ಸವಣೂರು ಶಾಂತಿನಗರ ಅನ್ಸಾರುಲ್ ಮುಸ್ಲಿಂ ಯೂತ್ ಫೆಡರೇಶನ್; ಅಧ್ಯಕ್ಷರಾಗಿ ಮಹಮ್ಮದ್, ಕಾರ್ಯದರ್ಶಿ: ಹಮೀದ್, ಕೋಶಾಧಿಕಾರಿ: ಸಫೀಕ್

0

ಪುತ್ತೂರು: ಅನ್ಸಾರುಲ್ ಮುಸ್ಲಿಂ ಯೂತ್ ಫೆಡರೇಶನ್ ಶಾಂತಿನಗರ ಸವಣೂರು ಇದರ ಅಧ್ಯಕ್ಷರಾಗಿ ಮಹಮ್ಮದ್, ಕಾರ್ಯದರ್ಶಿಯಾಗಿ ಹಮೀದ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಫಾರೂಕ್ ಮಾಂತೂರು, ಜೊತೆ ಕಾರ್ಯದರ್ಶಿಯಾಗಿ ಗಫ್ಫಾರ್ ಶಾಂತಿನಗರ, ಸಂಘಟನಾ ಕಾರ್ಯದರ್ಶಿಯಾಗಿ ಕರೀಂ ಸಮಾಧಿ, ಕೋಶಾಧಿಕಾರಿಯಾಗಿ ಸಫೀಕ್ ಶಾಂತಿನಗರ ಆಯ್ಕೆಯಾಗಿದ್ದಾರೆ. ಸಮಿತಿ ಸದಸ್ಯರಾಗಿ ಕೆ.ಎಂ ಮಹಮ್ಮದ್, ಅಶ್ರಫ್ ಜನತಾ, ಅಶ್ರಫ್ ಉರ್ಸಾಗ್, ಮಜೀದ್ ಶಾಂತಿನಗರ, ಅಬೂಬಕ್ಕರ್ ಮಜಲು
ಕರೀಂ ಎಸ್.ಆರ್, ಸಬೀರ್ ಶಾಂತಿನಗರ, ರಫೀಕ್ ನೆಕ್ಕರೆ, ಮಹಮ್ಮದ್ ಬಾಬಾ ಮೊದಲಾದವರನ್ನೊಳಗೊಂಡ 15 ಮಂದಿ ಸದಸ್ಯರನ್ನು ನೇಮಕ ಮಾಡಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಗೌರವ ಸಲಹೆಗಾರರಾದ ರಝಾಕ್ ವಹಿಸಿದ್ದರು. ಯಾಕೂಬ್ ದಾರಿಮಿ ದುವಾ ನೆರವೇರಿಸಿದರು. ರಝಾಕ್ ಅಝ್‌ಹರಿ ಉದ್ಘಾಟಿಸಿದರು. ನಝೀರ್ ಸಿ.ಎ ಪ್ರಸ್ತಾವನೆಗೈದು ಶುಭ ಹಾರೈಸಿದರು. ಅಶ್ರಫ್ ಜನತಾ ವರದಿ ಮಂಡಿಸಿದರು.

ಅತಿಥಿಗಳಾಗಿ ರಫೀಕ್ ಎಂ.ಎ, ಕೆ ಎಂ ಮಹಮ್ಮದ್, ಮಹ್ಮದ್ ಬಸ್ತಿ, ಉಮ್ಮರ್ ಹಾಜಿ ಕೆನರಾ ಉಪಸ್ಥಿತರಿದ್ದರು. ನಝೀರ್ ಸಿ.ಎ ಸ್ವಾಗತಿಸಿದರು. ಅಶ್ರಫ್ ಜನತಾ ವಂದಿಸಿದರು.

LEAVE A REPLY

Please enter your comment!
Please enter your name here