ಕೆಆರ್‌ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಕುಂಬ್ರಕ್ಕೆ ಭೇಟಿ

0

ಲಂಚ, ಭ್ರಷ್ಟಾಚಾರ ವಿರುದ್ದ ಆಂದೋಲನಕ್ಕೆ ಬೆಂಬಲ ಘೋಷಣೆ

ಪುತ್ತೂರು: ಲಂಚಮುಕ್ತ ರಾಜ್ಯ ನಿರ್ಮಾಣದ ಅಜೆಂಡಾವನ್ನು ಹೊಂದಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆ.ಆರ್.ಎಸ್ ಪಕ್ಷ)ದ ರಾಜ್ಯಾಧ್ಯಕ್ಷರಾದ ರವಿಕೃಷ್ಣಾ ರೆಡ್ಡಿಯವರು ನ.3 ರಂದು ಕುಂಬ್ರಕ್ಕೆ ಭೇಟಿ ನೀಡಿದರು. ರಾಜ್ಯ ಪ್ರವಾಸದಲ್ಲಿರುವ ರವಿಕೃಷ್ಣಾ ರೆಡ್ಡಿಯವರು ಕುಂಬ್ರಕ್ಕೆ ಆಗಮಿಸಿದ ವೇಳೆ ಸುದ್ದಿ ಬಿಡುಗಡೆ ಕಛೇರಿಗೆ ಭೇಟಿ ನೀಡಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಅವರಿಗೆ ಲಂಚ ಭ್ರಷ್ಟಾಚಾರ ನಿರ್ಮೂಲನೆಯೇ ದೊಡ್ಡ ದೇಶ ಸೇವೆ ಎಂಬ ಧ್ಯೇಯವಾಕ್ಯವಿರುವ ಭ್ರಷ್ಟಾಚಾರ ವಿರುದ್ದದ ಸುದ್ದಿ ಆಂದೋಲನದ ಫಲಕವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸುದ್ದಿ ಸಮೂಹ ಸಂಸ್ಥೆಗಳ ನಿರ್ದೇಶಕರಾಗಿರುವ ಡಾ.ಯು.ಪಿ.ಶಿವಾನಂದರ ಈ ಹೋರಾಟ ಜಯಶಾಲಿಯಾಗಬೇಕಾಗಿದೆ. ರಾಜ್ಯಾದ್ಯಂತ ಈ ಆಂದೋಲನ ಪಸರಿಸಬೇಕಾಗಿದೆ. ಭ್ರಷ್ಟಾಚಾರ ವಿರೋಧದ ಬಗ್ಗೆ ಮಾತನಾಡುವ ನೈತಿಕತೆ ಯಾವ ರಾಜಕೀಯ ಪಕ್ಷಗಳಿಗೂ ಇಲ್ಲ ಓರ್ವ ಪತ್ರಿಕಾ ಸಂಪಾದಕನಾಗಿ ನಾಡಿನ ಸರ್ವ ಜನರ ಏಳಿಗೆಗಾಗಿ ಶ್ರಮಿಸುತ್ತಿರುವುದು ಉತ್ತಮ ಕಾರ್ಯವಾಗಿದೆ.ನಾವು ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿರ್ನಾಮ ಮಾಡುತ್ತೇವೆ ಎಂದು ಹೇಳಿ ಸುದ್ದಿ ಆಂದೋಲನಕ್ಕೆ ಬೆಂಬಲ ಸೂಚಿಸಿದರು. ಈ ಸಂದರ್ಭದಲ್ಲಿ ಕುಂಬ್ರ ಕಚೇರಿ ಮ್ಯಾನೇಜರ್ ಯೂಸುಪ್ ರೆಂಜಲಾಡಿ, ಸಿಬ್ಬಂದಿಗಳಾದ ಸಿಶೇ ಕಜೆಮಾರ್, ಸಿದ್ದಿಕ್ ಕುಂಬ್ರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here