ವಿಕ್ಟರ್ ಪ್ರೌಢಶಾಲೆಯ ನಿವೃತ್ತ ಶಿಕ್ಷಕಿಯರಾದ ಇವಾನ್ ಮಸ್ಕರೇನ್ಹಸ್, ಲಿಲ್ಲಿ ಡಿ’ಸೋಜರವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಯವರಿಂದ ಸನ್ಮಾನ

0

ಪುತ್ತೂರು:ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ಶಿಕ್ಷಕ ವೃತ್ತಿ ನಿರ್ವಹಿಸಿ ಅ.31 ರಂದು ಸೇವಾ ನಿವೃತ್ತಿ ಹೊಂದಿದ ಶಿಕ್ಷಕರಾದ ಇವಾನ್ ಮಸ್ಕರೇನ್ಹಸ್ ಹಾಗೂ ಲಿಲ್ಲಿ ಡಿಸೋಜ ಇವರ ವಿದಾಯ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿಯವರ ನೇತೃತ್ವದಲ್ಲಿ ಶಿಕ್ಷಣ ಇಲಾಖೆಯ ವತಿಯಿಂದ ಶಾಲೆಯ ಅಟಲ್ ಟಿಂಕರಿಂಗ್ ಲ್ಯಾಬ್‌ನಲ್ಲಿ ನಡೆಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ರವರು ಮಾತನಾಡಿ, ಶಿಕ್ಷಕ ವೃತ್ತಿಯು ಅತ್ಯಂತ ಶ್ರೇಷ್ಠ ವೃತ್ತಿ. ನಿವೃತ್ತಿಯ ಬಳಿಕ ಶಿಕ್ಷಕರು ಶಿಕ್ಷಕರಾಗಿಯೇ ಚೈತನ್ಯದಿಂದ ಇರುತ್ತಾರೆ. ಆದ್ದರಿಂದ ಈ ವೃತ್ತಿಗೆ ನಿವೃತ್ತಿ ಎಂಬುವುದಿಲ್ಲ. ಶಿಕ್ಷಕನಾದವನು ಕೊನೆಯವರೆಗೆ ಶಿಕ್ಷಕರಾಗಿಯೇ ಉಳಿಯುತ್ತಾರೆ. ಆದ್ದರಿಂದ ಇದೊಂದು ಪವಿತ್ರ ವೃತ್ತಿ ಎಂದು ನುಡಿಯುತ್ತಾ ಇಬ್ಬರು ಶಿಕ್ಷಕರಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ಪುತ್ತೂರು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ ಎಸ್ ಎ ಹಾಗೂ ಕ.ರಾ.ಪ್ರೌ.ಶಾ.ಶಿಕ್ಷಕರ ಸಂಘ ಪುತ್ತೂರು ಇದರ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ಯಾಮಲಾರವರು ನಿವೃತ್ತಿಗೊಂಡ ಈರ್ವರು ಶಿಕ್ಷಕಿಯರನ್ನು ಶಾಲು ಹೊದಿಸಿ ಫಲ ಪುಷ್ಪವನ್ನು ನೀಡಿ ಸನ್ಮಾನಗೈದರು ಹಾಗೂ ಇಬ್ಬರು ಶಿಕ್ಷಕಿಯರಿಗೆ ಶುಭ ಹಾರೈಸಿದರು.

ಶಾಲಾ ಮುಖ್ಯಶಿಕ್ಷಕಿ ರೋಸ್ಲಿನ್ ಲೋಬೊರವರು ಸ್ವಾಗತಿಸಿದರು. ಶಾಲಾ ಶಿಕ್ಷಕ ವೃಂದ, ಆಡಳಿತ ಸಿಬ್ಬಂದಿ ವೃಂದ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here