ಮಂಗಳೂರು ವಿಶ್ವ ವಿದ್ಯಾನಿಲಯ ಆರನೇ ಸೆಮಿಸ್ಟರ್ ಪರೀಕ್ಷಾ ಫಲಿತಾಂಶ ಪ್ರಕಟ

0

ಕುಂಬ್ರ ಮರ್ಕಝುಲ್ ಹುದಾ ಪದವಿ ಕಾಲೇಜಿಗೆ 100% ಫಲಿತಾಂಶ

ಪುತ್ತೂರು: ಮರ್ಕಝುಲ್ ಹುದಾ ಪದವಿ ಕಾಲೇಜು ಕುಂಬ್ರ ಇದರ 2021-22ನೇ ಸಾಲಿನ ಅಂತಿಮ ಪದವಿ ವಿಭಾಗದ 6ನೇ ಸೆಮಿಸ್ಟರ್ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ಮರ್ಕಝುಲ್ ಹುದ ಪದವಿ ಕಾಲೇಜು 100% ಫಲಿತಾಂಶ ಪಡೆದುಕೊಂಡಿದೆ. ಬಿ.ಕಾಂ ವಿಭಾಗದಲ್ಲಿ 10 ವಿಶಿಷ್ಟ ಶ್ರೇಣಿ ಹಾಗೂ ಬಿ.ಎ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿನಿಯರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿ ಉತ್ತಮ ಸಾಧನೆ ಮಾಡಿದ್ದಾರೆ.
ಬಿ.ಕಾಂ ವಿಭಾಗದಲ್ಲಿ ಫಾತಿಮಾತು ನುಸೈಬ ಕೆ. ಎ. 87% ಅಂಕಗಳೊಂದಿಗೆ ಮೊದಲ ಸ್ಥಾನವನ್ನು ಪಡೆದರೆ, ನಜಿಲಾ 86% ಅಂಕಗಳೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಬಿ. ವಿಭಾಗದಲ್ಲಿ ಫಾತಿಮಾತ್ ಸನಾನ್ 76% ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದರೆ, ಫಾತಿಮಾತ್ ಸಫನ ಕೆ.ಆರ್.೭೫% ಅಂಕಗಳೊಂದಿಗೆ ದ್ವಿತೀಯ ಸ್ಥಾನ ಹಾಗೂ ಫೈರೋಝ ಟಿ.ಎಸ್, ನಾಫಿಯ ಕೆ.ವೈ, ಮುಬಶ್ಶಿರ ಎಂ ಯು, ರಾಫಿಯ, ಖದೀಜತ್ ಮುಬಶ್ಶಿರ, ಶಅನಾಝ್ ಅಮೀನ, ಆಯಿಷತ್ ಸಫಾನ ಸಿ.ಎಂ, ಆಯಿಷತ್ ಸಿದ್ದೀಕ, ಸುಮಯ್ಯ, ಜಬೀನ ಜಿ.ಎ,ಫಾತಿಮತ್ ತಬಸ್ಸುಂ, ರಮೀಝ ಮೊದಲಾದವರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವುದಾಗಿ ಕಾಲೇಜು ಆಡಳಿತ ಸಮಿತಿಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here