗೆ ಜನರಿಗೆ ಅರಿವು ಮೂಡಿಸಬೇಕಿದೆ.ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ಮಾಹಿತಿಯನ್ನು ಬೇರೆಯವರೊ೦ದಿಗೆ ಹಂಚಿಕೊಳ್ಳುವ ಮೊದಲು ಹತ್ತು ಬಾರಿ ಯೋಚಿಸಬೇಕು.ಪ್ರತೀ ಜಾಲತಾಣದಲ್ಲಿ ಕೂಡ ಮಾಹಿತಿ ಸರಿಯೋ?, ತಪ್ಪೋ? ಎಂದು ದೃಢಪಡಿಸಲು ಸಾಧನಗಳಿವೆ.ವಿವಿಧ ಮಾಹಿತಿ ಮೂಲಗಳನ್ನು ಶೋಧಿಸಿದರೆ ಹೊಸ ಮಾದರಿಯಲ್ಲಿ ಖಚಿತಪಡಿಸುವ ಸಾಧನಗಳ ಪರಿಚಯವಾಗುತ್ತದೆ.ನಿಷ್ಠೆಯಿಂದ ಕಾನೂನು ಪಾಲನೆ ಮಾಡುವ ಪ್ರಜೆಗಳ ಭದ್ರತೆಯ ದೃಷ್ಟಿಯಿಂದ ನಕಾರಾತ್ಮಕ ಅಂಶಗಳನ್ನು ಹರಡುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವುದು ನಮ್ಮ ಹೊಣೆ.ಕಾನೂನು ಸುವ್ಯವಸ್ಥೆಯ ಪಾಲನೆಯ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಸಂಸ್ಥೆಯ ಅಧಿಕಾರಿಗಳು ಅಪರಾಧ ಕೃತ್ಯಗಳನ್ನು ಎಸಗುವವರಿಗಿಂತ ಹತ್ತು ಹೆಜ್ಜೆ ಮುಂದಿರಬೇಕು’ ಎಂದು ಮೋದಿ ಹೇಳಿದರು.`ಸಾಮಾಜಿಕ ಜಾಲ ತಾಣಗಳನ್ನು ಕೇವಲ ಮಾಹಿತಿಯನ್ನು ಪಡೆದುಕೊಳ್ಳುವ ಮೂಲವನ್ನಾಗಿ ಪರಿಗಣಿಸಬಾರದು’ ಎಂದು ಹೇಳಿದ ಪ್ರಧಾನಿ,ಹಿಂದಿನ ಹಲವು ಸಂದರ್ಭಗಳಲ್ಲಿ ಸುಳ್ಳು ಸುದ್ದಿಯಿಂದಾಗಿ ದೇಶದಲ್ಲಿ ಉಂಟಾದ ಅಹಿತಕರ ಘಟನೆಗಳನ್ನು ಪರೋಕ್ಷವಾಗಿ ಉಲ್ಲೇಖಿಸಿದರಲ್ಲದೆ, ಅವುಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ತಾಂತ್ರಿಕವಾಗಿಯೂ ವ್ಯವಸ್ಥೆ ಮೇಲ್ದರ್ಜೆಗೇರಬೇಕಿದೆ ಎಂದು ಹೇಳಿದರು.

ಸುದ್ದಿಯಿಂದ 2016ರಿಂದಲೇ ಆಂದೋಲನ

ಸಾಮಾಜಿಕ ಜಾಲತಾಣಗಳ ದುರುಪಯೋಗದ ವಿರುದ್ಧ ಸುದ್ದಿಯಿಂದ 2016ರಿಂದಲೇ ನಿರಂತರ ಜಾಗೃತಿ ಮೂಡಿಸಿ ಜನಾಂದೋಲನ ರೂಪಿಸಿ ಗಮನ ಸೆಳೆಯಲಾಗಿತ್ತು.ಪ್ರಧಾನಿಯವರು ಪ್ರಸ್ತುತ ಪ್ರಸ್ತಾಪಿಸಿರುವ ವಿಚಾರಗಳಿಗೆ ಹೆಚ್ಚಿನ ಒತ್ತು ನೀಡಲಾಗಿತ್ತು.ಸಾಮಾಜಿಕ ಜಾಲತಾಣಗಳ ವಿರುದ್ಧದ ಹೋರಾಟದಿಂದಾಗಿ ಸುದ್ದಿಯ ಮೇಲೆ ಕೇಸು ಕೂಡಾ ಆಗಿದ್ದು ಪತ್ರಿಕೆಯನ್ನು ಒಂದು ವಾರ ಬಂದ್ ಮಾಡಲಾಗಿತ್ತು.ಬಳಿಕ ಜನ ಬೆಂಬಲದೊಂದಿಗೆ ಪತ್ರಿಕೆಯನ್ನು ಪುನಃ ಪ್ರಾರಂಭಿಸಿ ಹೋರಾಟ ಮುಂದುವರಿಸಿದ್ದನ್ನು ನೆನಪಿಸಲು ಇಚ್ಚಿಸುತ್ತೇವೆ. ಬಳಿಕದ ಬೆಳವಣಿಗೆಯಲ್ಲಿ ವಿವಿಧ ನ್ಯಾಯಾಲಯಗಳು ಮತ್ತು ಸರಕಾರಗಳು ಸಾಮಾಜಿಕ ಜಾಲತಾಣಗಳ ನಿಯಂತ್ರಣ ನಿಟ್ಟಿನಲ್ಲಿ ವಿವಿಧ ಕ್ರಮಕೈಗೊಂಡಿರುವುದನ್ನು ಗಮನಿಸಬಹುದು.

LEAVE A REPLY

Please enter your comment!
Please enter your name here