ಕಾಣಿಯೂರು: ಸಮಾಜಮುಖಿ ಚಿಂತನೆಯ ಮೂಲಕ ಉತ್ತಮ ಗುಣಗಳನ್ನು ವೃದ್ಧಿಸಿಕೊಳ್ಳಬೇಕು. ಸೇವಾಮನೋಭಾವದಿಂದ ಮುನ್ನಡೆದಾಗ ಸಮಾಜ ಅಭಿವೃದ್ಧಿ ಸಾಧ್ಯ ಎಂದು ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಮಹಾಬಲ ಶೆಟ್ಟಿ ಕೊಮ್ಮಂಡ ಹೇಳಿದರು. ಅವರು ಬೆಳಂದೂರು ಪಳ್ಳತ್ತಾರು ದೇವರಗುಡ್ಡೆ ಶ್ರೀ ವೀರಾಂಜನೇಯ ಗೆಳೆಯರ ಬಳಗ ಸೇವಾ ಟ್ರಸ್ಟ್ ವತಿಯಿಂದ ಪಳ್ಳತ್ತಾರು ದೇವರಗುಡ್ಡೆ ಕ್ರೀಡಾಂಗಣದಲ್ಲಿ ದೀಪಾವಳಿ ಪ್ರಯುಕ್ತ ನಡೆದ ಕ್ರೀಡಾಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪಳ್ಳತ್ತಾರು ಶ್ರೀ ವೀರಾಂಜನೇಯ ಗೆಳೆಯರ ಬಳಗದ ಗೌರವಾಧ್ಯಕ್ಷ ಶ್ರೀಧರ ಗೌಡ ಕೊಯಕ್ಕುಡೆ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುತ್ತಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಸವಣೂರು ಉ.ಹಿ.ಪ್ರಾ.ಶಾಲಾ ಪ್ರಭಾರ ಮುಖ್ಯಗುರು ಬಾಲಕೃಷ್ಣ ಕೆ, ಪಳ್ಳತ್ತಾರು ಸ.ಹಿ.ಪ್ರಾ.ಶಾಲಾ ಮುಖ್ಯಗುರು ಸೀತಾರಾಮ ಕೆ.ಜಿ, ಬೆಳಂದೂರು ಗ್ರಾ.ಪಂ.ಸದಸ್ಯೆ ಗೀತಾ ಕುವೆತ್ತೋಡಿ, ವೀರಾಂಜನೇಯ ಗೆಳೆಯರ ಬಳಗ ಸೇವಾ ಟ್ರಸ್ಟ್‌ನ ಸದಸ್ಯರಾದ ವಸಂತ ಕೊಯಕ್ಕುಡೆ, ತಿಮ್ಮಪ್ಪ ಗೌಡ ತೆಕ್ಕಿತ್ತಡಿ, ಚಿನ್ನಪ್ಪ ಕುವೆತ್ತೋಡಿ, ಚಂದ್ರಶೇಖರ ಆಚಾರ್ಯ ಬನಾರಿ, ಗಂಗಮ್ಮ ಕೊಯಕ್ಕುಡೆ ಅತಿಥಿಗಳಾಗಿ ಉಪಸ್ಥಿತರಿದ್ದರು. ವೆಂಕಟೇಶ್ ಕೊಯಕ್ಕುಡೆ ಪ್ರಾಸ್ತಾವಿಕ ಮಾತನಾಡಿದರು. ಮಿಥುನ್ ಕೊಯಕ್ಕುಡೆ ಸ್ವಾಗತಿಸಿದರು. ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ ಸಮಾರಂಭ:
ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ದೇವರಗುಡ್ಡೆ ಶ್ರೀ ವೀರಾಂಜನೇಯ ಗೆಳೆಯರ ಬಳಗ ಸೇವಾ ಟ್ರಸ್ಟ್ ಅಧ್ಯಕ್ಷ ರಾಜೇಶ್ ಬನಾರಿ ವಹಿಸಿದ್ದರು. ಸುಳ್ಯ ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ ಬಹುಮಾನ ವಿತರಿಸಿದರು. ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ತಾರಾನಾಥ ಕಾಯರ್ಗ, ಬೆಳಂದೂರು ಗ್ರಾ.ಪಂ.ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ, ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಠಲ ಗೌಡ ಬರೆಪ್ಪಾಡಿ, ಜನಾರ್ದನ ಕೊಯಕ್ಕುಡೆ, ಶಿವರಾಮ ಕೊಡೆಕೇರಿ, ಐತ್ತಪ್ಪ ಗೌಡ ಕೂಂಕ್ಯ, ಪದ್ಮನಾಭ ಶೆಟ್ಟಿಗಾರ್ ಉಪಸ್ಥಿತರಿದ್ದರು. ಅಶ್ವಿನ್ ಕೂಂಕ್ಯ ಬಹುಮಾನ ವಿಜೇತರ ವಿವರ ವಾಚಿಸಿದರು. ರೇವತಿ ಕೊಯಕ್ಕುಡೆ ಸ್ವಾಗತಿಸಿ, ಮೋಕ್ಷಿತ್ ತೆಕ್ಕಿತ್ತಡಿ ವಂದಿಸಿದರು. ಅನಿಲ್ ಖಂಡಿಗ ಕಾರ್ಯಕ್ರಮ ನಿರೂಪಿಸಿದರು.