ಕುದ್ಮಾರು ಶಾಲೆಯ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ತಾ| ಮಟ್ಟಕ್ಕೆ ಆಯ್ಕೆ

0

ಕಾಣಿಯೂರು: ಕಾಣಿಯೂರು ಸ.ಪ.ಪೂ.ಕಾಲೇಜಿನಲ್ಲಿ ನಡೆದ ಸವಣೂರು ವಲಯ ಮಟ್ಟದ ಕ್ರೀಡಾ ಕೂಟದಲ್ಲಿ ಕುದ್ಮಾರು ಸ.ಉ.ಹಿ.ಪ್ರಾ.ಶಾಲಾ ವಿದ್ಯಾರ್ಥಿಗಳು ತಾಲೂಕು ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕರ ವಿಭಾಗದ ಉದ್ದ ಜಿಗಿತದಲ್ಲಿ ಮಹಮ್ಮದ್ ಮುಕ್ತಾರ್ ತೃತೀಯ, ಬಾಲಕಿಯರ ವಿಭಾಗದ ಎತ್ತರ ಜಿಗಿತದಲ್ಲಿ ಅಂಕಿತಾ, ೨೦೦ ಮೀ ಓಟದಲ್ಲಿ ಪ್ರಣ್ಯ ದ್ವಿತೀಯ, ರಿಲೇಯಲ್ಲಿ ನಿಶ್ಚಿತಾ, ಪೂರ್ವಿತಾ, ಅಂಕಿತಾ, ಪ್ರಣ್ಯ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಶಾಲಾ ಮುಖ್ಯಗುರು ಕುಶಾಲಪ್ಪ, ಬೆಳಂದೂರು ಗ್ರಾ.ಪಂ.ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ, ಎಸ್‌ಡಿಎಂಸಿ ಅಧ್ಯಕ್ಷ ಗಂಗಾಧರ ಗೌಡ ಉಪಸ್ಥಿತರಿದ್ದು, ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್ ಕುಮಾರ್ ಹಾಗೂ ಶಿಕ್ಷಕ ವೃಂದದವರು ಮಾರ್ಗದರ್ಶನ ನೀಡಿರುತ್ತಾರೆ.

LEAVE A REPLY

Please enter your comment!
Please enter your name here