ಲಯನ್ಸ್ ಕ್ರೀಡಾಕೂಟ: ಕಬಡ್ಡಿಯಲ್ಲಿ ಲಿಟ್ಲ್‌ಫ್ಲವರ್ ತಂಡ ಪ್ರಥಮ

0

ಪುತ್ತೂರು: ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್, ಲಯನ್ಸ್ ಜಿಲ್ಲೆ 317 ಡಿ ವತಿಯಿಂದ ವಿಟ್ಲ ವಿಠಲ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಅ. 30 ರಂದು ನಡೆದ ಪ್ರಾಂತ್ಯ ಮಟ್ಟದ ಕ್ರೀಡಾಕೂಟದಲ್ಲಿ 14ರ ವಯೋಮಾನದ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಪುತ್ತೂರು ದರ್ಬೆ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರ ಕಬಡ್ಡಿ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ. ಇವರಿಗೆ ಮುಖ್ಯ ಶಿಕ್ಷಕಿ ವೆನಿಶಾ ಬಿ. ಎಸ್ ಮಾರ್ಗದರ್ಶನದಲ್ಲಿ ಶಿಕ್ಷಕರಾದ ಬಾಲಕೃಷ್ಣ ರೈ ಪೊರ್ದಾಲ್ ತರಬೇತಿ ನೀಡಿದ್ದಾರೆ.

ತಂಡದಲ್ಲಿ ವಿಜೇತ, ದೀಕ್ಷಾ ಎಸ್, ಅನನ್ಯ, ಪ್ರೀತಿಕಾ ಜೆ, ಇರ್ಷಾನ, ಸಂಜನಾ, ಸಾಕ್ಷಿ, ಸೌಜನ್ಯ, ಪುಣ್ಯಶ್ರೀ ಕ್ರೀಡಾಪಟುಗಳಾಗಿದ್ದಾರೆ.

LEAVE A REPLY

Please enter your comment!
Please enter your name here