ಮಿತ್ತೂರು ಹಿ.ಪ್ರಾ ಶಾಲೆಯಲ್ಲಿ ಮಕ್ಕಳ ಸಂಭ್ರಮ 2022, ನೂತನ ಕೊಠಡಿಯ ಶಿಲಾನ್ಯಾಸ ಸಮಾರಂಭ

0

ಇಡ್ಕಿದು : ಗ್ರಾಮದ ಮಿತ್ತೂರು ಹಿ.ಪ್ರಾ ಶಾಲೆಯಲ್ಲಿ ಇಲ್ಲಿ ಮಕ್ಕಳ ಸಂಭ್ರಮ 2022 ಹಾಗೂ ನೂತನ ಕೊಠಡಿಯ ಶಿಲಾನ್ಯಾಸವನ್ನು ಶಾಸಕ ಸಂಜೀವ ಮಠಂದೂರುರವರು ನೆರವೇರಿಸಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಪುತ್ತೂರು ಸಿಟಿಯ ಅಧ್ಯಕ್ಷರಾದ ಪ್ರಶಾಂತ್ ಶೆಣೈ, ಉದ್ಯಮಿಗಳು ಹಾಗೂ ಹಿರಿಯ ವಿದ್ಯಾರ್ಥಿಗಳಾದ ವಲೇರಿಯನ್ ಡಿಸೋಜ , ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಸುಧಾಕರ ಶೆಟ್ಟಿ ಬೀಡಿನಮಜಲು , ಇಡ್ಕಿದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿನಿವೃತ್ತ ಶಿಕ್ಷಕರಾದ ಯೂಸುಫ್ ಮಾಸ್ಟರ್ , ಪಂಚಾಯತ್ ಸದಸ್ಯರುಗಳಾದ ರಮೇಶ್ ಪೂಜಾರಿ ,ಸಂಜೀವ ಪೂಜಾರಿ, ಜಯಂತಿ , ಶೋಭಾ , ಶಿಕ್ಷಣ ಸಂಯೋಜಕರಾದ ಸುಧಾ, ಪ್ರತಿಮಾ , ಸಮೂಹ ಸಂಪನ್ಮೂಲ ವ್ಯಕ್ತಿ ಜ್ಯೋತಿ ಡಿ , ಹಿರಿಯ ವಿದ್ಯಾರ್ಥಿ ತಾರನಾಥ, ಮಲ್ಲಿಕಾ , ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾದ ಆದಂ ಎಂಎಂಎಸ್, ಮುಖ್ಯೋಪಾದ್ಯಾಯಿನಿ ಸರೋಜಾ ಎ. ಉಪಸ್ಥಿತರಿದ್ದರು. ಉಜಿರೆಯಲ್ಲಿ ಮೆಸ್ಕಾಂ ಸಹಾಯಕ ಇಂಜಿನಿಯರ್ ಆಗಿರುವ ವಸಂತ ಟಿ., ಪ್ಲೇವಿ ಮೈಕಲ್ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here