ಫಿಲೋಮಿನಾ ಕೇಂದ್ರದಲ್ಲಿ 600 ಮಂದಿ ಪರೀಕ್ಷಾರ್ಥಿಗಳು
ಚಿತ್ರ:ಸಂತೋಷ್ ಮೊಟ್ಟೆತ್ತಡ್ಕ
ಪುತ್ತೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ(ಕ.ರಾ.ಮು.ವಿ) ಮೈಸೂರು ನಡೆಸಿಕೊಡುವ 2021-22 ನೇ ಶೈಕ್ಷಣಿಕ ಸಾಲಿನ ಸ್ನಾತಕ ಹಾಗೂ ಸ್ನಾತಕೋತ್ತರ ಪರೀಕ್ಷೆಗಳು ಆರಂಭಗೊಂಡಿದ್ದು ನವೆಂಬರ್ 5ರಂದು ಮುಕ್ತಾಯಗೊಳ್ಳಲಿದೆ.
ಫಿಲೋಮಿನಾ ಕಾಲೇಜು ಪರೀಕ್ಷಾ ಕೇಂದ್ರ ಸೇರಿದಂತೆ ರಾಜ್ಯದ 35 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯುತ್ತಿವೆ. ಸ್ನಾತಕ ವಿಷಯದಲ್ಲಿ 6 ಹಾಗೂ ಸ್ನಾತಕೋತ್ತರ ವಿಷಯದಲ್ಲಿ 25 ವಿಷಯವನ್ನು ಒಳಗೊಂಡಂತೆ ಸುಮಾರು 600 ವಿದ್ಯಾರ್ಥಿಗಳು ಫಿಲೋಮಿನಾ ಕಾಲೇಜು ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ.
ಕಾಲೇಜಿನ ಪ್ರಾಂಶುಪಾಲ ವಂ|ಡಾ| ಆಂಟನಿ ಪ್ರಕಾಶ್ ಮೊಂತೇರೊರವರು ಪರೀಕ್ಷಾ ಕೇಂದ್ರದ ಮುಖ್ಯ ಪರೀಕ್ಷಾಧಿಕಾರಿಯಾಗಿದ್ದು ಪರೀಕ್ಷಾ ಕಾರ್ಯ ಸುಸೂತ್ರವಾಗಿ ನಡೆಯಲು ಸೂಕ್ತ ಮಾರ್ಗದರ್ಶನ ನೀಡುತ್ತಿದ್ದು, ಕ.ರಾ.ಮು.ವಿ ಅಧ್ಯಯನ ಕೇಂದ್ರದ ಸಂಯೋಜಕ ಡಾ|ರಾಧಾಕೃಷ್ಣ ಗೌಡರವರು ಉಪ ಮುಖ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.