ಎಸ್‌ಕೆಎಸ್‌ಎಸ್‌ಎಫ್ ಸವಣೂರು ಕ್ಲಸ್ಟರ್ ವತಿಯಿಂದ ಮಾದಕ ವ್ಯವಸನದ ವಿರುದ್ಧ `ಜನ ಸಂಚಲನ’ ಕಾರ್ಯಕ್ರಮ

ಪುತ್ತೂರು: ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಎಸ್‌ಕೆಎಸ್‌ಎಸ್‌ಎಫ್ ಸವಣೂರು ಕ್ಲಸ್ಟರ್ ನೇತೃತ್ವದಲ್ಲಿ ಆರೋಗ್ಯ ಕರ್ನಾಟಕಕ್ಕೆ ಯುವಜನ ಜಾಗೃತಿ ಎಂಬ ಪ್ರಮೇಯದಲ್ಲಿ ಮಾದಕ ವ್ಯಸನದ ವಿರುದ್ಧ ಜನಜಾಗೃತಿ ಮೂಡಿಸುವ `ಜನ ಸಂಚಲನ’ ಕಾರ್ಯಕ್ರಮ ಸವಣೂರು ಚಾಪಲ್ಲ ಮಸೀದಿ ಮುಂಭಾಗದಲ್ಲಿ ನಡೆಯಿತು. ಯಾಬೂಬ್ ದಾರಿಮಿ ಸವಣೂರು ದುವಾ ನೆರವೇರಿಸಿದರು.

ಕ್ಲಸ್ಟರ್ ಅಧ್ಯಕ್ಷ ಅಬ್ದುಲ್ ರಝಾಕ್ ಅಝ್ಹರಿ ಅಧ್ಯಕ್ಷತೆ ವಹಿಸಿದ್ದರು. ಎಸ್‌ಕೆಎಸ್‌ಎಸ್‌ಎಫ್ ಸವಣೂರು ಶಾಖೆ ಅಧ್ಯಕ್ಷ ಅಬ್ದುಲ್ ಜಲೀಲ್ ಫೈಝಿ ಸವಣೂರು ಉಧ್ಘಾಟಿಸಿ ಮಾತನಾಡಿ ಮಾದಕ ವ್ಯಸನದ ಕುರಿತು ಪ್ರತೀ ಮೊಹಲ್ಲಾಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಬಹಳ ಅನಿವಾರ್ಯವಾಗಿದೆ ಎಂದರು..

ಎಸ್‌ಕೆಎಸ್‌ಎಸ್‌ಎಫ್ ದ.ಕ ಈಸ್ಟ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಾಬಿರ್ ಫೈಝಿ ಬನಾರಿ ಪ್ರತಿಜ್ಞಾ ವಿಧಿ ಬೋಧಿಸಿದರು.
ಸಂದೇಶ ಭಾಷಣಗಾರರಾಗಿದ್ದು ಟ್ರೆಂಡ್ ಟ್ರೈನರ್ ಝುನೈಫ್ ಕೋಲ್ಪೆ ಮಾತನಾಡಿ ನಮ್ಮ ಕ್ಯಾಂಪಸ್‌ಗಳು ಇದು ಮಾದಕ ವ್ಯಸನಗಳ ಕೇಂದ್ರಗಳಾಗುತ್ತಿದ್ದು ವಿದ್ಯಾರ್ಥಿ ಯುವ ಸಮೂಹ ಈ ಬಗ್ಗೆ ಎಚ್ಚೆತ್ತುಕೊಂಡು ತಮ್ಮ ಮಿತ್ರ ವೃಂದವನ್ನು ಇಂತಹ ದುಶ್ಚಟಗಳಿಂದ ಮುಕ್ತಗೊಳಿಸಲು ಪಣತೊಟ್ಟು ಉತ್ತಮ ಸಮಾಜ ನಿರ್ಮಿಸುವಲ್ಲಿ ತಮ್ಮದೇ ಆದ ಸೇವೆ ನೀಡುವಂತಾಗಬೇಕು ಎಂದು ಹೇಳಿದರು.


ಜನಜಾಗೃತಿ ಮೂಡಿಸುವ ಕರಪತ್ರವನ್ನು ಚಾಪಲ್ಲ ಜಮಾಅತ್ ಅಧ್ಯಕ್ಷ ಉಮರ್ ಹಾಜಿ ಕೆನರಾ ಬಿಡುಗಡೆಗೊಳಿಸಿದರು.
ಚಾಪಲ್ಲ ಜಮಾಅತ್ ಉಪಾಧ್ಯಕ್ಷ ಮುಹಮ್ಮದ್ ಹಾಜಿ ಸೊಂಪಾಡಿ, ಕೋಶಾಧಿಕಾರಿ ರಫೀಕ್ ಹಾಜಿ ಅರ್ತಿಕೆರೆ, ಕಾರ್ಯದರ್ಶಿ ಮುಹಮ್ಮದ್ ಕುಂಞಿ ಕುರ್ತಳ, ಸದಸ್ಯರಾದ ಪಿ ಕೆ ಅಬೂಬಕರ್, ಕೆ ಎಂ ಮುಹಮ್ಮದ್, ಬಿ ಎಂ ಅಹ್ಮದ್ ಹಾಜಿ, ಅಬ್ದುಲ್ ರಹಮಾನ್ ಮುಂಡತ್ತಡ್ಕ, ಬೆಳಂದೂರು ಶಾಖೆ ಎಸ್‌ವೈಎಸ್ ಅಧ್ಯಕ್ಷ ಅಬ್ದುಲ್ ಹಮೀದ್, ಎಸ್‌ಕೆಎಸ್‌ಎಸ್‌ಎಫ್ ಪರಣೆ ಶಾಖೆ ಅಧ್ಯಕ್ಷ ಯಹ್ಯಾ ಖಾನ್, ಬೆಳಂದೂರು ಶಾಖೆ ಉಪಾಧ್ಯಕ್ಷ ಹನೀಫ್ ಅಂಕಜಾಲ್, ಪುತ್ತೂರು ವಲಯ ವಿಖಾಯ ವೈಸ್ ಚೇರ್‌ಮೆನ್ ಅಬ್ದುಲ್ ಕರೀಂ ಮೌಲ, ಸವಣೂರು ಶಾಖೆ ಉಪಾಧ್ಯಕ್ಷ ಅಬ್ದುರ್ರಝಾಕ್ ಎಸ್ ಕೆ, ಕ್ಲಸ್ಟರ್ ಕೋಶಾಧಿಕಾರಿ ನಝೀರ್ ಮುಂಡತ್ತಡ್ಕ, ವಿಖಾಯ ಚೇರ್‌ಮೇನ್ ಜಮಾಲ್ ಶಾಂತಿನಗರ, ಮುಹಮ್ಮದ್ ಕಾಸಿಲೆ, ಮೊಯ್ದೀನ್ ಕುಂಞಿ ಶಾಂತಿನಗರ, ಮಜೀದ್ ಸೊಂಪಾಡಿ, ರಝಾಕ್ ದಾರಿಮಿ ಸರ್ವೆ, ಅಬೂಬಕರ್ ಹಾಜಿ ಅರ್ತಿಕೆರೆ, ಅಝೀಝ್ ಪಟ್ಟೆ, ಸಿದ್ದೀಕ್ ಅಝ್ಹರಿ, ಸಿದ್ದೀಕ್ ಅರ್ಶದಿ, ಹನೀಫ್ ಅರ್ಶದಿ, ಹಾರೀಸ್ ಪಾರೆ, ಝಹಝ್ ಕೇಕುಡೆ ಉಪಸ್ಥಿತರಿದ್ದರು..

ಕ್ಲಸ್ಟರ್ ಸಂಘಟನಾ ಕಾರ್ಯದರ್ಶಿ ರಿಯಾಝ್ ಫೈಝಿ ಪಟ್ಟೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜಮಾಲುದ್ದೀನ್ ಅಝ್ಹರಿ ಪರಣೆ ವಂದಿಸಿದರು. ಸರ್ಗಲಯಂ ಕಾರ್ಯದರ್ಶಿ ಶರೀಫ್ ಅಝ್ಹರಿ ಬೆಳಂದೂರು ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.