ತಾ|ಮಟ್ಟದ ಕ್ರೀಡಾಕೂಟ: ಡಿಂಪಲ್ ಶೆಟ್ಟಿ ವೈಯುಕ್ತಿಕ ಚಾಂಪಿಯನ್

0

ಪುತ್ತೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಮತ್ತು ಸೈಂಟ್ ಜೋಕಿಮ್ ಕಡಬ ಇದರ ಆಶ್ರಯದಲ್ಲಿ ನ.9 ಮತ್ತು 10 ರಂದು ಕಡಬ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಕ್ರೀಡಾಕೂಟ ಕ್ರೀಡಾ ನಿಸರ್ಗ-2020-22 ಇದರಲ್ಲಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಡಿಂಪಲ್ ಶೆಟ್ಟಿ (ಮೇರ್ಲ ಉದಯ ಶೆಟ್ಟಿ ಮತ್ತು ಸುನೀತಾ ಶೆಟ್ಟಿ ದಂಪತಿಯ ಪುತ್ರಿ)ರವರು 100ಮೀ ಪ್ರಥಮ, 200ಮೀ ಪ್ರಥಮ, ಉದ್ದ ಜಿಗಿತ ದ್ವಿತೀಯ ಸ್ಥಾನ ಪಡೆದು ಒಟ್ಟು 13 ಅಂಕಗಳೊಂದಿಗೆ ಕ್ರೀಡಾಕೂಟದ ವೈಯಕ್ತಿಕ ಚಾಂಪಿಯನ್ ಪಡೆದು ನವೆಂಬರ್ 15 ಮತ್ತು 16  ರಂದು ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here