ಪ್ರತಿಭಾ ಕಾರಂಜಿಯಲ್ಲಿ ಕಾಣಿಯೂರು ಪ್ರಗತಿಯ ಅನಘ ಎಂ ಎಸ್, ಧನುಷ್ ಕೆ ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಕಾಣಿಯೂರು:- ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆ ರಾಮಕುಂಜದಲ್ಲಿ ನಡೆದ ತಾಲೂಕು ಮಟ್ಟದ ಕಿರಿಯ ಪ್ರಾಥಮಿಕ ವಿಭಾಗದ ಪ್ರತಿಭಾ ಕಾರಂಜಿಯ ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ಅನಘ ಎಂ ಎಸ್ ಪ್ರಥಮ ಸ್ಥಾನ ಮತ್ತು ಸಂಸ್ಕೃತ ಧಾರ್ಮಿಕ ಪಠಣ ಸ್ಪರ್ದೆಯಲ್ಲಿ ಧನುಷ್ ಕೆ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಉಳಿದಂತೆ ಲಘು ಸಂಗೀತದಲ್ಲಿ ಧನುಷ್ ಕೆ ದ್ವಿತೀಯ ಸ್ಥಾನ ಛದ್ಮವೇಷದಲ್ಲಿ ಪ್ರಧಾನ ಕೆ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಹಿರಿಯ ಪ್ರಾಥಮಿಕ ವಿಭಾಗದ ಹಾಸ್ಯ ಸ್ಪರ್ಧೆಯಲ್ಲಿ ಗಗನ್ ರಾಜ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ತಾಲೂಕು ಮಟ್ಟದ ಕಿರಿಯರ ವಿಭಾಗದ ಪ್ರತಿಭಾ ಕಾರಂಜಿಯಲ್ಲಿ ಪ್ರಗತಿ ವಿದ್ಯಾಸಂಸ್ಥೆಗೆ ಸಮಗ್ರ ಪ್ರಶಸ್ತಿ ಬಂದಿರುತ್ತದೆ.

LEAVE A REPLY

Please enter your comment!
Please enter your name here