ಯುವಜನತೆಯು ಭಾರತೀಯ ಆಚಾರ ವಿಚಾರಗಳನ್ನು ಅಳವಡಿಸಿಕೊಳ್ಳುವಂತಾಗಲಿ; ಡಾ ಕೆ ಎಂ ಕೃಷ್ಣ ಭಟ್

0

ಪುತ್ತೂರು,ಅ 20 :-ಭಾರತ ಬದಲಾಗುತ್ತಿದೆ. ಪಾಶ್ಚಾತ್ಯ ಸಂಸ್ಕೃತಿಯ ಕಡೆಗೆ ವಾಲುತ್ತಿರುವ ಯುವಜನತೆಯು ಭಾರತೀಯ ಆಚಾರ ವಿಚಾರಗಳ ಕುರಿತು ತಿಳಿದು ಕೊಳ್ಳುವುದು ಅನಿವಾರ್ಯ. ಆದರೊಂದಿಗೆ ಮಾದಕ ವಸ್ತುಗಳು , ಆಧುನಿಕತೆ ಮುಂತಾದವುಗಳಿಂದ ಪ್ರಪಾತಕ್ಕೆ ಬೀಳುತ್ತಿರುವ ಯುವ ಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ ತಮ್ಮನ್ನು ತಾವು ಬದಲಾಯಿಸಬೇಕಾಗಿದೆ. ಜೊತೆಗೆ ಭಾರತೀಯ ಆಚಾರ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಕಾರ್ಯದರ್ಶಿ ಡಾ. ಕೆ.ಎಂ ಕೃಷ್ಣ ಭಟ್ ಹೇಳಿದರು.

ಅವರು ಇಲ್ಲಿನ ಪುತ್ತೂರು ವಿವೇಕಾನಂದ ಕಲಾ,ವಿಜ್ಞಾನ, ವಾಣಿಜ್ಯ (ಸ್ವಾಯತ್ತ) ಹಾಗೂ ಐಕ್ಯೂಎಸಿ ಘಟಕದ ನಡೆದ ಭಾರತ ದರ್ಶನ ಸರಮಾಲೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿ ಗುರುವಾರ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ್ದ ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಇದರ ಅಧ್ಯಕ್ಷರು ಪ್ರೊ ಶ್ರೀಪತಿ ಕಲ್ಲುರಾಯ ಮಾತನಾಡಿ, ನಮ್ಮ ದೇಶ ಬಹಳ ಉತ್ಕಟ ಸಮಯದಲ್ಲಿರುವಾಗ ಅನೇಕರು ತಮ್ಮ ಪ್ರಾಣತ್ಯಾಗ ಮಾಡಿ ಹುತಾತ್ಮರಾಗಿದ್ದಾರೆ. ಆದುದರಿಂದ ಯುವಜನತೆ ಸಮಾಜ ನಿರ್ಮಾಣ ಮಾಡುವುದರ ಕಡೆಗೂ ಗಮನಕೊಡಬೇಕು ಮತ್ತು ಸಮಾಜದಲ್ಲಿ ತಾನು ಹೇಗಿರಬೇಕು ಎಂಬುದನ್ನು ಕೂಡ ತಿಳಿದುಕೊಂಡು ಸಂಸ್ಕೃತಿಯ ಬಗ್ಗೆಯೂ ಅರಿತುಕೊಳ್ಳಬೇಕು . ಆ ಸಂಸ್ಕೃತಿಯಲ್ಲೂ ಜಾಗೃತಿ ಬೇಕು .ಇದನ್ನು ನಾವು ಆಚರಿಸಬೇಕು. ದಿನನಿತ್ಯದಲ್ಲಿ ನಾವು ಅನುಸರಿಸಬೇಕಾದಂತ ಶಿಸ್ತು ಏನು ಎಂಬುದನ್ನು ಭಾರತದ ದರ್ಶನದಲ್ಲಿ ತಿಳಿಸಲಾಗಿದೆ. ಇದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ಯುವ ಜನತೆಯೂ ಸಂಸ್ಕೃತಿಯ ಬಗ್ಗೆ ಕಾಳಜಿ ವಹಿಸಿ ದಿನನಿತ್ಯ ನಿಮ್ಮ ಜೀವನ ಕ್ರಮದಲ್ಲಿ ಏನು ಸಾಧ್ಯವಿದೆ ಅದನ್ನು ಬದಲಾಯಿಸಿಕೊಂಡು ಉತ್ತಮ ವಿದ್ಯಾರ್ಥಿಗಳಾಗಬೇಕು ಎಂದು ನುಡಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ವಿವೇಕಾನಂದ ಕಲಾ ,ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು (ಸ್ವಾಯತ್ತ) ಪುತ್ತೂರು ಇಲ್ಲಿನ ಅಂತಿಮ ಬಿ ಎ ವಿದ್ಯಾರ್ಥಿ ಹರಿಪ್ರಸಾದ್ ಮಾತನಾಡಿ, “ಭಾರತ ದರ್ಶನ ” ಭಗವದ್ಗೀತೆಗೆ ಸಮಾನವಾದದ ಅತ್ಯದ್ಭುತವಾದಂತಹ ಶ್ರೇಷ್ಠ ಪುಣ್ಯ ಗ್ರಂಥ .ಆಧುನಿಕತೆಯ ಅಮಲಿನಲ್ಲಿ ತೇಲುತ್ತಿರುವ ಇಂದಿನ ಈ ಸಮಾಜಕ್ಕೆ ರಾಷ್ಟ್ರೀಯ ತತ್ವವನ್ನು , ರಾಷ್ಟ್ರೀಯ ವಿಚಾರಧಾರೆಯನ್ನು ನೀಡುವಂತಹ ಪುಸ್ತಕ ಭಾರತ ದರ್ಶನ . ಸತ್ಯವನ್ನು ಪರಿಚಯಿಸಲು ಸತ್ಯದ ಚರಿತ್ರೆಯನ್ನು ತೋರಿಸಲು,ಪಾಶ್ಚಾತ್ಯ ಪ್ರೇರಣೆ ಗಳಿಂದ ಜ್ಞಾನ ಜ್ಯೋತಿಯು ಅಲುಗಾಡುತ್ತಿದೆ .ಅದನ್ನು ಸದೃಢಗೊಳಿಸಲು ಬೇಕಾಗುವಂಥದ್ದು ಭಾರತದ ದರ್ಶನ . ಜಗತ್ತಿನ ಇತಿಹಾಸದಲ್ಲಿ ಅನೇಕ ನಾಗರಿಕತೆಗಳು ಹುಟ್ಟಿ ಮಾಯವಾಗಿ ಬಿಟ್ಟಿವೆ ಆದರೆ ಭಾರತ ಕಳೆದ ಎರಡುವರೆ ಸಾವಿರನಿರಂತರ ದಾಳಿಯಿಂದಲೂ ಕೂಡ ತಪ್ಪಿಸಿಕೊಂಡು ಅಸ್ತಿತ್ವವನ್ನು ಉಳಿಸಿಕೊಂಡಿದೆ . ಈ ಮಣ್ಣಿನ ಸಾಹಿತ್ಯಕ್ಕೆ ಇರುವ ಗುಣ ಶ್ರೇಷ್ಠವಾದದ್ದು ಎಂದು ಹೇಳಿದರು.

. ವಿದ್ಯಾರ್ಥಿಗಳಲ್ಲಿ ರಾಷ್ಟ್ರ ಚಿಂತನೆ ಅನಿವಾರ್ಯ.ದೇಶಕ್ಕಾಗಿ ನಮ್ಮ ಕೈಯಿಂದ ಆಗುವಷ್ಟು ಕೊಡುಗೆಯನ್ನು ನೀಡಬೇಕು. ಆದರೆ ಹಾಗಾಗಬೇಕಾದರೆ ಜ್ಞಾನ ಮುಖ್ಯ.ಅದಕ್ಕಾಗಿ ಪುಸ್ತಕಗಳನ್ನು ಓದುದರಿಂದ ಅದೆಷ್ಟೋ ವಿಚಾರಗಳನ್ನು ತಿಳಿದುಕೊಳ್ಳಬಹುದು .ನಮ್ಮ ದೇಶದ ಬಗ್ಗೆ ತಿಳಿದುಕೊಳ್ಳಬಹುದು .ಭಾರತ ದರ್ಶನ ಎಂಬ ಪುಸ್ತಕ ಉತ್ತಮ ಸಂದೇಶವನ್ನು ನೀಡುತ್ತದೆ. ಆ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಒಳ್ಳೆಯದು. ವಿದ್ಯಾರ್ಥಿಗಳು ಪರಿವರ್ತನೆ ಹೊಂದಿ ರಾಷ್ಟ್ರ ಚಿಂತನೆಯ ಕಡೆ ಸಾಗಬೇಕು ಎಂದು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ ವಿಷ್ಣು ಗಣಪತಿ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.

ಕಾಲೇಜಿನ ಐಕ್ಯೂಎಸಿ ಘಟಕದ ಸಂಯೋಜಕರು ಪ್ರೊ ಶಿವಪ್ರಸಾದ್ ಕೆ ಎಸ್ ,ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ ಅರುಣ್ ಪ್ರಕಾಶ್, ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ವಿಷ್ಣು ಕುಮಾರ್ ಉಪಸ್ಥಿತರಿದ್ದರು.

ಕಾಲೇಜಿನ ವಿದ್ಯಾರ್ಥಿನಿಯರು, ದೇಶಭಕ್ತಿ ಗೀತೆಯನ್ನು ಹಾಡಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ವಿದ್ಯಾ ಎಸ್ ವಂದಿಸಿ ,ವಿದ್ಯಾರ್ಥಿ ಮಂಜುನಾಥ್ ಜೋಡುಕಲ್ ನಿರೂಪಿಸಿದರು.

LEAVE A REPLY

Please enter your comment!
Please enter your name here