ವಲಯ ಮಟ್ಟದ ಕ್ರೀಡಾಕೂಟ: ಪಟ್ಟೆ ಪ್ರತಿಭಾ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಹಲವು ಬಹುಮಾನ

0

ಪುತ್ತೂರು : ಕಾಣಿಯೂರು ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಬಡಗನ್ನೂರು ಪಟ್ಟೆ ಪ್ರತಿಭಾ ಪ್ರೌಢಶಾಲೆಯ ತನುಶ್ರೀ ಬಿ. ರೈರವರು 14 ರ ವಯೋಮಾನದ ಬಾಲಕಿಯರ ವಿಭಾಗದ ಗುಂಡೆಸೆತ ಮತ್ತು ಚಕ್ರಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. 17 ರ ವಯೋಮಾನದ ಬಾಲಕಿಯರ ವಿಭಾಗದ ಚಕ್ರಎಸೆತ ಸ್ಪರ್ಧೆಯಲ್ಲಿ ತೃಶಾ ಕೆ.ಎನ್ ದ್ವಿತೀಯ ಮತ್ತು ಗುಂಡೆಸೆತ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ. 17 ರ ವಯೋಮಾನದ ಬಾಲಕರ ವಿಭಾಗದ 3000 ಮೀಟರ್ ಓಟ ಸ್ಪರ್ಧೆಯಲ್ಲಿ ಪ್ರತೀಕ್ ಟಿ. ಪ್ರಥಮ ಸ್ಥಾನ ಪಡೆದಿರುತ್ತಾರೆ. 14ರ ವಯೋಮಾನದ ಬಾಲಕರ ವಿಭಾಗದ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಇಸ್ಮಾಯಿಲ್ ಮಿದ್‌ಲಾಜ್ ತೃತೀಯ ಸ್ಥಾನ ಪಡೆದಿರುತ್ತಾರೆ.

LEAVE A REPLY

Please enter your comment!
Please enter your name here