ಗುಲ್ಬರ್ಗಾದಲ್ಲಿ ನ್ಯಾಷನಲ್ ವಾಲಿಬಾಲ್ ಪಂದ್ಯಾಟದ ಆಯ್ಕೆ ಪ್ರಕ್ರಿಯೆ, ಇಬ್ರಾಹಿಂ ಗೋಳಿಕಟ್ಟೆ ಭಾಗಿ

0

ಪುತ್ತೂರು:ನ.14ರಿಂದ 19ರವರೆಗೆ ಜಮ್ಮು ಕಾಶ್ಮೀರದಲ್ಲಿ ನಡೆಯಲಿರುವ 18 ವಯಸ್ಸಿನ ಬಾಲಕಿಯರ ಜೂನಿಯರ್ ನ್ಯಾಷನಲ್ ವಾಲಿಬಾಲ್ ಪಂದ್ಯಾವಳಿಗೆ ಅ.30 ರಂದು ಗುಲ್ಬರ್ಗ ಯುನಿವರ್ಸಿಟಿ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಯಲ್ಲಿ ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್ ಅಡಕ್ ಸದಸ್ಯ ಇಬ್ರಾಹಿಂ ಗೋಳಿಕಟ್ಟೆಯವರು ಭಾಗವಹಿಸಿ ಆಯ್ಕೆ ಪ್ರಕ್ರಿಯೆಯನ್ನು ಉದ್ಘಾಟಿಸಿದರು.


ಗುಲ್ಬರ್ಗಾ ಸಂಸದ ಗೋಪಾಲ್ ಜಾದವ್ ಹಾಗೂ ಸ್ಥಳೀಯ ಶಾಸಕಿ ಕನೀಸ್ ಫಾತಿಮಾ ಸೇರಿದಂತೆ ಹಲವು ಮಂದಿ ಉಪಸ್ಥಿತರರಿದ್ದರು. ವಿವಿಧ ಜಿಲ್ಲೆಗಳಿಂದ ೫೮ ಬಾಲಕಿಯರು ಆಗಮಿಸಿದ್ದು ಅದರಲ್ಲಿ 30ಬಾಲಕಿಯರನ್ನು ತರಬೇತಿಗೆ ಆಯ್ಕೆ ಮಾಡಲಾಯಿತು ಈ ಆಯ್ಕೆ ಪ್ರಕ್ರಿಯೆಯನ್ನು ಹಿರಿಯ ಆಟಗಾರ ಬಾಬರ್ ಖಾನ್.ಡಾಕ್ಟರ್ ಕೆ ಜಿ ಕಣ್ಣೂರು ನಿರ್ದೇಶಕರು ದೈಹಿಕ ಹಿರಿಯ ಆಟಗಾರ ಎಂಡಿ ಮೋಹಿಸಿನ್. ಹಿರಿಯ ಆಟಗಾರ್ತಿ ಆಶಾ ದರ್ಗಿ.ನೆರವೇರಿಸಿದರು.

LEAVE A REPLY

Please enter your comment!
Please enter your name here