ಇದೋ, ಮತ್ತೊಮ್ಮೆ ಬರುತ್ತಿದೆ..ಪುತ್ತೂರು, ಮರೀಲ್, ಬನ್ನೂರು ಚರ್ಚ್ ವ್ಯಾಪ್ತಿಯ ಕ್ರಿಕೆಟ್ ಪ್ರಿಯರಿಗೆ ಕ್ರಿಕೆಟ್ ಸುಗ್ಗಿ

0

ಜ.8: ಡೊನ್ ಬೊಸ್ಕೊ ಕ್ಲಬ್‌ನಿಂದ ಸೀಸನ್-2 `ಸಿಪಿಎಲ್-2022′

ಆರು ತಂಡಗಳು..ಮಾಲಕರು..

  • -ಸಿಝ್ಲರ್ ಸ್ಟ್ರೈಕರ್‍ಸ್-ರೋಶನ್ ರೆಬೆಲ್ಲೋ ಕಲ್ಲಾರೆ
  • -ಸೋಜಾ ಸೂಪರ್ ಕಿಂಗ್ಸ್-ದೀಪಕ್ ಮಿನೇಜಸ್ ದರ್ಬೆ
  • -ಕ್ರಿಶಲ್ ವಾರಿಯರ್‍ಸ್-ಕಿರಣ್ ಡಿ’ಸೋಜ/ಮೆಲ್ವಿನ್ ಪಾಸ್ ನೂಜಿ
  • -ಫ್ಲೈ ಝೋನ್ ಅಟ್ಯಾಕರ್ಸ್-
  • -ಪ್ರದೀಪ್ ವೇಗಸ್(ಬಾಬಾ) ಶಿಂಗಾಣಿ
  • -ಎಸ್.ಎಲ್ ಗ್ಲ್ಯಾಡಿಯೇಟರ್‍ಸ್-ಸಿಲ್ವೆಸ್ತರ್ ಡಿ’ಸೋಜ ಕೂರ್ನಡ್ಕ
  • -ಲೂವಿಸ್ ಕ್ರಿಕೆಟರ್‍ಸ್-ಓಸ್ವಾಲ್ಡ್ ಲೂವಿಸ್/ಲೆಸ್ಟರ್ ಲೂವಿಸ್ ಮರೀಲು

ಪುತ್ತೂರು: ಮಾಯಿದೆ ದೇವುಸ್ ಚರ್ಚ್, ಮರೀಲ್ ಸೆಕ್ರೇಡ್ ಹಾರ್ಟ್ ಚರ್ಚ್ ಹಾಗೂ ಬನ್ನೂರು ಸಂತ ಅಂತೋನಿ ಚರ್ಚ್ ವ್ಯಾಪ್ತಿಯ ಕ್ರಿಶ್ಚಿಯನ್ ಸಮುದಾಯದ ಕ್ರಿಕೆಟ್ ಆಟಗಾರರನ್ನೊಳಗೊಂಡ `ಕ್ರಿಶ್ಚಿಯನ್ ಪ್ರೀಮಿಯರ್ ಲೀಗ್(ಸಿಪಿಎಲ್)-2022′ ಇದರ ಸೀಸನ್-2 ಪಂದ್ಯಾಕೂಟವು ಜ.8 ರಂದು ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಐತಿಹಾಸಿಕ ಕ್ರೀಡಾಂಗಣದಲ್ಲಿ ಜರಗಲಿದೆ.

ಮಾಯಿದೆ ದೇವುಸ್ ಚರ್ಚ್‌ನ ಡೊನ್ ಬೊಸ್ಕೊ ಕ್ಲಬ್ ಸಂಘಟನೆಯು ಈ ಕ್ರಿಕೆಟ್ ಕೂಟವನ್ನು ಸಂಘಟಿಸುತ್ತಿದ್ದು, ಪುತ್ತೂರಿನಲ್ಲಿ ದ್ವಿತೀಯ ಬಾರಿಗೆ ಮೂರು ಚರ್ಚ್ ವ್ಯಾಪ್ತಿಯ ಕ್ರಿಶ್ಚಿಯನ್ ಆಟಗಾರರನ್ನೊಳಗೊಂಡ ಐಪಿಎಲ್ ಮಾದರಿಯಲ್ಲಿ ಸೀಮಿತ ಓವರ್‌ಗಳ ಓವರ್ ಆರ್ಮ್ ಟೆನ್ನಿಸ್ ಬಾಲ್ ಲೀಗ್ ಕ್ರಿಕೆಟ್ ಪಂದ್ಯಾಟ ಜರಗಲಿದೆ. ಸಂಘಟನೆಯು ಸಂಘಟಿಸಿದ ಪ್ರಥಮ ಆವೃತ್ತಿಗೆ ಕ್ರೀಡಾ ರಸಿಕರಿಂದ ಲಭಿಸಿದ ಭರಪೂರ ಪ್ರೋತ್ಸಾಹದ ಸುರಿಮಳೆಯಿಂದ ಯಶಸ್ವಿಯಾಗಿ ತೆರೆ ಕಂಡಿತ್ತು. ಇದೀಗ ಮತ್ತೊಮ್ಮೆ ಬಲಿಷ್ಟ ಆರು ತಂಡಗಳ ಮಧ್ಯೆ ಹಣಾಹಣಿ ನಡೆಯಲಿದ್ದು, ಪ್ರತೀ ತಂಡವು ತಂಡದ ಮಾಲಕರು ಹಾಗೂ ತಂಡದಲ್ಲಿ ತಲಾ ಈರ್ವರಂತೆ ಒಟ್ಟು 12 ಮಂದಿ ಐಕಾನ್ ಆಟಗಾರರನ್ನು ಹೊಂದಿದೆ. ಆಟಗಾರರು ಸಂಘಟಕರು ಸೂಚಿಸಿದ ಚರ್ಚ್‌ನಲ್ಲಿ ಕಡ್ಡಾಯವಾಗಿ ಹೆಸರನ್ನು ಹೊಂದಿರಬೇಕು. ಆಟಗಾರರು ತಮ್ಮ ಭಾವಚಿತ್ರದೊಂದಿಗೆ ತಾವು ಬಲಗೈ ಅಥವಾ ಎಡಗೈ ಬ್ಯಾಟರ್, ಬೌಲರ್ ಅಥವಾ ಅಲ್‌ರೌಂಡರ್ ಎಂಬುದನ್ನು ನವೆಂಬರ್ 12ರೊಳಗೆ ಸಂಘಟಕರು ನೀಡಿದ ಅರ್ಜಿ ಪತ್ರದಲ್ಲಿ ರೂ.100 ನೋಂದಾವಣೆ ಶುಲ್ಕದೊಂದಿಗೆ ಸೂಚಿಸಬೇಕಾಗಿದೆ.

ನ.26 ರಂದು ಬಿಡ್ಡಿಂಗ್ ಪ್ರಕ್ರಿಯೆ:

ಸಂಘಟಕರು ಆರಿಸಿದ ಬಲಿಷ್ಟ ಹನ್ನೆರಡು ಮಂದಿ ಐಕಾನ್ ಆಟಗಾರರಲ್ಲದೆ ನೋಂದಾವಣೆ ಮಾಡಿದಂತಹ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ಪಾಯಿಂಟ್ಸ್ ಆಧಾರದಲ್ಲಿ ನವೆಂಬರ್ 26 ರಂದು ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ಜರಗಲಿದೆ. ಈಗಾಗಲೇ ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುತ್ತಿದ್ದಾರೆ. ಆಯಾ ತಂಡಗಳಿಗೆ ಆಯ್ಕೆಯಾದಂತಹ ಆಟಗಾರರು ಜರ್ಸಿಯನ್ನು ಕಡ್ಡಾಯವಾಗಿ ಧರಿಸಿ ಆಡತಕ್ಕದ್ದು. ಪ್ರತೀ ತಂಡಕ್ಕೆ ಐದು ಬಾರಿ ಆಟವಾಡುವ ಅವಕಾಶವನ್ನು ಹೊಂದಲಾಗಿದ್ದು ಅಗ್ರ ನಾಲ್ಕು ತಂಡಗಳು ಪ್ಲೇ ಆಫ್ ಸುತ್ತಿಗೆ ತೇರ್ಗಡೆ ಹೊಂದುವ ಅರ್ಹತೆ ಹೊಂದುತ್ತದೆ. ಲೀಗ್, ಫ್ಲೇ ಆಫ್ ಸುತ್ತಿನಲ್ಲಿ ಕ್ವಾಲಿಫೈಯರ್, ಎಲಿಮಿನೇಟರ್ ಹಾಗೂ ಫೈನಲ್ ಸೇರಿದಂತೆ ಒಟ್ಟು 18 ಪಂದ್ಯಗಳು ನಡೆಯಲಿವೆ. ಫಿಲೋಮಿನಾದ ಎರಡು ಮೈದಾನಗಳಲ್ಲಿ ಏಕಕಾಲದಲ್ಲಿ ಪಂದ್ಯಗಳು ಜರಗಲಿವೆ.

ಆರು ತಂಡ/ಮಾಲಕರು:

ಆರು ತಂಡಗಳಾದ ಸಿಝ್ಲರ್ ಸ್ಟ್ರೈಕರ್‍ಸ್ ತಂಡಕ್ಕೆ ರೋಶನ್ ರೆಬೆಲ್ಲೋ ಕಲ್ಲಾರೆ, ಸೋಜಾ ಸೂಪರ್ ಕಿಂಗ್ಸ್ ತಂಡಕ್ಕೆ ಸೋಜಾ ಮೆಟಲ್ ಮಾರ್ಟ್‌ನ ದೀಪಕ್ ಮಿನೇಜಸ್ ದರ್ಬೆ, ಕ್ರಿಶಲ್ ವಾರಿಯರ್‍ಸ್ ತಂಡಕ್ಕೆ ಕ್ರಿಶಲ್ ಸ್ಟೀಲ್ಸ್‌ನ ಕಿರಣ್ ಡಿ’ಸೋಜ ಹಾಗೂ ಮೆಲ್ವಿನ್ ಪಾಸ್ ನೂಜಿ, ಫ್ಲೈ ಝೋನ್ ಅಟ್ಯಾಕರ್ಸ್ ತಂಡಕ್ಕೆ ಪ್ರದೀಪ್ ವೇಗಸ್(ಬಾಬಾ), ಎಸ್.ಎಲ್ ಗ್ಲ್ಯಾಡಿಯೇಟರ್‍ಸ್ ತಂಡಕ್ಕೆ ದರ್ಬೆ ಸಂತ ಲಾರೆನ್ಸ್ ಸಾ ಮಿಲ್‌ನ ಸಿಲ್ವೆಸ್ತರ್ ಡಿ’ಸೋಜ, ಲೂವಿಸ್ ಕ್ರಿಕೆಟರ್‍ಸ್ ತಂಡಕ್ಕೆ ಲೆಸ್ಟರ್ ಕೆಟರರ್‍ಸ್‌ನ ಓಸ್ವಾಲ್ಡ್ ಲೂವಿಸ್ ಹಾಗೂ ಲೆಸ್ಟರ್ ಲೂವಿಸ್ ಮರೀಲುರವರು ಮಾಲಕರಾಗಿ ಗುರುತಿಸಿಕೊಂಡಿದ್ದಾರೆ.

ಆಸಕ್ತ ಆಟಗಾರರು ನೋಂದಣಿ ಅರ್ಜಿಯನ್ನು ಕೋರ್ಟ್ ರಸ್ತೆಯ ವಿಶ್ವ ಸಂಕೀರ್ಣದಲ್ಲಿ ವ್ಯವಹರಿಸುತ್ತಿರುವ ಗ್ಲೋರಿಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಥವಾ ಕಾವೇರಿಕಟ್ಟೆ ಫಿಲೋಮಿನಾ ಕಾಲೇಜು ಕಟ್ಟಡದಲ್ಲಿನ ಏಂಜಲ್ ಸ್ಟೇಶನರಿಯಲ್ಲಿ ಪಡೆದುಕೊಳ್ಳಬಹುದು ಹಾಗೂ ಹೆಚ್ಚಿನ ಮಾಹಿತಿಗಾಗಿ ಪ್ರಕಾಶ್ ಸಿಕ್ವೇರಾ(9844171998), ಆಲನ್ ಮಿನೇಜಸ್(9945471178), ರಾಕೇಶ್ ಮಸ್ಕರೇನ್ಹಸ್(9686912316)ರವರನ್ನು ಸಂಪರ್ಕಿಸಬಹುದು ಎಂದು ಡೊನ್ ಬೊಸ್ಕೊ ಕ್ಲಬ್ ಅಧ್ಯಕ್ಷ ಫೆಬಿಯನ್ ಗೋವಿಯಸ್, ಕಾರ್ಯದರ್ಶಿ ಜೆರಾಲ್ಡ್ ಡಿ’ಕೋಸ್ಟ, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ಸಿಲ್ವೆಸ್ತರ್ ಗೊನ್ಸಾಲ್ವಿಸ್
ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

LEAVE A REPLY

Please enter your comment!
Please enter your name here