ಮಹಾಬಲ ಲಲಿತಾ ಕಲಾ ಸಭಾ, ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯಿಂದ ಕರ್ನಾಟಕ ಶಾಸ್ತ್ರೀಯ ಸಂಗೀತದ `ತಾಳ-ಲಯ’ದ ಬಗ್ಗೆ ಕಾರ್ಯಾಗಾರ

0

ಪುತ್ತೂರು: ಮಹಾಬಲ ಲಲಿತಾ ಕಲಾ ಸಭಾ ಪುತ್ತೂರು ಮತ್ತು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ `ತಾಳ-ಲಯ’ದ ಬಗ್ಗೆ ಕಾರ್ಯಾಗಾರವು ಅ.30ರಂದು ದರ್ಬೆ ಶಶಿಶಂಕರ ಸಭಾಂಗಣದಲ್ಲಿ ಜರಗಿತು.
ವಿದ್ವಾನ್ ಮಣ್ಣಾರ್‌ಕೊಲ್ ಜೆ.ಬಾಲಾಜಿ ಚೆನ್ನೈರವರು ಸಂಗೀತ ಹಾಗೂ ಭರತನಾಟ್ಯ ವಿದ್ಯಾರ್ಥಿಗಳಿಗೆ `ತಾಳ-ಲಯ’ದ ಬಗ್ಗೆ ಕಾರ್ಯಾಗಾರವನ್ನು ನಡೆಸಿಕೊಟ್ಟರು.

ಬಳಿಕ ಕರ್ನಾಟಕ ಶಾಸ್ತ್ರೀಯ ಸಂಗೀತ ಜರಗಿದ್ದು ವಿದುಷಿ ಉಮಾ ರಾಮಕೃಷ್ಣನ್ ಬೆಂಗಳೂರು ಇವರು ಗಾಯನಕ್ಕೆ, ವಿದ್ವಾನ್ ವೇಣುಗೋಪಾಲ್ ಶ್ಯಾನ್‌ಬಾಗ್‌ರವರು ವಯೋಲಿನ್‌ನಲ್ಲಿ, ವಿದ್ವಾನ್ ಮಣ್ಣಾರ್‌ಕೊಲ್ ಜೆ.ಬಾಲಾಜಿರವರು ಮೃದಂಗವನ್ನು ನುಡಿಸಿದರು. ಸಮಾರೋಪ ಸಮಾರಂಭದಲ್ಲಿ ಪರ್ಲಡ್ಕ ಎಸ್‌ಡಿಪಿ ರೆಮಿಡೀಸ್‌ನ ಡಾ.ಹರಿಕೃಷ್ಣ ಪಾಣಾಜೆ, ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ದೀಪಕ್ ಕುಮಾರ್‌ರವರು ಉಪಸ್ಥಿತರಿದ್ದರು. ಮಹಾಬಲ ಲಲಿತಾ ಕಲಾ ಸಭಾದ ಮುಖ್ಯಸ್ಥ ಡಾ.ಶ್ರೀಪ್ರಕಾಶ್‌ರವರು ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here