ವಿಟ್ಲ: ಕೆಲಸಕ್ಕೆ ತೆರಳಿದ್ದ ವಿವಾಹಿತ ಮಹಿಳೆ ನಾಪತ್ತೆ -ಪ್ರಕರಣ ದಾಖಲು

0

ವಿಟ್ಲ: ಕೆಲಸಕ್ಕೆಂದು ತೆರಳಿದ ವಿವಾಹಿತ ಮಹಿಳೆಯೋರ್ವರು ನಾಪತ್ತೆಯಾಗಿರುವ ಕುರಿತು ಆಕೆಯ ಪತಿ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


ಬಂಟ್ವಾಳ ತಾಲೂಕು ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ ಕಡಂಬು ನಿವಾಸಿ ನಾಗೇಶ್‌ರವರ ಪತ್ನಿ ಕವಿತ(29 ವ.) ನಾಪತ್ತೆಯಾದವರಾಗಿದ್ದಾರೆ.

ವಿಟ್ಲದ ಸ್ವೀಟ್ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಕವಿತಾರವರು ಅ.29ರಂದು ಕೆಲಸ ಮುಗಿಸಿ ತನ್ನ ತಾಯಿಮನೆಗೆ ತೆರಳುವುದಾಗಿ ಗಂಡನಲ್ಲಿ ತಿಳಿಸಿ ತೆರಳಿದ್ದರು. ರಾತ್ರಿಯಾದರೂ ಕವಿತಾರವರು ತಾಯಿ ಮನೆಗೆ ತಲುಪದ ಹಿನ್ನೆಲೆಯಲ್ಲಿ ಅವರ ಸಹೋದರ ಗಿರೀಶ್‌ರವರು ನಾಗೇಶ್‌ರವರಿಗೆ ಕರೆ ಮಾಡಿ ಸಹೋದರಿ ಬಂದಿಲ್ಲ ಎಂದು ತಿಳಿಸಿದ್ದರು. ಕೂಡಲೇ ನಾಗೇಶ್‌ರವರು ಮನೆಗೆ ತೆರಳುವ ದಾರಿಯ ಸಹಿತ ಸಂಬಂಧಿಕರ ಮನೆಯಲ್ಲಿ ಹುಡುಕಾಟ ನಡೆಸಿದರು ಕವಿತಾ ಪತ್ತೆಯಾಗದ ಹಿನ್ನೆಲೆಯಲ್ಲಿ ಅವರು ಪತ್ನಿಯನ್ನು ಹುಡುಕಿ ಕೊಡುವಂತೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ವಿಟ್ಲ ಠಾಣಾ ಪೊಲೀಸರು ಈ ಭಾವಚಿತ್ರದಲ್ಲಿ ಕಾಣುವ ಮಹಿಳೆಯನ್ನು ಯಾರಾದರೂ ಕಂಡಲ್ಲಿ ಹತ್ತಿರದ ಪೊಲೀಸ್ ಠಾಣೆ ಅಥವಾ ವಿಟ್ಲ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here