ರಿಕ್ಷಾ ಚಾಲಕರ ಮನವಿಗೆ ಸ್ಪಂಧನೆ-ಬೇಡಿಕೆ ಈಡೇರಿಸುವುದಾಗಿ ಭರವಸೆ
ಪುತ್ತೂರು: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಗೌಡ ಚಿಲ್ತಡ್ಕರವರು ಕುಂಬ್ರದ ರಿಕ್ಷಾ ಚಾಲಕರ ಜೊತೆ ಸಂಭ್ರಮವನ್ನು ಅಚರಿಸಿದರು. ರಿಕ್ಷಾ ಚಾಲಕರ ಸಮಸ್ಯೆಯನ್ನು ಆಲಿಸಿದ ಅವರು ಕುಂಬ್ರದ ಆಟೋ ಪಾರ್ಕ್‌ಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಕಳೆದ ಕೊರೊನಾ ಸಮಯದಲ್ಲಿ ಕಿಟ್ ವಿತರಣೆ ವೇಳೆ ತಾರತಮ್ಯ ಮಾಡಿದ ವಿಚಾರವನ್ನು ಚಾಲಕರು ದಿವ್ಯಪ್ರಭಾರವರಲ್ಲಿ ಹೇಳಿಕೊಂಡರು.
ಇಂಧನ ಬೆಲೆ ಏರಿಕೆ, ಇನ್ಸೂರೆನ್ಸ್ ಏರಿಕೆ, ಬಾಡಿಗೆ ಇಲ್ಲದೇ ಇರುವ ವಿಚಾರದ ಬಗ್ಗೆ ಚಾಲಕರು ತಮ್ಮ ಸಂಕಷ್ಟವನ್ನು ದಿವ್ಯಪ್ರಭಾರ ಜೊತೆ ಹಂಚಿಕೊಂಡರು. ಸಮಸ್ಯೆ ಆಲಿಸಿದ ದಿವ್ಯಪ್ರಭಾ ಚಿಲ್ತಡ್ಕರವರು ಮುಂದಿನ ದಿನಗಳಲ್ಲಿ ನಿಮಗೆ ಒಳ್ಳೆಯ ದಿನಗಳು ಬರಲಿದೆ, ಸಂಕಷ್ಟಗಳು ನಿವಾರಣೆಯಾಗಲಿದೆ. ನನ್ನಿಂದಾಗುವ ಎಲ್ಲ ನೆರವು ನೀಡುತ್ತೇನೆ ಎಂದು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಚಾಲಕರಿಗೆ ಕ್ವಿಝ್ ಸ್ಪರ್ದೆ ಏರ್ಪಡಿಸಿ ವಿಜೇತ ಚಾಲಕರಿಗೆ ಬಹುಮಾನ ವಿತರಣೆ ಮಾಡಿದರು.
ಕಾಮಧೇನು ವಿವಿಧೊದ್ದೇಶ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಮಾಧವ ಗೌಡ, ಸ್ಪರ್ಶ ಸಹಾಯವಾಣಿಯ ಸಂಚಾಲಕ ಶಿವನಾಥ ರೈ ಮೇಗಿನಗುತ್ತು, ಕುಂಬ್ರ ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿ, ಒಳಮೊಗ್ರು ಗ್ರಾ.ಪಂ ಸದಸ್ಯ ಶೀನಪ್ಪ ನಾಯ್ಕ, ಯುವ ಕಾಂಗ್ರೆಸ್ ಮುಖಂಡ ಶಂಸುದ್ದೀನ್ ಅಜ್ಜಿನಡ್ಕ ಮತ್ತಿತರರು ಉಪಸ್ಥಿತರಿದ್ದರು. ಬಾಲಕೃಷ್ಣ ರೈ ಪೊರ್ದಾಳ್ ಕಾರ್ಯಕ್ರಮ ನಿರ್ವಹಿಸಿದರು.