ಎಸ್ ಪಿ ವೈ ಎಸ್ ಎಸ್ ವತಿಯಿಂದ ಪುತ್ತೂರಿನಲ್ಲಿ ಉಚಿತ ಯೋಗಶಿಕ್ಷಣ ತರಗತಿ 

0

ಪುತ್ತೂರು: ಯೋಗ ಸಂಘಟನೆಯಲ್ಲಿ ಪ್ರಖ್ಯಾತಿ ಪಡೆದ ಎಸ್. ಪಿ .ವೈ ಎಸ್. ಎಸ್ ಕರ್ನಾಟಕ ನೇತ್ರಾವತಿ ವಲಯದ ವತಿಯಿಂದ 48 ದಿನಗಳ ಕಾಲ ನಡೆಯಲಿರುವ ಉಚಿತ ಯೋಗ ಶಿಕ್ಷಣ ತರಗತಿಯು ನ.7ರಂದು ಮೂರು ಕಡೆಗಳಲ್ಲಿ ಉದ್ಘಾಟನೆಗೊಳ್ಳಲಿದೆ.


ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಶ್ರೀ ಸುಭದ್ರ ಸಭಾ ಮಂದಿರ ಮುಕ್ರಂಪಾಡಿ ಹಾಗೂ ಶ್ರೀ ಷಣ್ಮುಖ ಸುಬ್ರಮಣ್ಯ ಶ್ರೀ ಮಹಾವಿಷ್ಣು ಸಭಾವೇದಿಕೆ ಕೆಮ್ಮಿಂಜೆ ಯಲ್ಲಿ ಬೆಳಿಗ್ಗೆ 5 ಗಂಟೆಯಿಂದ 6.30ರವರಗೆ ತರಗತಿಗಳು ನಡೆಯಲಿದೆ. 10 ವರ್ಷದಿಂದ ಮೇಲ್ಪಟ್ಟ ಎಲ್ಲಾ ವಯಸ್ಸಿನವರು ತರಗತಿಯಲ್ಲಿ ಭಾಗವಹಿಸಬಹುದು.

ಮಧುಮೇಹ, ರಕ್ತದೊತ್ತಡ, ಬೊಜ್ಜಿನ ಸಮಸ್ಯೆ,ಮೂಲವ್ಯಾಧಿ, ಅಸಿಡಿಟಿ,ಅಜೀರ್ಣ, ಸಂಧಿವಾತ, ನಿದ್ರಾಹೀನತೆ , ವಾತರೋಗ,ಮಾನಸಿಕ ಒತ್ತಡ,ಮಂಡಿನೋವು,ಮತ್ತು ಬೆನ್ನು ನೋವು ಇವುಗಳಿಗೆ ಸೂಕ್ತ ಚಿಕಿತ್ಸಾ ಕ್ರಮವನ್ನು ಯೋಗದ ಮೂಲಕ ನೀಡಿ ಗರಿಷ್ಠ ಪ್ರಮಾಣದಲ್ಲಿ ನಿಯಂತ್ರಿಸಬಹುದು. ಕೇಂದ್ರ ಸಮಿತಿ ಯಿಂದ ತರಬೇತಿ ಪಡೆದ ನುರಿತ ಶಿಕ್ಷಕರಿಂದ ಪುತ್ತೂರಿನ ಮೂರು ಕಡೆಗಳಲ್ಲಿ ತರಗತಿಗಳು ನಡೆಯಲಿದೆ.

ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ನಡೆಯುವ ತರಗತಿಯಲ್ಲಿ ಭಾಗವಹಿಸುವವರು ಹೆಚ್ಚಿನ ಮಾಹಿತಿ ಗಾಗಿ 9886576213, 9449282777, 9448548362

ಮತ್ತು ಶ್ರೀ ಸುಭದ್ರ ಸಭಾ ಮಂದಿರ ಮುಕ್ರಂಪಾಡಿಯ ತರಗತಿಯಲ್ಲಿ ಭಾಗವಹಿಸುವವರು ಹೆಚ್ಚಿನ ಮಾಹಿತಿಗಾಗಿ 9964276623, 9743703008, 9480792827

ಮತ್ತು ಶ್ರೀ ಷಣ್ಮುಖ ಸುಬ್ರಮಣ್ಯ ಶ್ರೀ ಮಹಾವಿಷ್ಣು ಸಭಾವೇದಿಕೆ ಕೆಮ್ಮಿಂಜೆ ಯಲ್ಲಿ ನಡೆಯುವ ತರತಿಯಲ್ಲಿ ಭಾಗಹಿಸುವವರು ಹೆಚ್ಚಿನ ಮಾಹಿತಿಗಾಗಿ 9886576213, 7676120532, 9535710073 ಇವರನ್ನು ಸಂಪರ್ಕಿಸಬಹುದು ಎಂದು ಸಂಘಟಕರು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here