ನ.5: ಅಕ್ಷಯ ಕಾಲೇಜಿನಲ್ಲಿ ಸಾಂಸ್ಕೃತಿಕ ಕಲರವ ‘ಅಕ್ಷಯ ವೈಭವ-2022’

0

ಸಚಿವ ಸುನೀಲ್ ಕುಮಾರ್, ಸಚಿವ ಕೋಟ, ಎಂಎಲ್‌ಸಿ ಭೋಜೆಗೌಡ, ಹರೀಶ್ ಕುಮಾರ್, ಒಡಿಯೂರು ಸ್ವಾಮೀಜಿ, ಕಣಿಯೂರು ಸ್ವಾಮೀಜಿಗಳ ಆಗಮನ

ಪುತ್ತೂರು: ಸಂಪ್ಯದಲ್ಲಿ ಅಕ್ಷಯ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್‌ನಡಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಸಾಂಸ್ಕೃತಿಕ ಕಲರವ ‘ಅಕ್ಷಯ ವೈಭವ-2022’ ನ.5 ರಂದು ಬೆಳಿಗ್ಗೆ ನಡೆಯಲಿರುವುದು.

ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ.ಸುನಿಲ್ ಕುಮಾರ್‌ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಇದರ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಪರಮಪೂಜ್ಯ ಶ್ರೀ ಮಹಾಬಲೇಶ್ವರ ಸ್ವಾಮೀಜಿರವರು ಆಶೀರ್ವಚನ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ಸಂಜೀವ ಮಠಂದೂರುರವರು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೆಗೌಡ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಆರ್ಯಾಪು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಮತಿ ಸರಸ್ವತಿ, ಮೂಲ್ಕಿ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್, ಮಂಗಳೂರು ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮನಾಭ ಆರ್, ಸಂತ ಫಿಲೋಮಿನಾ ಕಾಲೇಜು ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋ, ಬುಶ್ರಾ ವಿದ್ಯಾಸಂಸ್ಥೆಯ ಸ್ಥಾಪಕಾಧ್ಯಕ್ಷ ಅಜೀಜ್‌ರವರು ಭಾಗವಹಿಸಲಿದ್ದಾರೆ.

ಬೆಳಿಗ್ಗೆ ಗಣಹೋಮ, ಶಾರದಾಪೂಜೆ, ಭಜನಾ ಸಂಕೀರ್ತನೆ ಬಳಿಕ ಸಭಾ ಕಾರ್ಯಕ್ರಮ, ಅಪರಾಹ್ನ ಸಹ ಭೋಜನ ಬಳಿಕ ಸಾಂಸ್ಕೃತಿಕ ಕಲರವ ಸಾಂಸ್ಕೃತಿಕ ವೈಭವ, ಸಂಜೆ ದೀಪಾವಳಿ ವೈಭವ ನಡೆಯಲಿರುವುದು. ಈ ಸಂದರ್ಭದಲ್ಲಿ ಪುತ್ತೂರು ಗ್ಲೋರಿಯಾ ಕಾಲೇಜು ಇದರ ಸ್ಥಾಪಕಾಧ್ಯಕ್ಷ ಎಸ್.ಆನಂದ ಆಚಾರ್ಯ, ರಾಷ್ಟ್ರೀಯ ವಾಲಿಬಾಲ್ ತರಬೇತುದಾರರು ಹಾಗೂ ಕಾಲೇಜು ಆಡಳಿತ ಮಂಡಳಿ ಸದಸ್ಯ ಪಿ.ವಿ ನಾರಾಯಣನ್, ಅಂತರ್ರಾಷ್ಟ್ರೀಯ ಯೋಗ ಚಾಂಪಿಯನ್, ಕಾಲೇಜಿನ ತೃತೀಯ ಬಿಎಸ್ಸಿ ಫ್ಯಾಶನ್ ಡಿಸೈನ್ ವಿದ್ಯಾರ್ಥಿನಿ ಪ್ರಣಮ್ಯ ಸಿ.ಎರವರನ್ನು ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಅಕ್ಷಯ ಕಾಲೇಜು ಅಧ್ಯಕ್ಷ ಜಯಂತ್ ನಡುಬೈಲು, ಪ್ರಾಂಶುಪಾಲ ಸಂಪತ್ ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ.ಎ, ಆಡಳಿತ ನಿರ್ದೇಶಕಿ ಶ್ರೀಮತಿ ಕಲಾವತಿ ಜಯಂತ್, ಆಡಳಿತ ಮಂಡಳಿ ಸದಸ್ಯರಾದ ನಿವೃತ್ತ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಪಿತಾಂಬರ ಹೆರಾಜೆ, ಬೆಳ್ಳಾರೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಸೂರ್ಯನಾರಾಯಣ ಬಿ.ವಿ, ಪ್ರಗತಿಪರ ಕೃಷಿಕ ವೈ ಸುನೀಲ್ ಕುಮಾರ್ ಶೆಟ್ಟಿ, ಪಟ್ಟೆ ವಿದ್ಯಾಸಂಸ್ಥೆಗಳ ದೈಹಿಕ ಶಿಕ್ಷಣ ಶಿಕ್ಷಕ ಮೋನಪ್ಪ ಎಂ, ನಿವೃತ್ತ ಅರಣ್ಯ ಅಧಿಕಾರಿ ಕೆ.ಕೃಷ್ಣಪ್ಪ, ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ನಿವೃತ್ತ ಪ್ರಾಂಶುಪಾಲ ಪ್ರೊ|ಝೇವಿಯರ್ ಡಿ’ಸೋಜ, ನ್ಯಾಯವಾದಿ ಚಿದಾನಂದ ಬೈಲಾಡಿ, ಧನ್ವಂತರಿ ಕ್ಲಿನಿಕ್‌ನ ಡಾ.ಶ್ಯಾಮ್‌ಪ್ರಸಾದ್ ಎಂ, ಭಾರತ್ ಆಗ್ರೋ ಇಂಡಸ್ಟ್ರೀಸ್‌ನ ಪ್ಲೇಸ್ ಮ್ಯಾನೇಜರ್ ನವೀನ್ ಕೆ, ಮಾಜಿ ಯೋಧ ಎನ್.ಕೆ ಸುಂದರ ಗೌಡರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮಗಳು…‌

-ಬೆಳಿಗ್ಗೆ ಗಣಹೋಮ, ಶಾರದಾಪೂಜೆ, ಭಜನಾ ಸಂಕೀರ್ತನೆ
-ಸಭಾ ಕರ್ಯಕ್ರಮ
-ಮಧ್ಯಾಹ್ನ ಸಾಂಸ್ಕೃತಿಕ ಕಲರವ ಸಾಂಸ್ಕೃತಿಕ ವೈಭವ
-ಸಂಜೆ ದೀಪಾವಳಿ ವೈಭವ
-ಸಭಾ ಕಾರ್ಯಕ್ರದಲ್ಲಿ ಮೂವರು ಸಾಧಕರಿಗೆ ಸನ್ಮಾನ

LEAVE A REPLY

Please enter your comment!
Please enter your name here