ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರ ಸಂಘದ ಅಧೃಷ್ಟ ಚೀಟಿ ವಿಜೇತರಿಗೆ ಬಹುಮಾನ ವಿತರಣೆ

0

ನೆಲ್ಯಾಡಿ: ಕಡಬ ತಾಲೂಕಿನ ಪ್ರಥಮ ಮಹಿಳಾ ಸಹಕಾರ ಸಂಘ, ನೆಲ್ಯಾಡಿಯಲ್ಲಿ ಮುಖ್ಯ ಕಚೇರಿ ಹೊಂದಿರುವ ಕಾಮುಧೇನು ಮಹಿಳಾ ಸಹಕಾರ ಸಂಘದ ಉದ್ಘಾಟನಾ ಸಮಾರಂಭದ ಪ್ರಯುಕ್ತ ಹಮ್ಮಿಕೊಂಡಿದ್ದ ಅದೃಷ್ಟ ಚೀಟಿಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.


ಸಂಘದ ಉದ್ಘಾಟನೆ ಪ್ರಯುಕ್ತ ಸೆ.9ರಿಂದ ಅ.10ರ ತನಕ ಸಂಘದಲ್ಲಿ ಉಳಿತಾಯ ಖಾತೆ ತೆರೆದ ಮಹಿಳೆಯರಿಗೆ ಅದೃಷ್ಟ ಚೀಟಿ ನೀಡಲಾಗಿತ್ತು. ಅ.10 ರಂದು ಗ್ರಾಹಕರ ಸಮ್ಮುಖದಲ್ಲಿ ಸಂಘದ ಮುಖ್ಯಕಚೇರಿಯಲ್ಲಿ ಇದರ ಡ್ರಾ ನಡೆಸಲಾಯಿತು. ಇದರಲ್ಲಿ ವಿಜೇತರಾದ ಸವಿತಾ ಜೆ, ಸ್ವಾತಿ ಕೆ, ಸೌದ ಬಾನು, ಯಶೋಧ ಕೆ ಹಾಗೂ ಮುಮ್ತಾಜ್‌ರವರಿಗೆ ನ.5ರಂದು ಸಂಘದ ಕಚೇರಿಯಲ್ಲಿ ಬಹುಮಾನ ವಿತರಿಸಲಾಯಿತು. ಸಂಘದ ಅಧ್ಯಕ್ಷೆ ಉಷಾ ಅಂಚನ್, ಉಪಾಧ್ಯಕ್ಷೆ ಮೇಘನ ಶೈನ್, ಸಂಘದ ನಿರ್ದೇಶಕರು, ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here