ಪುತ್ತಿಲ ಶ್ರೀರಾಮ ಗೆಳೆಯರ ಬಳಗದಿಂದ ಹಗ್ಗ ಜಗ್ಗಾಟ, ನೂತನ ಪದಾಧಿಕಾರಿಗಳ ಪದಗ್ರಹಣ

0

ಪುತ್ತೂರು: ನರಿಮೊಗರು ಪುತ್ತಿಲ ಶ್ರೀರಾಮ ಗೆಳೆಯರ ಬಳಗದ ವತಿಯಿಂದ ದೀಪಾವಳಿಯ ಅಂಗವಾಗಿ ಪುರುಷ ಮತ್ತು ಮಹಿಳೆಯರ 510 ಕೆ.ಜಿಯ 7 ಜನರ ಮುಕ್ತ ಹಗ್ಗ ಜಗ್ಗಾಟ ಶ್ರೀ ರಾಮ್ ಟ್ರೋಫಿ-2022 ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ನ.6ರಂದು ಪುತ್ತಿಲ ಶ್ರೀರಾಮ ಕ್ರೀಡಾಂಗಣದಲ್ಲಿ ನಡೆಯಿತು.

ಮಧ್ಯಾಹ್ನ ಪ್ರಾರಂಭಗೊಂಡ ಹಗ್ಗ ಜಗ್ಗಾಟ ಪಂದ್ಯಾಟವನ್ನು ಮುಂಡೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಪುರಂದರ ಗೌಡ ಹಾಗೂ ಕರಮನೆಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಪುಷ್ಪಾ ದೀಪ ಬೆಳಗಿಸಿ ಉದ್ಘಾಟಿಸಿದರು. ಎಪಿಎಂಸಿ ಮಾಜಿ ನಿರ್ದೇಶಕ ಸುಂದರ ನಾಯ್ಕ ಬಿ.ಕೆ., ನರಿಮೊಗರು ಗ್ರಾ.ಪಂ ಉಪಾಧ್ಯಕ್ಷ ಸುಧಾಕರ ಕುಲಾಲ್, ಮುಂಡೂರು ಗ್ರಾ.ಪಂ ಸದಸ್ಯರಾದ ಕಮಲೇಶ್ ಸರ್ವೆದೋಳ, ಪ್ರವೀಣ್ ನೆಕ್ಕಿತ್ತಡ್ಕ, ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಬಾಲಚಂದ್ರ ಗೌಡ ಕಡ್ಯ, ಪ್ರಗತಿ ಪರ ಕೃಷಿಕರಾದ ನೀಲಪ್ಪ ಪೂಜಾರಿ, ದೇರಣ್ಣ ಶೆಟ್ಟಿ ನಡುಬೈಲು ಉಪಸ್ಥಿತರಿದ್ದರು.

ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಯೋಧ ಸುಂದರ ಗೌಡ ನಡುಬೈಲು ಮಾತನಾಡಿ, ಶ್ರೀರಾಮ ಗೆಳೆಯರ ಬಳಗವು ಕ್ರೀಡೆಗೆ ಪ್ರೋತ್ಸಾಹ ನೀಡುವ ಜೊತೆಗೆ ಊರಿನ ಜನತೆ ಸಂಕಷ್ಟಗಳಿಗೆ ಸ್ಪಂಧಿಸುತ್ತದೆ. ಆಯೋಜಿಸಿರುವ ಹಗ್ಗ ಜಗ್ಗಾಟ ಪಂದ್ಯಾಟವು ಅರ್ಥಪೂರ್ಣವಾಗಿ ಮೂಡಿಬಂದಿದೆ. ಕ್ರೀಡೆಯಲ್ಲಿ ಸ್ಪರ್ಧಾಳುಗಳು ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸಬೇಕು. ಕೆಲವು ಸಂದರ್ಭಗಳಲ್ಲಿ ಕಾಳೆಲೆಯುವ ಸಂದರ್ಭಗಳೇ ಅಧಿಕ. ಅವುಗಳನ್ನು ಬಿಟ್ಟು ಪ್ರೋತ್ಸಾಹ ನೀಡಬೇಕು. ಗೆಳೆಯರ ಬಳಗದ ಗೌರವಾಧ್ಯಕ್ಷರಾಗಿರುವ ಅರುಣ್ ಕುಮಾರ್ ಪುತ್ತಿಲರವರು ಪರೋಪಕಾರಿ ಜೀವಿ. ಈ ಭಾಗದಲ್ಲಿ ಆಪತ್ಪಾಂಧವರಂತೆ ಎಲ್ಲರ ಜೊತೆ ಬೆರೆಯುತ್ತಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿದ್ದ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ದಿನೇಶ್ ಸಾಲಿಯಾನ್ ಮಾತನಾಡಿ, ತಾಲೂಕು ಯುವಜನ ಒಕ್ಕೂಟದಿಂದ ಯುವಕ, ಯುವತಿ ಮಂಡಲಗಳಿಗೆ ಒಂದು ವರ್ಷದ ವರದಿ ಆದರಿಸಿ ನೀಡುವ ಯುವ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದರಲ್ಲಿ ಯುವಕ, ಯುವತಿ ಮಂಡಲಗಳಿಗೆ ಹಾಗೂ ವೈಯಕ್ತಿಕ ಪ್ರಶಸ್ತಿ ನೀಡಲಾಗುವುದು. ಜ.12ರಂದು ಪುತ್ತೂರಿನಲ್ಲಿ ನಡೆಯುವ ಯುವ ಸಮಾವೇಶ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಲಾಗುವುದು ಎಂದು ಹೇಳಿದ ಅವರು ಶ್ರೀರಾಮ ಗೆಳೆಯರ ಬಳಗವು ಕ್ರೀಡೆಗೆ ಮಾತ್ರವಲ್ಲ ಸೀಮಿತವಾಗಿಲ್ಲ. ಬಹಳಷ್ಟು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ. ಬಳಗದ ದಶಮಾನೋತ್ಸವಕ್ಕೆ ಯುವಜನ ಒಕ್ಕೂಟದಿಂದ ಸಹಕಾರ ನೀಡಲಾಗುವುದು ಎಂದರು.

ಬಹುಮಾನ ವಿತರಿಸಿದ ವೆಂಕಟೇಶ್ ಎಂ.ಡಿ ಮುಂಡೂರು ಮಾತನಾಡಿ, ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಕ್ರೀಡೆಯಲ್ಲಿ ಭಾಗವಹಿಸಿದ್ದಾರೆ. ತಂಡವಾಗಿ ಶ್ರಮವಹಿಸಿ ಸಾಧನೆ ಮಾಡಿದರೆ ಸಾಧನೆ ಮಾಡಿದಂತೆ ಇದೇ ರೀತಿಯ ಉತ್ಸಾಹದಲ್ಲಿ ಎಲ್ಲಾ ಕಾರ್ಯಗಳಲ್ಲಿ ಭಾಗಿಯಾಗುವಂತೆ ಅವರು ತಿಳಿಸಿದರು.

ಶ್ರೀರಾಮ ಗೆಳೆಯರ ಬಳಗದ ಗೌರವಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಸಮಾಜದಲ್ಲಿ ಸಮಾನತೆಯ ಸಂದೇಶ ಸಾರುವ ಯೋಚನೆಯಲ್ಲಿ ಸ್ಥಾಪಿತಗೊಂಡಿರುವ ಗೆಳೆಯರ ಬಳಗ ಒಂಬತ್ತು ವರ್ಷದಲ್ಲಿ ಬಹಳಷ್ಟು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಬಡವರಿಗೆ ಮನೆ ನಿರ್ಮಾಣ, ಕೊರೋನಾದ ಸಮಯದಲ್ಲಿ ಕಿಟ್ ವಿತರಣೆ ಮಾಡಿದೆ. ಕ್ರೀಡೆಗೆ ಸೀಮಿತವಾಗಿರದೆ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ಶಕ್ತಿ ನೀಡಲಾಗುತ್ತಿದೆ. ರಸ್ತೆ ಸೌಲಭ್ಯಗಳಿಂದ ವಂಚಿತವಾಗಿದ್ದ 50 ಮನೆಗಳಿಗೆ ರಸ್ತೆ ನಿರ್ಮಿಸಿಕೊಡುವಲ್ಲಿ ಗೆಳೆಯರ ಬಳಗ ಪ್ರಮುಖ ಪಾತ್ರ ವಹಿಸಿದೆ ಎಂದ ಅವರು ದಶಮಾನೋತ್ಸವವನ್ನು ವಿನೂತನ ರೀತಿಯಲ್ಲಿ ಆಯೋಜಿಸಲಾಗುವುದು ಎಂದರು.

ಮುಂಡೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಅನಿಲ್ ಕುಮಾರ್ ಕಣ್ಣಾರ್ನೂಜಿ ಮಾತನಾಡಿ, ಹಗ್ಗ ಜಗ್ಗಾಟ ಪಂದ್ಯಾಟ ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದ ಸ್ಪರ್ಧೆಯಾಗಿ ಮೂಡಿಬರಲಿ ಎಂದರು.

ಮುಂಡೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಪುರಂದರ ಗೌಡ ನಡುಬೈಲು, ಸದಸ್ಯರಾದ ಬಾಲಕೃಷ್ಣ ಪೂಜಾರಿ ಕುರೆಮಜಲು, ಅರುಣಾ ಅನಿಲ್ ಕಣ್ಣಾರ್ನೂಜಿ, ನರಿಮೊಗರು ಮರಾಟಿ ಸಂಘದ ಅಧ್ಯಕ್ಷ ಮೋಹನ ನಾಯ್ಕ, ಹಗ್ಗ ಜಗ್ಗಾಟ ತಾಲೂಕು ಯೂನಿಯನ್ ಅಧ್ಯಕ್ಷ ಉಮೇಶ್ ಎಸ್.ಕೆ ಸಂಪ್ಯ, ದಾನಿ ವೆಂಕಪ್ಪ ಮೇಸ್ತ್ರಿ ಬಳ್ಳಮಜಲು, ಶ್ರೀ ರಾಮ ಗೆಳೆಯರ ಬಳಗದ ಅಧ್ಯಕ್ಷ ಹರೀಶ್ ಬಿ.ಕೆ., ಕಾರ್ಯದರ್ಶಿ ದಿನೇಶ್ ಬಿ.ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪದಗ್ರಹಣ

ಕಾರ್ಯಕ್ರಮದಲ್ಲಿ ಶ್ರೀರಾಮ ಗೆಳೆಯರ ಬಳಗದ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿತು. ಅಧ್ಯಕ್ಷ ಹರೀಶ್ ಬಿ.ಕೆಯವರು ನೂತನ ಅಧ್ಯಕ್ಷ ಪುರುಷೋತ್ತಮ ಬಿ.ಕೆಯವರಿಗೆ ದಾಖಲೆ ಪತ್ರಗಳ ಹಸ್ತಾಂತರಿಸುವ ಮೂಲಕ ಪದಗ್ರಹಣ ನೆರವೇರಿತು. ನಿಕಟಪೂರ್ವ ಕಾರ್ಯದರ್ಶಿ ದಿನೇಶ್ ಬಿ.ಕೆ., ನೂತನ ಕಾರ್ಯದರ್ಶಿ ಯೋಗೀಶ್ ಕಲ್ಲಮ, ಕೋಶಾಧಿಕಾರಿ ರಾಧಾಕೃಷ್ಣ ಪುತ್ತಿಲ, ಸಂಚಾಲಕ ಪುರಂದರ ಗೌಡ, ಕ್ರೀಡಾ ಕಾರ್ಯದರ್ಶಿ ರುಕ್ಮಯ್ಯ ಕೇದಗೆದಡಿ, ಜತೆ ಕಾರ್ಯದರ್ಶಿಗಳಾದ ಅವಿನಾಶ್ ಹಾಗೂ ವಿನಯ್ ಪುತ್ತಿಲ ಉಪಸ್ಥಿತರಿದ್ದರು.

ಸನ್ಮಾನ

ಮುಖ್ಯ ಮಂತ್ರಿ ಪದಕ ಪಡೆದ ಸಂಪ್ಯ ಠಾಣಾ ಹೆಡ್ ಕಾನ್ ಸ್ಟೇಬಲ್ ಪ್ರವೀಣ್ ರೈ ಪಾಲ್ತಾಡು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುರುಪ್ರಿಯ ನಾಯಕ್ ರವರನ್ನು ಸನ್ಮಾನಿಸಲಾಯಿತು. ಪಂದ್ಯಾಟಕ್ಕೆ ವಿವಿಧ ರೂಪದಲ್ಲಿ ಸಹಕರಿಸಿದವರನ್ನು ಗೌರವಿಸಲಾಯಿತು. ಪಂದ್ಯಾಟದ ತೀರ್ಪುಗಾರರಾದ ಮನೋಹರ್ ಮೆದು, ನಂದನ್ ಹಾಗೂ ವಸಂತರವರನ್ನು ಗೌರವಿಸಲಾಯಿತು.

ಮುಂಡೂರು ಗ್ರಾ.ಪಂ ಸದಸ್ಯ ಅಶೋಕ್ ಕುಮಾರ್ ಪುತ್ತಿಲ ಸ್ವಾಗತಿಸಿದರು. ಸುಂದರ ನಾಯ್ಕ ಬಿ.ಕೆ ವಂದಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು. ಸತೀಶ್, ಧನಂಜಯ ಕಲ್ಲಮ, ಅಮೃತ್ ರಾಜ್ ಕಲ್ಲಮ, ಜಗದೀಶ ಕಲ್ಲಮ, ಶಿವಪ್ಪ ಪಿ.ಕೆ., ನವೀನ್ ಶೆಟ್ಟಿಗಾರ್ ಹಿಂದಾರು, ಸಂತೋಷ ಕಡ್ಯ, ಚಂದ್ರಶೇಖರ ಕೆದಗೆದಡಿ, ನರೇಶ್ ಪುತ್ತಿಲ, ಅಶೋಕ್ ಕುಂಬಿಲ, ಅವಿನಾಶ್, ಪ್ರತೀಕ್ ಪುತ್ತಿಲ, ಮನೀಷ್ ಕರಮನೆಕಟ್ಟೆ, ಶ್ರೀಧರ ಪುತ್ತಿಲ, ಚಂದನ್, ಸತೀಶ್, ವಿವೇಕ್, ಸುಂದರ್ ನಾಯ್ಕ ಬಿ.ಕೆ. ಅತಿಥಿಗಳಿಗೆ ಶಾಲು ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು.

LEAVE A REPLY

Please enter your comment!
Please enter your name here