ನೆಹರುನಗರದಲ್ಲಿ ಮನೆಗೆ ಬೆಂಕಿ !

0

ಪುತ್ತೂರು: ನೆಹರು ನಗರದಲ್ಲಿ ಮನೆಯೊಂದಕ್ಕೆ ಬೆಂಕಿ ತಗುಲಿದ ಘಟನೆ ನ.8 ರಂದು ನಡೆದಿದೆ.
ನೆಹರುನಗರ ಪುಣ್ಯಕುಮಾರ ದೈವಸ್ಥಾನಕ್ಕೆ ಹೋಗುವ ರಸ್ತೆ ಬದಿಯ ಜಾನಕಿ ನಿವಾಸ ಪ್ರಶಾಂತ್ ಎಂಬವರ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕೀಟ್ ನಿಂದಾಗಿ ಆಕಸ್ಮಿಕ ಬೆಂಕಿ‌ ಕಾಣಿಸಿಕೊಂಡಿದ್ದು, ಘಟನೆಯಿಂದ ಮನೆಯೊಳಗಿನ ಫರ್ನಿಚರ್ ಗಳು, ಅಕ್ವೇರಿಯಮ್ ಸಹಿತ ಹಲವು ಉಪಕರಣಗಳು ಬೆಂಕಿಯ ಕೆನ್ನಾಲಿಗೆಗೆ ಸಿಕ್ಕಿ ಹಾನಿಗೊಂಡಿದೆ. ಘಟನಾ ಸ್ಥಳಕ್ಕೆ ಪುತ್ತೂರು ಅಗ್ನಿಶಾಮಕದಳ ತೆರಳಿ ಬೆಂಕಿಯನ್ನು ನಂದಿಸಿದ್ದಾರೆಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here