ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದಕ್ಷಿಣ ಕನ್ನಡ, ದಕ್ಷಿಣ ಕನ್ನಡ ಜಿಲ್ಲಾ ಯುವಜನ ಒಕ್ಕೂಟ, ಮಂಗಳೂರು ತಾಲೂಕು ಯುವಜನ ಒಕ್ಕೂಟ ಹಾಗೂ ಯುವಕ ಮಂಡಲ ದೇಲಂತಬೆಟ್ಟು ಇದರ ಸಂಯುಕ್ತ ಆಶ್ರಯದಲ್ಲಿ ನ.27ರಂದು ಬೆಳಿಗ್ಗೆ 8.30ಕ್ಕೆ ಶಿಬರೂರು ದೇಲಂತಬೆಟ್ಟು ಪದ್ಮಾವತಿ ಕಲಾ ಮಂದಿರದಲ್ಲಿ ನಡೆಯಲಿದೆ.
ಗುಂಪು ಸ್ಪರ್ಧೆಗಳು ವಿಭಾಗದಲ್ಲಿ ಜಾನಪದ ನೃತ್ಯ, ಜಾನಪದ ಗೀತೆ, ವೈಯಕ್ತಿಕ ಸ್ಪರ್ಧೆಗಳು ಏಕಾಂಕ ನಾಟಕ (ಕನ್ನಡ, ಇಂಗ್ಲಿಷ್ ಮತ್ತು ಹಿಂದಿ),ಶಾಸ್ತ್ರೀಯ ಗಾಯನ(ಕರ್ನಾಟಕ, ಹಿಂದೂಸ್ತಾನಿ), ಶಾಸ್ತ್ರೀಯ ವಾದ್ಯಗಳ ವಿಭಾಗದಲ್ಲಿ ಸಿತಾರ್, ಕೊಳಲು, ವೀಣೆ, ತಬಲಾ, ಮೃದಂಗ. ಶಾಸ್ತ್ರೀಯ ನೃತ್ಯ ವಿಭಾಗದಲ್ಲಿ ಭರತನಾಟ್ಯ, ಓಡಿಸ್ಸಿ, ಮಣಿಪುರಿ, ಕೂಚುಪುಡಿ, ಕಥಕ್. ಹಾರ್ಮೋನಿಯಂ, ಗಿಟಾರ್, ಆಶುಭಾಷಣ ಸ್ಪರ್ಧೆ(ಕನ್ನಡ, ಇಂಗ್ಲಿಷ್, ಹಿಂದಿ) ನಡೆಯಲಿದೆ.
ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಕಡ್ಡಾಯವಾಗಿ ದಕ್ಷಿಣ ಕನ್ನಡ ಜಿಲ್ಲೆಯವರಾಗಿರಬೇಕು/ಜಿಲ್ಲೆಯಲ್ಲಿ ವಾಸವಾಗಿರಬೇಕು. ಸ್ಪರ್ಧಾಳುಗಳು 15ರಿಂದ 29ವರ್ಷ ವಯೋಮಾನದವರಾಗಿದ್ದು ಕಡ್ಡಾಯವಾಗಿ ಜನ್ಮ ದಿನಾಂಕ ದೃಢೀಕರಣ ದಾಖಲೆಯೊಂದಿಗೆ (ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ/ಜನನ ಪ್ರಮಾಣ ಪತ್ರ/ಆಧಾರ್ ಕಾರ್ಡು)ಭಾಗವಹಿಸಬಹುದು. ದಾಖಲೆಗಳನ್ನು ಹಾಜರುಪಡಿಸದಿದ್ದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಪ್ರಯಾಣ ಭತ್ಯೆಯನ್ನು ನೀಡುವ ಸಂಬಂಧ ಸ್ಪರ್ಧಾಳುಗಳು ತಮ್ಮ ಹೆಸರಿನಲ್ಲಿರುವ ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿಯನ್ನು ತಪ್ಪದೇ ತರತಕ್ಕದು. ಜಿಲ್ಲಾ ಮಟ್ಟದಲ್ಲಿ ವಿಜೇತರಾದವರು ರಾಜ್ಯಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ 9164502107 ಸಂಪರ್ಕಿಸಬಹುದು ಎಂದು ಪುತ್ತೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೇಲ್ವಿಚಾರಕ ಶ್ರೀಕಾಂತ್ ಪೂಜಾರಿ ಬಿರಾವು ತಿಳಿಸಿದ್ದಾರೆ.