ಸಂಪ್ಯ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಗೋಪೂಜೆ, ಮಾಹಿತಿ ಕಾರ್ಯಾಗಾರ

0

ಪುತ್ತೂರು : ಸಂಪ್ಯ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಗೋಪೂಜೆ ಹಾಗೂ ಜಾನುವಾರು ಖಾಯಿಲೆ ಮತ್ತು ಹಾಲಿನ ಗುಣಮಟ್ಟದ ಬಗ್ಗೆ ಮಾಹಿತಿ ಕಾರ್ಯಾಗಾರವು ನ.5ರಂದು ಸಂಜೆ ಸಂಘದ ಆವರಣದಲ್ಲಿ ನೆರವೇರಿತು.

ಜಾನುವಾರು ಖಾಯಿಲೆ ಬಗ್ಗೆ ಮಾಹಿತಿ ನೀಡಿದ ದ.ಕ ಹಾಲು ಉತ್ಪಾದಕರ ಒಕ್ಕೂಟದ ಪುತ್ತೂರು ವಲಯದ ಉಪವ್ಯವಸ್ಥಾಪಕ ಡಾ.ಸತೀಶ್ ರಾವ್ ಮಾತನಾಡಿ, ಹಾಲು ಉತ್ಪಾದನೆಯಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ. ಹೈನುಗಾರಿಕೆಯೇ ಹಲವಾರು ಕುಟುಂಬಗಳಿಗೆ ಜೀವಾನಾಧಾರವಾಗಿದೆ ಎಂದರು. ಇತ್ತೀಚೆಗೆ ಜಾನುವಾರುಗಳಿಗೆ ಚರ್ಮಗಂಟು ರೋಗ ಬಾಧಿಸುತ್ತಿದ್ದು ಇದು ಹೊರ ರಾಜ್ಯದಿಂದ ಹರಡುವಂತ ಖಾಯಿಲೆಯಾಗಿದೆ. ಇದರಲ್ಲಿ ಜಾನುವಾರುಗಳು ಮರಣ ಹೊಂದುವಂತ ಭೀಕರ ಖಾಯಿಲೆಯಲ್ಲ. ಜ್ವರ, ಕಣ್ಣಲ್ಲಿ ನೀರು ಬರುವ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಜೊತೆಗೆ ಹಸುಗಳಿಗೆ ಅವುಗಳಿಗೆ ಹಸಿವು ಕಡಿಮೆಯಿರುತ್ತದೆ. ಚರ್ಮದಲ್ಲಿ ಗಂಟುಗಳು ‌ಬೀಳುತ್ತದೆ. ಗಾಬರಿ ಪಡಬೇಕಾಗಿಲ್ಲ. ಈ ಭಾಗದಲ್ಲಿ ಬಂದಿಲ್ಲ. ಚರ್ಮ ಗಂಟು ಜ್ವರಕ್ಕಿಂತ ಕಾಲು ಬಾಯಿ ರೋಗ ಭೀಕರ ಸ್ವರೂಪದ್ದಾಗಿದ್ದು ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಬೇಕುವ ಎಂದು ಅವರು ತಿಳಿಸಿದರು.

ವಿಸ್ತರಣಾಧಿಕಾರಿ ನಾಗೇಶ್ ಮಾತನಾಡಿ, ಹಾಲು ಆಹಾರ ಪದಾರ್ಥ. ಹಾಲಿಗೆ ಕಲಬೆರಕೆ ಮಾಡಿದರೆ ಶಿಕ್ಷಾರ್ಹ ಅಪರಾಧ. ನಿಗದಿತ ಗುಣಮಟ್ಟಕ್ಕಿಂತ ಕಡಿಮೆ ಗುಣಮಟ್ಟದ ಹಾಲನ್ನು ಒಕ್ಕೂಟ ಖರೀದಿಸುವಂತಿಲ್ಲ ಎಂದು ಹೇಳಿ ಗುಣಮಟ್ಟ ಕಾಯ್ದುಕೊಳ್ಳುವ ಬಗ್ಗೆ ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಮೂಲಚಂದ್ರ ಮಾತನಾಡಿ, ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಕನಿಷ್ಠ 5ಸೆಂಟ್ಸ್ ಜಾಗ ಗುರುತಿಸಿಕೊಟ್ಟು ಸಹಕರಿಸುವಂತೆ ಮನವಿ ಮಾಡಿದರು.
ಸಂಘದ ಉಪಾಧ್ಯಕ್ಷ ರಮಾನಂದ ಬಲ್ಯಾಯ, ನಿರ್ದೇಶಕರಾದ ವಿಶ್ವೇಶ್ ಜಿ.ಕೆ., ಹರೀಶ್ ಎಂ, ಸಂದೀಪ್ ಬಾರಿಕೆ, ಶಿವಪ್ರಸಾದ್,‌ ವಿಜಯ ಬಿ.ಎಸ್., ಶಂಕರನಾರಾಯಣ ಭಟ್ ‌ಕೆ., ಆನಂದ ಗೌಡ ಕುಕ್ಕಾಡಿ, ಲಿಂಗಪ್ಪ ಗೌಡ ಕೊಲ್ಯ, ಗೀತಾ ಬಾರಿಕೆ, ಹೇಮಲತಾ ಕುಕ್ಕಾಡಿ, ಗಿರಿಜಾ ಉದಯಗಿರಿ, ಸಿಬಂದಿಗಳಾದ ಶರ್ಮಿಳಾ ಹಾಗೂ ಪ್ರೇಮ ಸೇರಿದಂತೆ ಹಲವು ಸದಸ್ಯರು ಹಾಗೂ ಹೈನುಗಾರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here