ಪುತ್ತೂರು: ಮೂಡಬಿದಿರೆಯ ಕೊನ್ನಾರ ಮಾಗಣೆ,ಪಣಪಿಲ ಅರಮನೆಗೆ ಸಂಬಂಧಿಸಿದ ದರೆಗುಡ್ಡೆ ಮಹತೋಭಾರ ಶ್ರೀ ಕ್ಷೇತ್ರ ಇಟಲ ಶ್ರೀ ಸೋಮನಾಥೇಶ್ವರ ದೇವಸ್ಥಾನಕ್ಕೆ ಸುಳ್ಯದ ಪಂಜದಿಂದ
ಮೆರವಣಿಗೆ ಮೂಲಕ ಕೊಂಡೊಯ್ಯುವ ನೂತನ ಕೊಡಿಮರಕ್ಕೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜಾ ವಿಧಿ ವಿಧಾನ ಕಾರ್ಯಕ್ರಮ ನಡೆಯಿತು.
ಶಾಸಕ ಸಂಜೀವ ಮಠಂದೂರು, ನಗರಸಭಾ ಅಧ್ಯಕ್ಷ ಕೆ ಜೀವಂಧರ್ ಜೈನ್, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮದಾಸ ಗೌಡ, ರಾಮಚಂದ್ರ ಕಾಮತ್, ಬಿ ಐತ್ತಪ್ಪ ನಾಯ್ಕ್ ಅವರು ಕೊಡಿಮರ ಮೆರವಣಿಗೆಯನ್ನು ಸ್ವಾಗತಿಸಿ ಪುಷ್ಪಾರ್ಚನೆ ಮಾಡಿದರು. ದೇವಳದ ಅರ್ಚಕ ಶಂಕರ ಭಟ್ ಕೊಡಿಮರಕ್ಕೆ ಆರತಿ ಬೆಳಗಿದರು. ಈ ಸಂದರ್ಭ ದೇವಳದ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್, ಪಣಪಿಲ ಅರಮನೆಯ ಮುಖ್ಯಸ್ಥರಾದ ಬಿ.ವಿಮಲ್ ಕುಮಾರ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಕಾರ್ಯಧ್ಯಕ್ಷ ಸುಕೇಶ್ ಶೆಟ್ಟಿ ಎದಮೇರು, ಶ್ರೀ ಕ್ಷೇತ್ರ ಇಟಲದ ಅಸ್ರಣ್ಣರಾದ ನಾಗರಾಜ್ ಭಟ್,ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿಗಳಾದ ಸುಧೀಶ್ ಜೈನ್, ಪ್ರಧಾನ ಕಾರ್ಯದರ್ಶಿಗಳಾದ ಪ್ರಮೋದ್ ಆರಿಗ ಮಜಲೋಡಿ ಗುತ್ತು ಹಾಗೂ ಇತರೆ ಪ್ರಮುಖರು ಉಪಸ್ಥಿತರಿದ್ದರು.
Home ಚಿತ್ರ ವರದಿ ಮೂಡಬಿದಿರೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ನೂತನ ಕೊಡಿಮರಕ್ಕೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ