ಪುತ್ತೂರು: ವರ್ಲ್ಡ್ ಬಂಟ್ ಫೆಡರೇಷನ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ಅಲ್ ಕಾರ್ಗೋ ಸಂಸ್ಥೆಯ ಶಶಿಕಿರಣ್ ಶೆಟ್ಟಿ ಅವರ ಪ್ರಾಯೋಜಕತ್ವದಲ್ಲಿ ಪುತ್ತೂರು ತಾಲೂಕು ಬಂಟರ ಸಂಘದ 2020-21ನೇ ಸಾಲಿನಲ್ಲಿ ಅಧ್ಯಕ್ಷರಾಗಿದ್ದ ಬೂಡಿಯಾರ್ ರಾಧಾಕೃಷ್ಣ ರೈಗಳ ಮನವಿ ಮತ್ತು ಶಿಫಾರಸಿನಂತೆ ಏಳು ಮನೆಗಳು ತಲಾ 6 ರಿಂದ 7 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಅ. 30 ರಂದು 5 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರ ಮಾಡಲಾಯಿತು.
ಕುರಿಯ ಗ್ರಾಮದ ಮಲಾರು ( ಸಂಪ್ಯ) ನಿವಾಸಿ ಪದ್ಮಾವತಿ ರೈ ಕೋಂದಿ ಗೋಪಾಲ ರೈ, ಒಳಮೊಗ್ರು ಗ್ರಾಮದ ಪರಮೇಶ್ವರಿ ಕೊಂ ಬಿ ಬಾಲಕೃಷ್ಣ ರೈ, ಕೆದಂಬಾಡಿ ಗ್ರಾಮದ ರಂಜಿನಿ ಕೋಂ ಗಣೇಶ್ ರೈ, ಕೈಯೂರು ಗ್ರಾಮದ ಮಾಡಾವು ಶೇಡಿಮನೆ ಗುಣವತಿ ಕೊಂ ಕೃಷ್ಣ ಭಂಡಾರಿ ಹಾಗೂ ಶಾಂತಿಗೋಡು ಗ್ರಾಮದ ಆನಡ್ಕ ನಿವಾಸಿ ಉಮಾವತಿ ಕೊಂ ಗಿರಿಯಪ್ಪ ಪೂಜಾರಿರವರುಗಳಿಗೆ ಮನೆ ಹಸ್ತಾಂತರ ಮಾಡಲಾಯಿತು.
ಇನ್ನುಳಿದ 2 ಫಲಾನುಭವಿಗಳಿಗೆ ಮುಂದಿನ ತಿಂಗಳು ಹಸ್ತಾಂತರಿಸಲಾಗುವುದು.
ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ವರ್ಲ್ಡ್ ಬಂಟ್ ಫೌಂಡೇಶನ್ ಟ್ರಸ್ಟ್ ನ ಕಾರ್ಯದರ್ಶಿ ಎಣ್ಮಕಜೆ ಸುಧೀರ್ ಕುಮಾರ್ ಶೆಟ್ಟಿ , ಸಿ.ಎ, ಪ್ರಾಜೆಕ್ಟ್ ನಿರ್ದೇಶಕ ಡಾ. ಬೂಡಿಯಾರ್ ಸಂಜೀವ ರೈ, ಟ್ರಸ್ಟಿಗಳಾದ ಸುದೇಶ್ ಕುಮಾರ್ ರೈ, ಕೆ.ಎಂ ಶೆಟ್ಟಿ, ಡಾ. ಬೂಡಿಯಾರ್ ಸಚ್ಚಿದಾನಂದ ರೈ ಹಾಗೂ ಪ್ರಕಾಶ್ ಮಾಣಾಯಿ ಪಾಲ್ಗೊಂಡಿದ್ದರು. ಬೂಡಿಯಾರು ರಾಧಾಕೃಷ್ಣ ರೈಯವರು ಕಾರ್ಯಕ್ರಮ ಸಂಯೋಜಿಸಿ ಸರ್ವರನ್ನೂ ಸ್ವಾಗತಿಸಿ, ಗೌರವಿಸಿ ಕೃತಜ್ಞತೆ ಸಮರ್ಪಿಸಿದರು. ಪುತ್ತೂರು ತಾಲೂಕು ಬಂಟರ ಸಂಘದ ಪೂರ್ವಾಧ್ಯಕ್ಷರು, ನಿರ್ದೇಶಕ ಬಂಧುಗಳು , ಹಿರಿಯರು , ಪ್ರಮುಖರು, ಗ್ರಾಮ ಸಮಿತಿಗಳ ಪ್ರಮುಖರು ಉಪಸ್ಥಿತರಿದ್ದರು.