ನೂರರಷ್ಟು ಸಾಲ ಸೌಲಭ್ಯ ನೀಡಿರುವ ರೆನಾಲ್ಟ್‌…!

0

ಅಂತಾರಾಷ್ಟ್ರೀಯ ಮಟ್ಟದಲ್ಲೇ ಖ್ಯಾತಿ ಹೊಂದಿರುವಂಥ ಸಂಸ್ಥೆ – ಶ್ರೀ ಗಿರೀಶ್ ಮಳಿ

ಪುತ್ತೂರು: ಮಾರುಕಟ್ಟೆಗೆ ಎಷ್ಟೇ ಪ್ರಾಬಲ್ಯವಿರುವ ಬೇರೆ, ಬೇರೆ ಕಾರು ಕಂಪೆನಿಗಳು ಲಗ್ಗೆಯಿಟ್ಟರೂ ಅವುಗಳಿಗೆ ರೆನಾಲ್ಟ್‌ ಕಾರುಗಳು ಅಧಿಕೃತವಾಗಿ ಪೈಪೋಟಿ ನೀಡಬಲ್ಲದು. ಅಂತರಾಷ್ಟ್ರೀಯ ಮಟ್ಟದಲ್ಲಿ ಸೇವೆ ನೀಡಿ ತನ್ನ ಛಾಪು ಮೂಡಿಸಿರುವಂಥ ಕಂಪನಿಯು ಎಲ್ಲಾ ಮೂಲೆಯನ್ನು ತಲುಪಿ  ಸೇವೆ ನೀಡಿ ಇನ್ನಷ್ಟೂ ಬೆಳೆಯಲಿ ಎಂದು ಖ್ಯಾತ ನ್ಯಾಯವಾದಿ ಶ್ರೀ ಗಿರೀಶ್ ಮಳಿ ಹೇಳಿದರು. ನ.11 ರಂದು ರೆನಾಲ್ಟ್ ಇಂಡಿಯಾದ ಮಾರಾಟ, ಸೇವಾ ಸಂಸ್ಥೆ ಮಂಗಳೂರು ಕೂಳೂರು ಬಳಿ ಕಾರ್ಯಾಚರಿಸುತ್ತಿರುವ ಎನಾಕ್ ರೆನಾಲ್ಟ್ ಸಹಸಂಸ್ಥೆ ದರ್ಬೆ ಬೈಪಾಸ್ ಬಳಿಯ ಗುರುಪ್ರಸಾದ್ ಬಿಲ್ಡಿಂಗ್ ನಲ್ಲಿ ಕಾರ್ಯಾಚರಿಸುತ್ತಿರುವ ರೆನಾಲ್ಟ್‌ ಪುತ್ತೂರು ವತಿಯಿಂದ ಕಾರು ಪ್ರಿಯರಿಗಾಗಿ ಆಯೋಜಿಸಿದ್ದ ಎರಡು ದಿನಗಳ ಬೃಹತ್ ಮೆಗಾ ಎಕ್ಸ್‌ಚೇಂಜ್ ಮೇಳವನ್ನು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.

ಸಂಸ್ಥೆಯ ಮ್ಯಾನೇಜರ್ ಯಶೋಧ, ಸೇಲ್ಸ್ ಕನ್ಸಲ್ಟಂಟ್ ವಿಶಾಲ್, ರಾಕೇಶ್, ಸುನೀಲ್ ಹಾಗೂ ನಮೃತಾ ಸಹಿತ ಸಂಸ್ಥೆಯ ಗ್ರಾಹಕರು ಹಾಜರಿದ್ದರು. ಸೇಲ್ಸ್ ಕನ್ಸಲ್ಟಂಟ್ ವಿಶಾಲ್ ಮಾತನಾಡಿ, ಕಾರು ಪ್ರಿಯರಿಗಾಗಿ ಎರಡು ದಿನಗಳ ಬೃಹತ್ ಎಕ್ಸ್‌ಚೇಂಜ್ ಹಾಗೂ ಲೋನ್ ಮೇಳವನ್ನೂ ಅಯೋಜಿಸಿದ್ದು, ನೂರರಷ್ಟು ಸಾಲ ಸೌಲಭ್ಯ ವ್ಯವಸ್ಥೆಯನ್ನೂ ರೆನಾಲ್ಟ್‌ ಕಲ್ಪಿಸಿದೆ. ಇಷ್ಟೇಯಲ್ಲದೆ ಕಾರು ಪ್ರಿಯರು ಈ ವಿನಿಮಯ ಮೇಳ ಮೂಲಕ ವಿನೂತನ ರೆನಾಲ್ಟ್‌ ಕಾರುಗಳೊಡನೆ ತಮ್ಮ ಹಳೇಯ ಮಾದರಿ ಕಾರುಗಳನ್ನು ಅತ್ಯುತ್ತಮ ಬೆಲೆಯೊಂದಿಗೆ ಸುಲಭ ಸರಳ ಫೈನಾನ್ಸ್ ಹಾಗೂ ಅತೀ ಕಡಿಮೆ ಬಡ್ಡಿ ದರದೊಂದಿಗೆ ಖರೀದಿ ಮಾಡ ಬಹುದು. ಪ್ರತಿ ಮಾದರಿ ಕಾರಿನಲ್ಲೂ ಕೂಡ ಉಳಿತಾಯವಕಾಶವಿದ್ದು ಗ್ರಾಹಕರು ಈ ಮೇಳದ ಪ್ರಯೋಜನ ಪಡೆಯುವಂತೆ ಕೋರಿದರು.

ಕಾರು ಪ್ರಿಯರಿಗಾಗಿ ಹೆಸರಾಂತ ರೆನಾಲ್ಟ್‌ ,ವರ್ಷಾಂತ್ಯದ ಕೊಡುಗೆಯಾಗಿ ಯಾವುದೇ ಫಂಡಿಂಗ್ ಇಲ್ಲದೇ ನೂರರಷ್ಟು ಸಾಲ ಸೌಲಭ್ಯ ಹಾಗೂ ಹಳೇ ಕಾರಿನ ವಿನಮಯಕ್ಕೂ ಅವಕಾಶ ಒದಗಿಸಿಕೊಟ್ಟಿದ್ದು ನ.12 ಸಂಜೆ ಮಹೋತ್ಸವ ತೆರೆ ಕಾಣಲಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9606952876 ಕರೆ ಮಾಡಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here